For Quick Alerts
  ALLOW NOTIFICATIONS  
  For Daily Alerts

  ಆತಂಕದಲ್ಲಿದ್ದ 'ಚಮಕ್' ನಿರ್ದೇಶಕರಿಗೆ ರಿಲೀಫ್ ನೀಡಿದ ಸೆನ್ಸಾರ್

  By Bharath Kumar
  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಯಶಸ್ವಿಯಾಗಿ ಸೆನ್ಸಾರ್ ಮುಗಿಸಿದ್ದು, 'ಯು/ಎ' ಪ್ರಮಾಣಪತ್ರ ಪಡೆದುಕೊಂಡಿದೆ. ಇದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಅವರಿಗೆ ಸಮಾಧಾನ ತಂದಿದೆ.

  ಸೆನ್ಸಾರ್ ಗೂ ಮುಂಚೆ ನಿರ್ದೇಶಕ ಸುನಿಗೆ ಆತಂಕ ಕಾಡುತ್ತಿತ್ತು. 'ಚಮಕ್' ಚಿತ್ರಕ್ಕೆ ಯಾವ ಸರ್ಟಿಫಿಕೇಟ್ ನೀಡಬಹುದು ಎಂಬ ಯೋಚನೆ ತಲೆಯಲ್ಲಿ ಗಟ್ಟಿಯಾಗಿ ಕಾಡುತ್ತಿತ್ತು. ಯಾಕಂದ್ರೆ, 'ಚಮಕ್' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಗುತ್ತಾ ಅಥವಾ 'ಯು/ಎ' ಸರ್ಟಿಫಿಕೇಟ್ ಸಿಗುತ್ತಾ ಎಂಬ ಗೊಂದಲ ಸುನಿಗೆ ಎದುರಾಗಿತ್ತು. ಅಂತಿಮವಾಗಿ 'ಯು/ಎ' ಪ್ರಮಾಣಪತ್ರ ಸಿಕ್ಕಿರುವುದು ನಿರ್ದೇಶಕರಿಗೆ ಖುಷಿ ಹೆಚ್ಚಿಸಿದೆ.

  ಗಣೇಶ್ -ರಶ್ಮಿಕಾಗೆ 'ಚಮಕ್' ನೀಡಲು ಬಂದ ಹೊಸ ಮಾಸ್ಟರ್ಗಣೇಶ್ -ರಶ್ಮಿಕಾಗೆ 'ಚಮಕ್' ನೀಡಲು ಬಂದ ಹೊಸ ಮಾಸ್ಟರ್

  ಅಷ್ಟಕ್ಕೂ, ನಿರ್ದೇಶಕ ಸುನಿ ಯಾಕೆ 'ಎ' ಪ್ರಮಾಣ ಪತ್ರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಎಂಬ ಪ್ರಶ್ನೆ ಕಾಡುವುದು ಸಹಜ. ಹಾಗಿದ್ರೆ, ಎ ಸರ್ಟಿಫಿಕೇಟ್ ನೀಡುವಂತಹ ಅಂಶಗಳು ಚಿತ್ರದಲ್ಲಿದ್ಯಾ? ಎಂಬ ಅನುಮಾನ ಕೂಡ ಮೂಡಿತ್ತು. ಇದಕ್ಕೆಲ್ಲಾ ಚಿತ್ರವನ್ನ ನೋಡಿ ಉತ್ತರ ಕಂಡುಕೊಳ್ಳಬೇಕಿದೆ.

  'ಚಮಕ್' ಕೊಡಲು ರೆಡಿಯಾದ್ರು ಸ್ಯಾಂಡಲ್ ವುಡ್ ಸ್ಟಾರ್ಸ್'ಚಮಕ್' ಕೊಡಲು ರೆಡಿಯಾದ್ರು ಸ್ಯಾಂಡಲ್ ವುಡ್ ಸ್ಟಾರ್ಸ್

  ಆದ್ರೆ, 'ಚಮಕ್' ಚಿತ್ರದ ಫಸ್ಟ್ ನೈಟ್ ಟೀಸರ್ ನೋಡಿದ್ರೆ, 'ಚಮಕ್' ಚಿತ್ರದಲ್ಲಿ ಈ ರೀತಿಯಾದ ಮನರಂಜನೆ ನೀಡುವಂತಹ ಅಂಶಗಳು ಹೆಚ್ಚಿರಬಹುದು ಎನ್ನಿಸುತ್ತೆ. ಅದೇನೆ ಇರಲಿ, 'ಚಮಕ್' ಸಿನಿಮಾಗೆ ಸೆನ್ಸಾರ್ ನಲ್ಲಿ ಪಾಸ್ ಆಯ್ತು. ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

  English summary
  Golden star Ganesh, Rashmika Mandanna starrer most expected movie 'Chamak' has been censored with U/A certificate and the movie is releasing on December 29th. ಕನ್ನಡ ನಟ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಚಿತ್ರ ಸೆನ್ಸಾರ್ ಮುಗಿಸಿದ್ದು, ಯು/ಎ ಸರ್ಟಿಫಿಕೆಟ್ ನೀಡಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X