ಪ್ರೇಕ್ಷಕರಿಗೆ 'ಚಮಕ್' ಕೊಟ್ಟು ಕೋಟಿ ಕೋಟಿ ಬಾಚಿದ ಗೋಲ್ಡನ್ ಸ್ಟಾರ್

By Pavithra

ಕೆಲವೇ ಕೆಲವು ಸೆಕೆಂಡ್ ಗಳ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಸಖತ್ ಚಮಕ್ ನೀಡಿದ ಚಿತ್ರತಂಡ ಕೊನೆಗೂ ಸಕ್ಸಸ್ ನಗೆ ಬೀರಿದೆ. ವರ್ಷದ ಕೊನೆಯ ಸಿನಿಮಾವಾಗಿ ಬಿಡುಗಡೆ ಆಗಿರುವ ಚಮಕ್ ಸಿನಿಮಾ ರಾಜ್ಯಾದಂತ್ಯ ಭರ್ಜರಿ ಗೆಲುವು ಕಾಣುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಕಾಂಬಿನೇಶನ್ ನ ಮೊದಲ ಚಿತ್ರ ಇದಾಗಿದ್ದು ಸಿಂಪಲ್ ಸುನಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಟಿ ಆರ್ ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಸಿಂಪಲ್ ಆಗಿರುವ ಮ್ಯಾರೆಜ್ ಸ್ಟೋರಿಯನ್ನ ಪ್ರೇಕ್ಷಕರ ಮುಂದಿಟ್ಟು ನಿರ್ದೇಶಕ ಸುನಿ ಅಂಡ್ ಟೀಂ ಕೋಟಿ ಕೋಟಿ ಹಣ ಬಾಚುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿರುವ ಚಮಕ್ ಸಿನಿಮಾ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಸೂಚನೆ ನೀಡುತ್ತಿದೆ. ನಾಲ್ಕು ದಿನಕ್ಕೆ ಚಮಕ್ ಚಿತ್ರ ಗಳಿಸಿದ ಹಣವಷ್ಟು? ಮುಂದೆ ಓದಿ

ನಾಲ್ಕು ದಿನಕ್ಕೆ ಆರು ಕೋಟಿ

ನಾಲ್ಕು ದಿನಕ್ಕೆ ಆರು ಕೋಟಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾ ಕಲೆಕ್ಷನ್ ಬಾರಿ ಜೋರಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಚಮಕ್ ಸಿನಿಮಾ ಸದ್ದು ಮಾಡುತ್ತಿದೆ. ಗಣೇಶ್ ಚಿತ್ರಕ್ಕೆ ಹಣ ಹಾಕಿದ ನಿರ್ಮಾಪಕರಿಗೆ ಗೋಲ್ಡನ್ ಟೈಂ ಶುರುವಾಗಿದೆ. ಚಿತ್ರ ಬಿಡುಗಡೆಯಾದ ನಾಲಕ್ಕೇ ದಿನಕ್ಕೆ 6 ಕೋಟಿ 18 ಲಕ್ಷ ಹಣ ಗಳಿಸಿದೆ.

ಮುಂದುವರೆದ ಹೌಸ್ ಫುಲ್ ಪ್ರದರ್ಶನ

ಮುಂದುವರೆದ ಹೌಸ್ ಫುಲ್ ಪ್ರದರ್ಶನ

ಚಮಕ್ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನವಾಯ್ತು ಇಂದಿಗೂ ರಾಜ್ಯದ ಎಲ್ಲಾ ಥಿಯೇಟರ್ ಗಳಲ್ಲಿ ತುಂಬು ಪ್ರದರ್ಶನ ಕಾಣುತ್ತಿದೆ. ಗಣೇಶ್ ಅಭಿನಯ ಹಾಗೂ ಮ್ಯಾನರಿಸಂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ.

ವರ್ಕ್ ಆಯ್ತು ಸುನಿ-ಗಣಿ ಕಾಂಬಿನೇಶನ್

ವರ್ಕ್ ಆಯ್ತು ಸುನಿ-ಗಣಿ ಕಾಂಬಿನೇಶನ್

ನಿರ್ದೇಶಕ ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ಸಖತ್ತಾಗಿ ವರ್ಕ್ ಆಗಿದೆ. ಸುನಿ ಡೈಲಾಗ್ಸ್ ಗಣೇಶ್ ಆಕ್ಟಿಂಗ್ ಎರಡು ಜನರನ್ನ ಥಿಯೇಟರ್ ಕಡೆ ಜನರನ್ನ ಕರೆತರುತ್ತಿದೆ.

ಡಿಸೆಂಬರ್ ಶುಭ ಅನ್ನೂದು ಮತ್ತೆ ಕಾತರಿ

ಡಿಸೆಂಬರ್ ಶುಭ ಅನ್ನೂದು ಮತ್ತೆ ಕಾತರಿ

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗುವ ಚಿತ್ರಗಳು ಸಕ್ಸಸ್ ಆಗುತ್ತವೆ. ಬಾಕ್ಸ್ ಆಪೀಸ್ ನಲ್ಲಿ ಸಖತ್ ಕಲೆಕ್ಷನ್ ಮಾಡುತ್ತೆ ಅನ್ನುವ ಸುದ್ದಿಗಳಿತ್ತು. ಆದರೆ ಈಗ ಆ ಸುದ್ದಿ ನಿಜವಾಗಿದೆ.

More from Filmibeat

English summary
Kannada actor golden star Ganesh's film Chamak has earned Rs 6 crore in the four days of its release. Chamak Rashmika and Ganesh starrer film, Simple Suni directed the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X