»   » 'ಗಂಡು ಎಂದರೆ ಗಂಡು' ಶೂಟಿಂಗ್ ಶುರು ಗುರು!

'ಗಂಡು ಎಂದರೆ ಗಂಡು' ಶೂಟಿಂಗ್ ಶುರು ಗುರು!

Posted By:
Subscribe to Filmibeat Kannada

ತೆಲುಗಿನ ಸೂಪರ್ ಹಿಟ್ ಸಿನಿಮಾ 'ಭಲೇ ಭಲೇ ಮಗಾಡಿವೋಯ್' ಕನ್ನಡದಲ್ಲಿ ರೀಮೇಕ್ ಆಗುತ್ತಿರುವ ಸುದ್ದಿ ನಿಮಗೆ ಗೊತ್ತಿದೆ. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಟ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿಯನ್ನ ನಾವೇ ನಿಮಗೆ ಹೇಳಿದ್ವಿ.

ಈ ಚಿತ್ರಕ್ಕೆ 'ಗಂಡು ಎಂದರೆ ಗಂಡು' ಎಂಬ ಟೈಟಲ್ ಕೂಡ ಫಿಕ್ಸ್ ಆಗಿದೆ ಎನ್ನುವುದರ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ಇದೇ ಚಿತ್ರತಂಡದಿಂದ ಈಗ ಬಂದಿರುವ ಅಪ್ ಡೇಟ್ ಈ ಫೋಟೋಗಳು....

Ganesh starrer 'Gandu endare Gandu' goes on floors

ಹೌದು, ಸದ್ದಿಲ್ಲದೆ 'ಗಂಡು ಎಂದರೆ ಗಂಡು' ಚಿತ್ರ ಸೆಟ್ಟೇರಿದೆ. ನಿನ್ನೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ 'ಗಂಡು ಎಂದರೆ ಗಂಡು' ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. [ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?]

Ganesh starrer 'Gandu endare Gandu' goes on floors

ಗಣೇಶ್ ಜೊತೆ ಶಾನ್ವಿ ಶ್ರೀವಾಸ್ತವ್ 'ಗಂಡು ಎಂದರೆ ಗಂಡು' ಚಿತ್ರದಲ್ಲಿ ಜೋಡಿಯಾಗಿದ್ದಾರೆ. ನಿನ್ನೆಯಷ್ಟೇ ಮುಹೂರ್ತ ಮುಗಿಸಿರುವ 'ಗಂಡು ಎಂದರೆ ಗಂಡು' ಚಿತ್ರತಂಡ ಇಂದಿನಿಂದ ಶೂಟಿಂಗ್ ಶುರುಮಾಡಿದೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ನೀಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಓದ್ತಾಯಿರಿ.

English summary
Golden Star Ganesh starrer 'Gandu endare Gandu' muhoortha was held in Ganapathi Temple, Rajajinagar, Bengaluru on February 25th. 'Gandu endare Gandu' is directed by Actor-Director Ramesh Aravind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada