For Quick Alerts
  ALLOW NOTIFICATIONS  
  For Daily Alerts

  ಗಣಿ ಈಸ್ ಬ್ಯಾಕ್; ಮೊದಲ ದಿನ 'ಗಾಳಿಪಟ'-2 ಕಲೆಕ್ಷನ್ ಎಷ್ಟು ಕೋಟಿ?

  |

  ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿ ಮತ್ತೊಮ್ಮೆ ಜಾದೂ ಮಾಡಿದೆ. 'ಗಾಳಿಪಟ'-2 ಸಿನಿಮಾ ಮೊದಲ ಭರ್ಜರಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಗೋಲ್ಡನ್ ಸ್ಟಾರ್ ಸಿನಿಕರಿಯರ್‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ.

  Recommended Video

  Gaalipata 2 1st day Collection | ಮತ್ತೊಂಮ್ಮೆ 'ಗಾಳಿಪಟ 2' ಗಣಿ-ಭಟ್ರಿಗೆ ತಂದು ಕೊಡ್ತು ಸಕ್ಸಸ್ | Filmibeat

  ಮೊದಲಿಗೆ ನಗಿಸಿ ನಂತರ ಭಾವುಕರನ್ನಾಗಿಸುವ 'ಗಾಳಿಪಟ'-2 ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದ ಗಣಿಗೆ ಸಿನಿಮಾ ವರವಾಗಿ ಪರಿಣಮಿಸಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಚಿತ್ರತಂಡ ಖುಷಿಯಾಗಿದೆ. 14 ವರ್ಷಗಳ ಹಿಂದೆ 'ಗಾಳಿಪಟ' ಸಿನಿಮಾ 175 ದಿನ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು. ಅದೇ ಹಾದಿಯಲ್ಲಿ ಈ ಸಿನಿಮಾ ಕೂಡ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ಗಣೇಶ್ ಜೊತೆಗೆ ದಿಗಂತ್, ಪವನ್ ಕುಮಾರ್‌, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ.

  Gaalipata 2 Review: ಬಗೆಹರಿಯದ ಭಾವನೆಗಳು ಮತ್ತು ಕನ್ನಡ, ಇದು ಭಟ್ಟರು ಬಿಟ್ಟ 2ನೇ 'ಗಾಳಿಪಟ'!Gaalipata 2 Review: ಬಗೆಹರಿಯದ ಭಾವನೆಗಳು ಮತ್ತು ಕನ್ನಡ, ಇದು ಭಟ್ಟರು ಬಿಟ್ಟ 2ನೇ 'ಗಾಳಿಪಟ'!

  ಹಿರಿಯ ನಟ ಅನಂತ್‌ ನಾಗ್‌ ಕನ್ನಡ ಮೇಷ್ಟ್ರ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಂಗಾಯಣ ರಘು, ಸುಧಾ ಬೆಳವಾಡಿ ತಾರಾ ಬಳಗವನ್ನು ಶ್ರೀಮಂತಗೊಳಿಸಿದ್ದಾರೆ. ಸೂಪರ್ ಹಿಟ್ ಟೈಟಲ್‌ನಲ್ಲಿ ಭಟ್ರು ಹಾಗೂ ಗಣೇಶ್ ಮತ್ತೆ ಸಿನಿಮಾ ಮಾಡ್ತಿದ್ದಾರೆ ಅಂದಾಗಲೇ ಕುತೂಹಲ ಮೂಡಿತ್ತು. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್‌ನಿಂದ ಚಿತ್ರತಂಡ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರ್ಕೊಂಡು ಬರುವಲ್ಲಿ ಸಕ್ಸಸ್ ಕಂಡಿತ್ತು. ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್‌ ಶೋಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ನಿನ್ನೆ(ಆಗಸ್ಟ್ 12) ಬೆಳಗ್ಗೆ ವಿಶ್ವದಾದ್ಯಂತ ಸಿನಿಮಾ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಿತ್ತು.

   ಫಸ್ಟ್ ಡೇ ಕಲೆಕ್ಷನ್ 13 ಕೋಟಿ ರೂ.?

  ಫಸ್ಟ್ ಡೇ ಕಲೆಕ್ಷನ್ 13 ಕೋಟಿ ರೂ.?

  ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ 'ಗಾಳಿಪಟ'-2 ಹಾರಿದೆ. ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 13 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿರುವ ಸಾಧ್ಯತೆಯಿದೆ. ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಕರಿಯರ್‌ನಲ್ಲಿ ಇದು ಭಾರೀ ಓಪನಿಂಗ್ ಅನ್ನಬಹುದು.

   ಬೇರೆ ಸಿನಿಮಾಗಳಿಗೆ 'ಗಾಳಿಪಟ'-2 ಟಕ್ಕರ್

  ಬೇರೆ ಸಿನಿಮಾಗಳಿಗೆ 'ಗಾಳಿಪಟ'-2 ಟಕ್ಕರ್

  ಈ ವಾರ ಬಾಲಿವುಡ್‌ನಲ್ಲಿ 'ಲಾಲ್‌ ಸಿಂಗ್ ಚಡ್ಡಾ' ಹಾಗೂ 'ರಕ್ಷಾ ಬಂಧನ್' ಸೇರಿದಂತೆ ತಮಿಳು, ತೆಲುಗಿನಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿದೆ. ಆ ಎಲ್ಲಾ ಸಿನಿಮಾಗಳನ್ನು ಮೀರಿಸಿ 'ಗಾಳಿಪಟ'-2 ಸಿನಿಮಾ ಯಶಸ್ಸು ಕಂಡಿದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಮೊದಲ ದಿನ ಚಿತ್ರದ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್‌ ಆಗಿತ್ತು. ಹಾಗಾಗಿ ಭರ್ಜರಿ ಕಲೆಕ್ಷನ್ ನಿರೀಕ್ಷೆಯಿದೆ.

   ತಂಡದ ಲೆಕ್ಕಾಚಾರ ತಲೆಕೆಳಗಾಗಿಸಿದ ಚಿತ್ರ

  ತಂಡದ ಲೆಕ್ಕಾಚಾರ ತಲೆಕೆಳಗಾಗಿಸಿದ ಚಿತ್ರ

  'ಗಾಳಿಪಟ'-2 ಚಿತ್ರಕ್ಕೆ ಮೊದಲ ದಿನ ಸಿಕ್ಕಿರುವ ರೆಸ್ಪಾನ್ಸ್ ಚಿತ್ರತಂಡವನ್ನೇ ದಂಗಾಗಿಸಿದೆ. ಗಣಿ ಹಾಗೂ ಭಟ್ರ ಸಿನಿಮಾಗಳು ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ. ಮೌತ್‌ ಟಾಕ್‌ನಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ ಅನ್ನುವುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಮಾಸ್‌ ಸಿನಿಮಾಗೆ ಸಿಗುವಂತಹ ರೆಸ್ಪಾನ್ಸ್‌ ಕ್ಲಾಸ್ ಚಿತ್ರಕ್ಕೆ ಸಿಕ್ಕಿದೆ. ಮೊದಲ ದಿನವೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ.

   50 ಕೋಟಿ ರೂ. ಕ್ಲಬ್‌ಗೆ ಸಿನಿಮಾ

  50 ಕೋಟಿ ರೂ. ಕ್ಲಬ್‌ಗೆ ಸಿನಿಮಾ

  ಸಿನಿಮಾ ಪ್ರೀ ರಿಲೀಸ್‌ ಬ್ಯುಸಿನೆಸ್‌ ಕೂಡ ಭರ್ಜರಿಯಾಗಿತ್ತು. ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ ಹಾಗೂ ಆಡಿಯೋ ರೈಟ್ಸ್ ಒಳ್ಳೆ ಬೆಲೆಗೆ ಮಾರಾಟವಾಗಿತ್ತು. ಇದೀಗ ಮೊದಲ ದಿನವೇ ಸಿನಿಮಾ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಶೀಘ್ರದಲ್ಲೇ 50 ಕೋಟಿ ರೂ. ಕ್ಲಬ್ ಸೇರಿವ ಸಾಧ್ಯತೆಯಿದೆ. ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ಈ ವರ್ಷ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಬೆಳೆ ತೆಗೆಯುತ್ತಿದ್ದು 'ಗಾಳಿಪಟ'-2 ಕೂಡ ಅದೇ ಸಾಲಿಗೆ ಸೇರಿಕೊಂಡಿದೆ.

  English summary
  Ganesh Starrer Gaalipata 2 Worldwide Box Office Day 1 Collection, Know More.
  Saturday, August 13, 2022, 9:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X