ಗಣೇಶ್-ಯೋಗರಾಜ್ ಭಟ್ಟರ 'ಮುಂಗಾರು ಮಳೆ'ಗೆ 14 ವರ್ಷ ತುಂಬಿದ ಸಂತಸ

ಮುಂಗಾರು ಮಳೆ.. ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಬಂದ ಮುಂಗಾರು ಮಳೆ ಸಿನಿಮಾಗೆ ಕನ್ನಡ ಸಿನಿಪ್ರಿಯರು ಮನ ಸೋತಿದ್ದರು.

ಚಿತ್ರದ ಕಥೆ, ಡೈಲಾಗ್, ಗಣೇಶ್ ಅಭಿನಯ, ಲೊಕೇಶನ್, ಮಳೆ, ಅದ್ಭುತವಾದ ಸಂಗೀತಕ್ಕೆ ಪ್ರೇಕ್ಷಕರು ತಲೆಬಾಗಿದ್ದರು. 2006ರಲ್ಲಿ ರಿಲೀಸ್ ಆದ ಮುಂಗಾರು ಮಳೆ ಸಿನಿಮಾಗೆ ಈಗ 14 ವರ್ಷದ ಸಂಭ್ರಮ. ಹೌದು, ಇವತ್ತಿಗೆ ಸರಿಯಾಗಿ 14 ವರ್ಷಗಳ ಹಿಂದೆ ಮುಂಗಾರು ಮಳೆ ಸಿನಿಮಾ ರಿಲೀಸ್ ರಾಜ್ಯದಾದ್ಯಂತ ಬಿಡುಗೆಯಾಗಿತ್ತು.

ಗಣೇಶ್ ಗೆ ಸ್ಟಾರ್ ಗಿರಿ ತಂದುಕೊಟ್ಟ ಸಿನಿಮಾ

ಗಣೇಶ್ ಗೆ ಸ್ಟಾರ್ ಗಿರಿ ತಂದುಕೊಟ್ಟ ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡ ಮುಂಗಾರು ಮಳೆ ಚಿತ್ರ, ಗಣೇಶ್ ಸಿನಿ ಬದುಕನ್ನೇ ಬದಲಾಯಿಸಿದ ಸಿನಿಮಾವಾಗಿದೆ. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದರು. ನಿರ್ದೇಶಕ ಯೋಗರಾಜ್ ಭಟ್ ಅವರಿಗೂ ಸ್ಟಾರ್ ಗಿರಿ ತಂದುಕೊಟ್ಟ ಚಿತ್ರವಿದು.

ಮನೋ ಮೂರ್ತಿ ಸಂಗೀತಕ್ಕೆ ಗಾನಪ್ರಿಯರು ಫಿದಾ

ಮನೋ ಮೂರ್ತಿ ಸಂಗೀತಕ್ಕೆ ಗಾನಪ್ರಿಯರು ಫಿದಾ

ಖ್ಯಾತ ಸಂಗೀತ ನಿರ್ದೇಶಕ ಮನೋ ಮೂರ್ತಿ ಅವರ ಸಂಗೀತ ಇಂದಿಗೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ಅನಿಸುತಿದೆ ಯಾಕೋ ಇಂದು.. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ಹಾಡುಗಳು ಎಲ್ಲರ ಬಾಯಲ್ಲು ಗುನುಗುವಂತೆ ಮಾಡಿದೆ.

ಪೂಜಾ ಗಾಂಧಿ ನಟನೆಯ ಚೊಚ್ಚಲ ಸಿನಿಮಾ

ಪೂಜಾ ಗಾಂಧಿ ನಟನೆಯ ಚೊಚ್ಚಲ ಸಿನಿಮಾ

ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದಾರೆ. ಪೂಜಾ ಗಾಂಧಿಗೆ ಇಂದು ಚೊಚ್ಚಲ ನಟನೆಯ ಸಿನಿಮಾ. ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಗಳಿಸಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಪ್ರೀತಮ್ ಮತ್ತು ನಂದಿನಿಯ ನವಿರಾದ ಪ್ರೇಮಕಥೆಗೆ ಚಿತ್ರಪ್ರೇಮಿಗಳು ಮನಸೂರೆಗೊಂಡಿದ್ದರು.

ಗಾಳಿಪಟ ಮೂಲಕ ಮತ್ತೆ ಒಂದಾದ ಗಣೇಶ್-ಭಟ್ರು

ಗಾಳಿಪಟ ಮೂಲಕ ಮತ್ತೆ ಒಂದಾದ ಗಣೇಶ್-ಭಟ್ರು

ಈ ಸಿನಿಮಾ ಬಳಿಕ ಗಣೇಶ್ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು. ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮುಂಗಾರು ಮಳೆ ಬಳಿಕ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿ ಗಾಳಿಪಟ ಸಿನಿಮಾ ಮೂಲಕ ಮತ್ತೆ ಒಂದಾದರು. ಆದರೆ ಈ ಸಿನಿಮಾ ಮುಂಗಾರು ಮಳೆಯಷ್ಟು ಯಶಸ್ಸು ಕಾಣಲಿಲ್ಲ.

Recommended Video

Ganesh ಕನ್ನಡ ಚಿತ್ರರಂಗದ ಸ್ಟಾರ್ ಆಗಿ 14 ವರ್ಷ ಆಯ್ತು | Filmibeat Kannada
ಗಣೇಶ್ ಬಳಿ ಇರುವ ಸಿನಿಮಾಗಳು

ಗಣೇಶ್ ಬಳಿ ಇರುವ ಸಿನಿಮಾಗಳು

ಗಣೇಶ್ ಸದ್ಯ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಸಖತ್, ಗಾಳಿಪಟ-2 ಸೇರಿದಂತೆ ಇನ್ನು ಹೆಸರಿಡದ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ಸದ್ಯ ಗಾಳಿಪಟ-2 ಸಿನಿಮಾದಲ್ಲಿ ನಿರತರಾಗಿದ್ದಾರೆ.

More from Filmibeat

English summary
Kannada Actor Golden star Ganesh starrer Mungaru Male Movie Completes 14 Years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X