ಪ್ರೇಮಿಗಳ ದಿನಕ್ಕೆ ಗಣೇಶ್ ನಟನೆಯ ಬಾನ ದಾರಿಯಲಿ ಚಿತ್ರದ ಟೀಸರ್

ಕಳೆದ ವರ್ಷ ಗಾಳಿಪಟ 2 ಸಿನಿಮಾ ಮೂಲಕ ಹಿಟ್ ನೀಡಿ ಕಮ್‌ಬ್ಯಾಕ್ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಕೂಡ ಕಳೆದ ವರ್ಷವೇ ಬಿಡುಗಡೆಯಾಯಿತಾದರೂ ಈ ಚಿತ್ರ ನಿರೀಕ್ಷಿಸಿದ ಯಶಸ್ಸು ಗಳಿಸಲಿಲ್ಲ. ಗಣೇಶ್ ಸದ್ಯ ನಿರ್ದೇಶಕ ಪ್ರೀತಮ್ ಗುಬ್ಬಿ ಜತೆ ಕೈ ಜೋಡಿಸಿದ್ದು ಬಾನ ದಾರಿಯಲಿ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಚಿತ್ರೀಕರಣ ಮುಗಿದಿದ್ದು, ಮಾರ್ಚ್ 17ರಂದು ಸಿನಿಮಾವನ್ನು ತೆರೆಗೆ ತರುವುದಾಗಿ ಘೋಷಿಸಿದೆ ಚಿತ್ರತಂಡ. ಈಗಾಗಲೇ ಚಿತ್ರದ ಎರಡು ಹಾಡುಗಳು ಸಹ ಬಿಡುಗಡೆಯಾಗಿದ್ದು ಕೇಳುಗರಿಂದ ಸಾಧಾರಣ ಎಂಬ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ. ಇನ್ನು ಚಿತ್ರತಂಡ ಇದೇ ತಿಂಗಳಿ 14ರಂದು ಆಚರಿಸಲ್ಪಡುವ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಟೀಸರ್ ಬಿಡುಗಡೆ ಮಾಡಲು ಮುಂದಾಗಿದೆ.

Ganesh starrer Bana Dariyali teaser releasing on Valintines day

ಗಣೇಶ್ ಹಾಗೂ ಚಿತ್ರತಂಡ ಈ ಕುರಿತು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಹಾಗೂ 96 ಚಿತ್ರಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಆಕ್ಷನ್ ಕಟ್ ಹೇಳಿದ್ದ ಪ್ರೀತಮ್ ಗುಬ್ಬಿ ಈ ಬಾರಿ ಬಾನ ದಾರಿಯಲಿ ಚಿತ್ರದ ಮೂಲಕ ಯಾವ ರೀತಿ ನಿರ್ದೇಶನ ಮಾಡಿರಲಿದ್ದಾರೆ ಎಂಬ ಕುತೂಹಲ ಸಿನಿ ರಸಿಕರಲ್ಲಿದೆ.

ಈ ಚಿತ್ರದಲ್ಲಿ ಇಬ್ಬರು ನಟಿಯರಿದ್ದು, ರೀಷ್ಮಾ ನಾನಯ್ಯ ಹಾಗೂ ರುಕ್ಮಣಿ ವಸಂತ್ ನಟಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರ‍ಘು, ಅಶೋಕ್ ಮುಂತಾದವು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು, ಇಲ್ಲಿಯವರೆಗೂ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಹೇಳಿಕೊಳ್ಳುವಂತಹ ಮೋಡಿ ಮಾಡದೇ ಇದ್ದು, ಮುಂದಿನ ಹಾಡುಗಳಲ್ಲಿ ಕೇಳುಗರ ಮನ ಗೆಲ್ಲುವಂತಹ ಸಂಗೀತ ನೀಡಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಮಾರ್ಚ್ 17ರಂದು ಚಿತ್ರ ತೆರೆಗೆ ಬರಲಿದೆ ಎಂದು ಘೋಷಣೆ ಆಗಿದ್ದು, ಇದೇ ದಿನ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಕೂಡ ತೆರೆಗೆ ಬರಲಿದೆ. ಚಿತ್ರ ಬಿಡುಗಡೆ ವಿಳಂಬವಾಗಲಿದೆ ಎಂಬ ಕೆಲ ಸುದ್ದಿಗಳೂ ಸಹ ಹರಿದಾಡುತ್ತಿದ್ದು, ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿರುವ ಟೀಸರ್ ಮೂಲಕ ಚಿತ್ರದ ಬಿಡುಗಡೆ ಯಾವಾಗ ಎಂಬುದು ಖಚಿತಗೊಳ್ಳಲಿದೆ.

More from Filmibeat

English summary
Ganesh starrer Bana Dariyali teaser releasing on Valintine's day. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X