ಆತಂಕದಲ್ಲಿದ್ದ 'ಚಮಕ್' ನಿರ್ದೇಶಕರಿಗೆ ರಿಲೀಫ್ ನೀಡಿದ ಸೆನ್ಸಾರ್
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಯಶಸ್ವಿಯಾಗಿ ಸೆನ್ಸಾರ್ ಮುಗಿಸಿದ್ದು, 'ಯು/ಎ' ಪ್ರಮಾಣಪತ್ರ ಪಡೆದುಕೊಂಡಿದೆ. ಇದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಅವರಿಗೆ ಸಮಾಧಾನ ತಂದಿದೆ.
ಸೆನ್ಸಾರ್ ಗೂ ಮುಂಚೆ ನಿರ್ದೇಶಕ ಸುನಿಗೆ ಆತಂಕ ಕಾಡುತ್ತಿತ್ತು. 'ಚಮಕ್' ಚಿತ್ರಕ್ಕೆ ಯಾವ ಸರ್ಟಿಫಿಕೇಟ್ ನೀಡಬಹುದು ಎಂಬ ಯೋಚನೆ ತಲೆಯಲ್ಲಿ ಗಟ್ಟಿಯಾಗಿ ಕಾಡುತ್ತಿತ್ತು. ಯಾಕಂದ್ರೆ, 'ಚಮಕ್' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಗುತ್ತಾ ಅಥವಾ 'ಯು/ಎ' ಸರ್ಟಿಫಿಕೇಟ್ ಸಿಗುತ್ತಾ ಎಂಬ ಗೊಂದಲ ಸುನಿಗೆ ಎದುರಾಗಿತ್ತು. ಅಂತಿಮವಾಗಿ 'ಯು/ಎ' ಪ್ರಮಾಣಪತ್ರ ಸಿಕ್ಕಿರುವುದು ನಿರ್ದೇಶಕರಿಗೆ ಖುಷಿ ಹೆಚ್ಚಿಸಿದೆ.

ಅಷ್ಟಕ್ಕೂ, ನಿರ್ದೇಶಕ ಸುನಿ ಯಾಕೆ 'ಎ' ಪ್ರಮಾಣ ಪತ್ರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಎಂಬ ಪ್ರಶ್ನೆ ಕಾಡುವುದು ಸಹಜ. ಹಾಗಿದ್ರೆ, ಎ ಸರ್ಟಿಫಿಕೇಟ್ ನೀಡುವಂತಹ ಅಂಶಗಳು ಚಿತ್ರದಲ್ಲಿದ್ಯಾ? ಎಂಬ ಅನುಮಾನ ಕೂಡ ಮೂಡಿತ್ತು. ಇದಕ್ಕೆಲ್ಲಾ ಚಿತ್ರವನ್ನ ನೋಡಿ ಉತ್ತರ ಕಂಡುಕೊಳ್ಳಬೇಕಿದೆ.

ಆದ್ರೆ, 'ಚಮಕ್' ಚಿತ್ರದ ಫಸ್ಟ್ ನೈಟ್ ಟೀಸರ್ ನೋಡಿದ್ರೆ, 'ಚಮಕ್' ಚಿತ್ರದಲ್ಲಿ ಈ ರೀತಿಯಾದ ಮನರಂಜನೆ ನೀಡುವಂತಹ ಅಂಶಗಳು ಹೆಚ್ಚಿರಬಹುದು ಎನ್ನಿಸುತ್ತೆ. ಅದೇನೆ ಇರಲಿ, 'ಚಮಕ್' ಸಿನಿಮಾಗೆ ಸೆನ್ಸಾರ್ ನಲ್ಲಿ ಪಾಸ್ ಆಯ್ತು. ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











