ಸುದೀಪ್ ಹುಟ್ಟುಹಬ್ಬವನ್ನ ವಿಶೇಷವಾಗಿಸಿದ ಗಣೇಶ್-ರವಿಶಂಕರ್ ಗೌಡ

Recommended Video

ಸುದೀಪ್ ಹುಟ್ಟುಹಬ್ಬವನ್ನ ವಿಶೇಷವಾಗಿಸಿದ ಗಣೇಶ್ | FILMIBEAT KANNADA

ಅಭಿನಯ ಚಕ್ರವರ್ತಿ ಸುದೀಪ್ ಇಂದು 45ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಸುದೀಪ್ ಅವರ ಜೆಪಿ ನಗರದ ನಿವಾಸದ ಬಳಿ ಬಂದು ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಚಿತ್ರರಂಗದ ಬಹುತೇಕರು ಕೂಡ ಮಾಣಿಕ್ಯನ ಬರ್ತಡೇಗೆ ಶುಭಕೋರಿದ್ದಾರೆ.

ಪ್ರೇಮ್, ರಕ್ಷಿತಾ, ಅನೂಪ್ ಭಂಡಾರಿ, ಸಿಂಪಲ್ ಸುನಿ, ಚಿರು ಸರ್ಜಾ, ಸತೀಶ್ ನೀನಾಸಂ, ಕೃಷಿ ತಾಪಂಡ, ರಾಗಿಣಿ, ನಿಶ್ವಿಕಾ, ಪಾರೂಲ್ ಹೀಗೆ ಅನೇಕರು ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ಕಿಚ್ಚನಿಗೆ ಶುಭಾಶಯ ತಿಳಿಸಿದ್ದಾರೆ.

Ganesh Makes Special To Sudeep Birthday

ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿನ್ನೆ ರಾತ್ರಿಯೇ ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ನಟ ಗಣೇಶ್, ರವಿಶಂಕರ್ ಗೌಡ, ಸುದೀಪ್ ಪತ್ನಿ ಪ್ರಿಯಾ ಸೇರಿದಂತೆ ಕುಟುಂಬಸ್ಥರು ಈ ಸಂದರ್ಭದಲ್ಲಿದ್ದರು.

ಕೇಕ್ ಕತ್ತರಿಸುವ ಮೂಲಕ ಜನುಮದಿನ ಆಚರಿಸಿಕೊಂಡ ಸುದೀಪ್ ಅವರಿಗೆ, ಗಣೇಶ್ ಮತ್ತು ರವಿಶಂಕರ್ ಗೌಡ ಹಾಡು ಹೇಳುವುದರ ಮೂಲಕ ವಿಶ್ ಮಾಡಿದ್ದು ವಿಶೇಷವಾಗಿತ್ತು.

ಈ ಸುದಿನ....ನಿನ್ನ ಜನುಮದಿನ....ಹಾಡಿನ ಎರಡು ಸಾಲನ್ನ ರವಿಶಂಕರ್ ಗೌಡ ಮತ್ತು ಗಣಿ ಇಬ್ಬರು ಸೇರಿ ಹಾಡಿದರು. ಶಂಕರ್ ನಾಗ್ ನಟಿಸಿದ್ದ 'ಮಾನವ ದಾನವ' ಚಿತ್ರದ ಸೂಪರ್ ಹಿಟ್ ಹಾಡಿದು.

More from Filmibeat

English summary
Ganesh and Ravishankar Gowda made Sudeep's birthday special by singing 'Ee Sudina Ninna Januma Dina' song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X