Just In
Don't Miss!
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- News
ಅಮಿತ್ ಶಾ ಬಳಿ ಸ್ಪಷ್ಟನೆ ಕೇಳಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್!
- Finance
ಸ್ಟಾರ್ಟ್ ಅಪ್ ಗಳಿಗೆ 1000 ಕೋಟಿ ರು. ಸೀಡ್ ಫಂಡ್ ಘೋಷಣೆ ಮಾಡಿದ ಪ್ರಧಾನಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು' ಎನ್ನುತಾ 'ತ್ರಿಬಲ್ ರೈಡಿಂಗ್' ಹೊರಟ ಗಣೇಶ್
'ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು...' ಈ ಹಾಡು ಯಾರು ತಾನೆ ಕೇಳಿಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಎವರನ್ ಗ್ರೀನ್ ಸಿನಿಮಾ 'ಯುಗಪುರುಷ' ಚಿತ್ರದ ಹಾಡು. 1989ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡಿತ್ತು.
ಗಾನಪ್ರಿಯರ ನೆಚ್ಚಿನ ಹಾಡುಗಳಲ್ಲಿ ಒಂದಾಗಿರುವ ಈ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ನೆನಪಿಸಿಕೊಂಡಿದ್ದಾರೆ. ಯುಗಪುರುಷ ಸಿನಿಮಾ ನೆನಪನ್ನು ಗಣೇಶ್ ಮೆಲುಕು ಹಾಕಿದ್ದಾರೆ ಗಣೇಶ್. ಗಣೇಶ್ ಸದ್ಯ ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಯುಗಪುರುಷ ಸಿನಿಮಾದ ಚಿತ್ರೀಕರಣ ನಡೆದ ಸ್ಥಳದಲ್ಲಿ ನಡೆಯುತ್ತಿದೆ. ಮುಂದೆ ಓದಿ..
ಗಣೇಶ್ ಸಿನಿಮಾದ ಮೂರು ಚೆಲುವೆಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ

ಯುಗಪುರುಷ ಸನಿಮಾದ ಮದರ್ ಮೇರಿ ಪ್ರತಿಮೆ ಬಳಿ ಗಣೇಶ್
'ಯುಗಪುರುಷ' ಸಿವಿಮಾದಲ್ಲಿ ಎಂದಿಗೂ ನೆನಪಿನಲ್ಲಿ ಇರುವ ಲೊಕೇಶನ್ ಎಂದರೆ ಮದರ್ ಮೇರಿ ಪ್ರತಿಮೆ. ಈ ಪ್ರತಿಮೆ ಮುಂದೆ ನಿಂತು ಗಣೇಶ್ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಪ್ರತಿಮೆ ಇರುವುದು ಚಿಕ್ಕಮಗಳೂರಿನ ಕೆಳಬಾವಿ ಎಸ್ಟೇಟ್ ಬಳಿ. ಇಂದಿಗೂ ಈ ಪ್ರತಿಮೆ ಪ್ರಸಿದ್ಧಿ ಪಡೆದಿದೆ.

ತ್ರಿಬಲ್ ರೈಡಿಂಗ್ ಶೂಟಿಂಗ್ ನಲ್ಲಿ ಗೋಲ್ಡನ್ ಸ್ಟಾರ್
ಅಲ್ಲೇ ಪಕ್ಕದಲ್ಲಿ ತ್ರಿಬಲ್ ರೈಡಿಂಗ್ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸ್ಥಳದ ನೆನಪನ್ನು ಹಂಚಿಕೊಂಡಿದ್ದಾರೆ ಗಣೇಶ್. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗಣೇಶ್, ಬಾಲ್ಯದಲ್ಲಿ ಯುಗಪುರುಷ ಸಿನಿಮಾವನ್ನು ನೋಡಿದ ನೆನಪಾಯಿತು ಎಂದು ಹೇಳಿದ್ದಾರೆ.
ಜರ್ಮನ್ ಕನ್ನಡಿಗನನ್ನು ಭೇಟಿಯಾದ 'ಕನ್ನಡಿಗ' ರವಿಚಂದ್ರನ್

ಬಾಲ್ಯದಲ್ಲಿ ಸಿನಿಮಾ ನೋಡಿದ ನೆನಪಾಯಿತು
'ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು.. ಯುಗಪುರುಷ. ತ್ರಿಬಲ್ ರೈಡಿಂಗ್ ಚಿತ್ರೀಕರಣ ಮಾಡುವಾಗ ಈ ಸ್ಥಳ ನೋಡಿ ಬಾಲ್ಯದಲ್ಲಿ ಯುಗಪುರಷ VCPಯಲ್ಲಿ ನೋಡಿದ ನೆನಪಾಯಿತು' ಎಂದು ಬರೆದುಕೊಂಡಿದ್ದಾರೆ.

ತ್ರಿಬಲ್ ರೈಡಿಂಗ್ ಬಗ್ಗೆ
ಅಂದಹಾಗೆ ತ್ರಿಬಲ್ ರೈಡಿಂಗ್ ಸಿನಿಮಾಗೆ ಮಹೇಶ್ ಗೌಡ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಮೂವರು ಕಾಣಿಸಿಕೊಕೊಳ್ಳುತ್ತಿದ್ದಾರೆ. ಕಿರುತೆರೆ ನಟಿ ಮೇಘಾ ಶೆಟ್ಟಿ, ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ರಚನಾ ಇಂದರ್ ಮತ್ತು ಅದಿತಿ ಪ್ರಭುದೇವ.