ಗಣೇಶ್ ನಟನೆಯ 'ಮಳೆಯಲಿ ಜೊತೆಯಲಿ' ಚಿತ್ರಕ್ಕೆ 11 ವರ್ಷ
ಮುಂಗಾರುಮಳೆ, ಚೆಲುವಿನ ಚಿತ್ತಾರ, ಗಾಳಿಪಟ ಬಳಿಕ ಗಣೇಶ್ ವೃತ್ತಿ ಜೀವನದಲ್ಲಿ ಅಷ್ಟು ದೊಡ್ಡ ಸಕ್ಸಸ್ ತಂದು ಕೊಟ್ಟ ಸಿನಿಮಾ ಮಳೆಯಲಿ ಜೊತೆಯಲಿ. ಸೂಪರ್ ಹಿಟ್ ಲವ್ ಸ್ಟೋರಿ ತೆರೆಕಂಡು 11 ವರ್ಷ ಕಳೆದಿದೆ.
2009 ಡಿಸೆಂಬರ್ 11 ರಂದು ಮಳೆಯಲಿ ಜೊತೆಯಲಿ ಸಿನಿಮಾ ಬಿಡುಗಡೆಯಾಗಿತ್ತು. ಪ್ರೀತಮ್ ಗುಬ್ಬಿ ಈ ಚಿತ್ರ ನಿರ್ದೇಶನ ಮಾಡಿದ್ದು, ಸ್ವತಃ ಗಣೇಶ್ ಸ್ವಂತ ಬ್ಯಾನರ್‌ನಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದರು.
ಮಳೆಯಲಿ ಜೊತೆಯಲ್ಲಿ ಲವ್ ಸ್ಟೋರಿ ಜೊತೆಗೆ ಮ್ಯೂಸಿಕಲ್ ಆಗಿ ಹಿಟ್ ಆಗಿತ್ತು. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಅದ್ಭುತವಾದ ಹಾಡುಗಳು ಮೂಡಿಬಂದಿದ್ದವು. ಚಿತ್ರದ ಮೂರು ಹಾಡನ್ನು ಸೋನು ನಿಗಮ್ ಹಾಡಿದ್ದರು. ಮೊದಲ ಹಾಡನ್ನು ಗಣೇಶ್ ಹಾಡಿದ್ದರು.

ಗಣೇಶ್ ಜೊತೆ ಯುವಿಕಾ ಚೌಧರಿ ಮತ್ತು ಅಂಜನಾ ಸುಖಾನಿ ಇಬ್ಬರು ನಾಯಕಿಯರು ನಟಿಸಿದ್ದರು. ಸಿಹಿ ಕಹಿ ಚಂದ್ರು, ಸಿಹಿ ಕಹಿ ಗೀತಾ, ದತ್ತಣ್ಣ, ರಂಗಾಯಣ ರಘು, ಶರಣ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
57ನೇ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಮಳೆಯಲಿ ಜೊತೆಯಲಿ ಸಿನಿಮಾಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿತ್ತು. ಹಾಗೂ ನಟ ಗಣೇಶ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಹ ಸಿಕ್ಕಿತ್ತು.


Click it and Unblock the Notifications











