For Quick Alerts
  ALLOW NOTIFICATIONS  
  For Daily Alerts

  ಎಂತಹ ಕಾಕತಾಳೀಯ : ಅಚ್ಚರಿಯ ಸಂಗತಿ ಹಂಚಿಕೊಂಡ ಗಣೇಶ್

  |
  ಅಚ್ಚರಿಯ ಸಂಗತಿ ಹಂಚಿಕೊಂಡ ಗಣೇಶ್ | FILMIBEAT KANNADA

  ಇದು ಕಾಕತಾಳೀಯ, ಆದರೂ ಸತ್ಯ ಈ ರೀತಿ ಹೇಳಿಯೇ ಒಂದು ಅಚ್ಚರಿಯ ಸಂಗತಿಯನ್ನು ಗೋಲ್ಡನ್ ಹುಡುಗ ಗಣೇಶ್ ಇದೀಗ ಹಂಚಿಕೊಂಡಿದ್ದಾರೆ.

  ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅವರ ಹೊಸ ಸಿನಿಮಾ '99' ಬಗ್ಗೆ ಅಚ್ಚರಿಯ ವಿಷಯವನ್ನು ಹೇಳಿಕೊಂಡಿದ್ದಾರೆ. ರಾಮು ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಈಗ ಈ ಸಂಸ್ಥೆ ಮತ್ತೊಂದು ವಿಶೇಷಕ್ಕೆ ಕಾರಣವಾಗಿದೆ.

  ಸೆಂಚುರಿ ಹೊಡೆದ ಅರ್ಜುನ್ ಜನ್ಯ : ಯಾವುದು 100ನೇ ಸಿನಿಮಾ? ಸೆಂಚುರಿ ಹೊಡೆದ ಅರ್ಜುನ್ ಜನ್ಯ : ಯಾವುದು 100ನೇ ಸಿನಿಮಾ?

  ತಮಿಳಿನ ಈ ವರ್ಷದ ಸೂಪರ್ ಹಿಟ್ ಸಿನಿಮಾ '96'ನ ರಿಮೇಕ್ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೊತೆಗೆ ಈ ಸಿನಿಮಾ ಈಗಲೇ ಅನೇಕ ವಿಶೇಷಗಳಿಗೆ ಸಾಕ್ಷಿ ಆಗುತ್ತಿದೆ.

  ಇತ್ತೀಚಿಗಷ್ಟೆ ಈ ಸಿನಿಮಾ ಮುಹೂರ್ತ ನೆರವೇರಿದ್ದು, ಈಗ ಸಿನಿಮಾದ ಕುತೂಹಲಕಾರಿ ವಿಷಯವನ್ನು ನಟ ಗಣೇಶ್ ಟ್ವಿಟ್ಟರ್ ನ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಗಣೇಶ್ ಹಂಚಿಕೊಂಡ ಅಚ್ಚರಿ

  ''ಕಾಕತಾಳೀಯ, ಆದರೂ ಸತ್ಯ. 1999 ಡಾ. ಶಿವಣ್ಣ ಅಭಿನಯದ 50ನೇ ಚಿತ್ರ 'AK47' ಚಿತ್ರವನ್ನ ನಿರ್ಮಾಣ ಮಾಡಿದ್ದು ರಾಮು ಫಿಲಂಸ್. 2003 ನಾದ ಬ್ರಹ್ಮ ಡಾ.ಹಂಸಲೇಖ ಅವರ 200ನೇ ಸಂಗೀತ ನಿರ್ದೇಶನದ ಚಿತ್ರ 'ನಂಜುಂಡಿ' ಚಿತ್ರವನ್ನ ನಿರ್ಮಾಣ ರಾಮು ಫಿಲಂಸ್. ಇದೀಗ, ಅರ್ಜುನ್ ಜನ್ಯ ಸಂಗೀತದ 100ನೇ ಚಿತ್ರ ‘99' ಇದು ಕೂಡ ರಾಮು ಫಿಲಂಸ್ ಮೂಲಕ ನಿರ್ಮಾಣ ಆಗುತ್ತಿರುವ ಸಿನಿಮಾ. ಸಾಧಕರ ಸಾಧನೆಯ ಹೆಜ್ಜೆಗಳಿಗೆ ಗುರುತಾದ ರಾಮು ಸಂಸ್ಥೆ.'' ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

  ರಾಮು ಫಿಲಂಸ್ ಖ್ಯಾತಿ

  ರಾಮು ಫಿಲಂಸ್ ಖ್ಯಾತಿ

  ಗಣೇಶ್ ಹೇಳಿರುವ ಹಾಗೆ, ಶಿವರಾಜ್ ಕುಮಾರ್ ಅವರ 50ನೇ ಸಿನಿಮಾವನ್ನು, ಹಂಸಲೇಖ ಅವರ 200ನೇ ಸಿನಿಮಾವನ್ನು ಹಾಗೂ ಅರ್ಜುನ್ ಜನ್ಯ ಅವರ 100ನೇ ಸಿನಿಮಾಗೆ ಬಂಡವಾಳ ಹಾಕಿದ್ದ ಖ್ಯಾತಿಯನ್ನು ರಾಮು ಫಿಲ್ಮ್ಸ್ ಪಡೆದಿದೆ. ಇವುಗಳಲ್ಲದೆ, ನಟಿ ಮಾಲಾಶ್ರೀ ಪತಿ ರಾಮು ತಮ್ಮ ಬ್ಯಾನರ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  'ಅರ್ಜುನ'ನಿಗೆ ಕೃಷ್ಣನ ದಾರಿ : ಜನ್ಯಗೆ ಜೀವ ನೀಡಿದ್ದ ಸುದೀಪ್ 'ಅರ್ಜುನ'ನಿಗೆ ಕೃಷ್ಣನ ದಾರಿ : ಜನ್ಯಗೆ ಜೀವ ನೀಡಿದ್ದ ಸುದೀಪ್

  ಸೆಂಚುರಿ ಹೊಡೆದ ಜನ್ಯ

  ಸೆಂಚುರಿ ಹೊಡೆದ ಜನ್ಯ

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೀಗ ಸೆಂಚುರಿ ಹೊಡೆಯಲು ತುದಿಗಾಲಿ ನಿಂತಿದ್ದಾರೆ. '99' ಸಿನಿಮಾ ಅವರ ಸಂಗೀತ ನಿರ್ದೇಶನದ ನೂರನೇ ಸಿನಿಮಾ ಆಗಲಿದೆ. ಕನ್ನಡದ ಸ್ಟಾರ್ ಗಳು ಹಾಗೂ ಹೊಸಬರು ಸೇರಿದಂತೆ ಸಾಕಷ್ಟು ಹಿಟ್ ಹಾಡುಗಳನ್ನು ಜನ್ಯ ನೀಡಿದ್ದಾರೆ. ಸದ್ಯ, ಅರ್ಜುನ್ ಜನ್ಯ ಕನ್ನಡದ ನಂಬರ್ 1 ಮ್ಯೂಸಿಕ್ ಡೈರೆಕ್ಟರ್.

  '99' ಸಿನಿಮಾದ ಬಗ್ಗೆ

  '99' ಸಿನಿಮಾದ ಬಗ್ಗೆ

  '99' ತಮಿಳಿನ '96' ಚಿತ್ರದ ರಿಮೇಕ್ ಆಗಿದೆ. ವಿಜಯ್ ಸೇತುಪತಿ ಪಾತ್ರದಲ್ಲಿ ಗಣೇಶ್, ತ್ರಿಷಾ ಪಾತ್ರದಲ್ಲಿ ಭಾವನ ನಟಿಸುತ್ತಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅಲ್ಲಿ ಹಿಟ್ ಆದ ಈ ಸಿನಿಮಾ ಇಲ್ಲಿನ ಪ್ರೇಮಿಗಳಿಗೂ ತಂಪು ನೀಡುತ್ತದೆಯೇ ಕಾದು ನೋಡಬೇಕು.

  '99' ಚಿತ್ರದ ತ್ರಿಷಾ ಪಾತ್ರಕ್ಕೆ ಈಕೆಯೇ ನಾಯಕಿ '99' ಚಿತ್ರದ ತ್ರಿಷಾ ಪಾತ್ರಕ್ಕೆ ಈಕೆಯೇ ನಾಯಕಿ

  English summary
  Kannada actor Ganesh shared interesting fact about '99' kannada movie. '99' is a remake of '96' tamil movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X