For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 'ಕವಚ' ಎದುರು ಗಣೇಶ್ 'ಆರೆಂಜ್'.!

  |

  ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದೊಡ್ಡ ಚಿತ್ರಮೇಳ ನಡೆಯಲಿದೆ. ಒಂದೇ ದಿನ ಎರಡು ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗಲಿದೆ. ಈಗಾಗಲೇ ಡಿಸೆಂಬರ್ 21 ರಂದು ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ತೆರೆಕಾಣಲಿದೆ. ಅದೇ ದಿನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಥಿಯೇಟರ್ ಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

  ಈ ಮಧ್ಯೆ ಮತ್ತೊಂದು ಕ್ಲಾಶ್ ಆಗುವ ಲಕ್ಷಣ ಕಾಣುತ್ತಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಿತ್ರಗಳು ಮುಖಾಮುಖಿಯಾಗುವ ಸುಳಿವು ಸಿಕ್ಕಿದೆ.

  ತಮಿಳಿಗೆ ಸೇಲ್ ಆಯ್ತು 'ಟಗರು': ಶಿವಣ್ಣ-ಡಾಲಿ ಪಾತ್ರದಲ್ಲಿ ಯಾರು.?

  ಗಣೇಶ್ ಅಭಿನಯದ 'ಆರೆಂಜ್' ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗಿದ್ದು, ಡಿಸೆಂಬರ್ 7 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಕಾಕತಾಳೀಯ ಅಂದ್ರೆ, ಅದೇ ವಾರ ಶಿವಣ್ಣ ಅಭಿನಯದ 'ಕವಚ' ಬರಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಎರಡು ಸಿನಿಮಾಗಳು ಒಂದೇ ದಿನ ಚಿತ್ರಮಂದಿರಕ್ಕೆ ಬಂದ್ರೆ, ಪ್ರೇಕ್ಷಕರಲ್ಲಿ ಗೊಂದಲವಾಗುತ್ತೆ. ಯಾವ ಸಿನಿಮಾ ನೋಡಬೇಕು ಎಂಬ ಕನ್ ಫ್ಯೂಸನ್ ಬರುತ್ತೆ.

  ಶಿವಣ್ಣ-ದ್ವಾರಕೀಶ್ ಜೋಡಿಯ ಹೊಸ ಚಿತ್ರ ಆರಂಭ

  'ಆರೆಂಜ್' ಚಿತ್ರವನ್ನ ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಹಿಂದೆ ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಷನ್ ನಲ್ಲಿ 'ಜೂಮ್' ಸಿನಿಮಾ ಬಂದಿತ್ತು.

  ಇನ್ನು ಮಲಯಾಳಂನ 'ಒಪ್ಪಂ' ಚಿತ್ರದ ಕನ್ನಡ ರೀಮೇಕ್ 'ಕವಚ'. ಶಿವಣ್ಣ ಈ ಚಿತ್ರದಲ್ಲಿ ಕುರುಡನ ಪಾತ್ರ ನಿರ್ವಹಿಸಿದ್ದಾರೆ. ಜಿ.ವಿ.ಆರ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಇಶಾ ಕೊಪ್ಪಿಕಾರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

  English summary
  Seems like Orange starring Ganesh is set to see a box office clash with Shiva rajkumar starrer Kavacha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X