Baanadariyalli Trailer: 'ಬಾನ ದಾರಿಯಲ್ಲಿ' ಪ್ರೀತಿಸಿದವಳನ್ನು ಕಳೆದುಕೊಂಡ ಪ್ರೀತಂ ಭಾವನಾತ್ಮಕ ಪಯಣ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ದಿಢೀರನೆ ಸಿನಿಮಾ ರಿಲೀಸ್ ಡೇಟ್ ಕೂಡ ಬದಲಾಗಿದೆ. ನಗರದ ಮಂತ್ರಿ ಮಾಲ್‌ನಲ್ಲಿ ಈ ರೊಮ್ಯಾಂಟಿಕ್ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೀತು. ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ಸಿನಿಮಾಗಳನ್ನು ನೆನಪಿಸುವಂತೆ ಬಹಳ ಅದ್ಧೂರಿಯಾಗಿ 'ಬಾನ ದಾರಿಯಲ್ಲಿ' ಸಿನಿಮಾ ಕಟ್ಟಿಕೊಡಲಾಗಿದೆ. ಕೀನ್ಯಾದಲ್ಲಿ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರ ಪ್ರೀತಂ ಪಾತ್ರದಲ್ಲಿ ನಟಿಸಿದ್ದು ರುಕ್ಮಿಣಿ ಸ್ವಿಮ್ಮಿಂಗ್ ಕೋಚ್ ಲೀಲಾ ಆಗಿ ಮಿಂಚಿದ್ದಾರೆ. ಲೀಲಾಳನ್ನು ನೋಡಿ ಪ್ರೀತಂ ಪ್ರೀತಿಲಿ ಬೀಳುತ್ತಾನೆ. ಆದರೆ ಅವನ ಪ್ರೀತಿ ಸಿಗುತ್ತಾ? ಪ್ರೀತಿ ಸಿಗುವ ಬದಲು ಪ್ರೀತಿಸಿದವಳೇ ದೂರಾಗುವುದು ಯಾಕೆ? ಪ್ರೀತಂ ಬಾಳಲ್ಲಿ ಬರುವ ಮತ್ತೊಬ್ಬ ಹುಡುಗಿ ಯಾರು? ಅನ್ನೋದನ್ನು ತೆರೆಮೇಲೆ ನೋಡಬೇಕು.

Ganesh-Baana-dariyalli-Trailer

ಮಾಮೂಲಿಯಂತೆ ಗಣೇಶ್ ಸಿನಿಮಾಗಳಲ್ಲಿ ಕಾಣ ಸಿಗುವ ಲವ್, ತರಲೆ, ತಮಾಷೆ, ನೋವು 'ಬಾನ ದಾರಿಯಲ್ಲಿ' ಚಿತ್ರದಲ್ಲೂ ಕಾಣಿಸುತ್ತಿದೆ. ಕೀನ್ಯಾದ ಮಸೈ ಮರಾದಲ್ಲಿ ಸೆರೆ ಹಿಡಿದಿರುವ ಸನ್ನಿವೇಶಗಳು ಕಣ್ಣಿಗೆ ಹಬ್ಬ ಎನ್ನುವಂತಿದೆ. ರಂಗಾಯಣ ರಘು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಪ್ರೀತಂ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ.

ಗಣಿ- ಪ್ರೀತಂ ಕಾಂಬಿನೇಷನ್‌ನಲ್ಲಿ ಈಗಾಗಲೇ 3 ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿವೆ. ಈ ಜೋಡಿಯ 4ನೇ ಸಿನಿಮಾ 'ಬಾನ ದಾರಿಯಲ್ಲಿ'. ಸದ್ಯ ರಿಲೀಸ್ ಆಗಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರುಕ್ಮಿಣಿ ವಸಂತ್ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 'ಬಾನ ದಾರಿಯಲ್ಲಿ' ಚಿತ್ರದಲ್ಲೂ ಅಂಥದ್ದೇ ಪರ್ಫಾರ್ಮನ್ಸ್ ನಿರೀಕ್ಷಿಸಲಾಗುತ್ತಿದೆ. ಟ್ರೈಲರ್‌ನ ಬಹಳ ಸೊಗಸಾಗಿ ಕಟ್ ಮಾಡಲಾಗಿದೆ. ಸಿನಿಮಾ ನೋಡ್ಲೇಬೇಕು ಎನ್ನುವ ನಿರೀಕ್ಷೆ ಹುಟ್ಟುಹಾಕಿದೆ.

Ganesh-Baana-dariyalli-Trailer

ಅರ್ಜುನ್ ಜನ್ಯಾ ಸಂಗೀತ 'ಬಾನ ದಾರಿಯಲ್ಲಿ' ಚಿತ್ರಕ್ಕಿದೆ. "ಪ್ರೀತಿ ಕಳ್ಕೊಂಡರೆನೆ ತುಂಬಾ ಕಷ್ಟ ಅಂತ ಹೇಳ್ತಾರೆ.. ಇನ್ನು ಪ್ರೀತಿಸಿದ್ದ ಹುಡುಗಿ ಕಳ್ಕೊಂಡು ಬದ್ಕೋದು ಹೇಗೆ?" ಎನ್ನುವ ಡೈಲಾಗ್ ಟ್ರೈಲರ್‌ನಲ್ಲಿ ಹೈಲೆಟ್ ಎನಿಸಿಕೊಂಡಿದೆ. ಪ್ರೀತ ಜಯರಾಂ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗುವ ಸುಳಿವು ಸಿಗುತ್ತಿದೆ.

ಅಂದಹಾಗೆ 'ಬಾನ ದಾರಿಯಲ್ಲಿ' ಸಿನಿಮಾ ರಿಲೀಸ್ ಡೇಟ್ ಬದಲಾಗಿದೆ. 2 ವಾರ ತಡವಾಗಿ ಸಿನಿಮಾ ಥಿಯೇಟರ್‌ಗೆ ಬರ್ತಿದೆ. ಸೆಪ್ಟೆಂಬರ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ದಿಢೀರನೆ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುವ ಸುಳಿವು ಸಿಕ್ಕಿದೆ. ಹಾಗಾಗಿ 'ಸಲಾರ್' ಸಿನಿಮಾ ಬರಬೇಕಿದ್ದ ಸೆಪ್ಟೆಂಬರ್ 28ಕ್ಕೆ ಗಣಿ ಪ್ರೇಮ್‌ ಕಹಾನಿ ಬರಲಿದೆ.

More from Filmibeat

English summary
Ganesh, Rukmini Vasanth's Baanadariyalli Trailer out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X