»   » ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು

ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು

Posted By:
Subscribe to Filmibeat Kannada

ಯೋಗರಾಜ್ ಭಟ್ಟರ ಮುಂಗಾರು ಮಳೆ ನಂತರ ಮತ್ತೊಮ್ಮೆ ಮಳೆ ಸುರಿಸಲು ಶಶಾಂಕ್ ಅವರು ಸಿದ್ಧರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡುವ ಸಾಧ್ಯತೆ ಕಂಡು ಬಂದಿದೆ. ಮುಂಗಾರುಮಳೆ 2 ಟೀಸರ್ ಭಾನುವಾರ ಬಿಡುಗಡೆಯಾಗಿದೆ. ಮೊದಲ ನೋಟಕ್ಕೆ ಹಲವರಿಗೆ ಮೆಚ್ಚುಗೆಯಾಗಿದ್ದರೆ, ಮತ್ತೆ ಕೆಲವರಿಗೆ

ಮುಂಗಾರು ಮಳೆ ಅಂದ ತಕ್ಷಣ ಸಿನಿರಸಿಕರಲ್ಲಿ ಏನೇನು ಪ್ರಶ್ನೆ ಮೂಡುತ್ತದೆ ಎಂಬುದನ್ನು ಊಹಿಸಿ, ಶಶಾಂಕ್ ಅವರು ಈ ಪ್ರಶ್ನೆಗಳನ್ನು ಸ್ಯಾಂಡಲ್ ವುಡ್ ಸ್ಟಾರ್ ಗಳ ಬಾಯಲ್ಲಿ ಕೇಳಿಸಿದ್ದಾರೆ. ಇದು ಮುಂಗಾರು ಮಳೆ ಚಿತ್ರದ ಮುಂದುವರೆದ ಭಾಗ ಇರಬಹುದಾ? ದೇವದಾಸ್ ಮೊಲ ಇರುತ್ತಾ? ಇದು ಹ್ಯಾಪಿ ಎಂಡಿಂಗಾ? ಮುಂತಾದ ಕುತೂಹಲದ ಪ್ರಶ್ನೆಗಳನ್ನು ಹೊತ್ತ ಟೀಸರ್ ಇಲ್ಲಿದೆ.

Ganesh, Ravichandran's 'Mungaru Male 2'Teaser released

ಮುಂಗಾರು ಮಳೆ-2 ಚಿತ್ರದ ಟೀಸರ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ಯಶ್ ಮಾತನಾಡಿದ್ದಾರೆ. ಪ್ರೇಕ್ಷಕರ ಮನದಲ್ಲಿ ಮೂಡುವ ಕುತೂಹಲದ ಪ್ರಶ್ನೆಗಳನ್ನು ಕೇಳಿದ್ದಾರೆ.  ಗಣೇಶ್ ಹಾಗೂ ರವಿಚಂದ್ರನ್ ಅಲ್ಲದೆ ಐಂದ್ರಿತಾ ರೇ, ನೇಹಾ ಶೆಟ್ಟಿ, ಶಿಲ್ಪಾ ಮಂಜುನಾಥ್, ರವಿಶಂಕರ್, ಸಾಧು ಕೋಕಿಲ, ತಬ್ಲಾ ನಾಣಿ ಮುಂತಾದವರು ಚಿತ್ರದಲ್ಲಿದ್ದಾರೆ.

ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು

ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು

-
-
-
-
-
-
-
-
-
-
-
-
-
-
-
-
-
-

ಸುಂದರ ಲೊಕೇಷನ್ ಗಳಲ್ಲಿ ಚಿತ್ರೀಕರಿಸಿರುವ ಮುಂಗಾರು ಮಳೆ 2 ರ ಎರಡು ನಿಮಿಷಗಳ ಟೀಸರ್ ಹೇಗಿದೆ ನೀವೆ ನೋಡಿ ಆನಂದಿಸಿ... ಮುಂಗಾರು ಮಳೆ ಟೀಸರ್ ನಲ್ಲಿ ಕಂಡ ಪ್ರಮುಖ ಸ್ಕ್ರೀನ್ ಶಾಟ್ ನಿಮ್ಮ ಮುಂದೆ...
English summary
Golden Star Ganesh and Crazy Star Ravichandran's "Mungaru Male 2" Teaser released on Sunday( June 5). The movie has been written and directed by Shashank of 'Krishna-Leela fame. This movie also features Aindrita Ray, Neha Shetty, Shilpa Manjunath, Ravi Shankar, Sadhu Kokila, Tabla Nani and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada