ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಗಣೇಶ್ 'ಗಿಮಿಕ್'
Recommended Video
ಗೋಲ್ಡನ್ ಸ್ಟಾರ್ ಗಣೇಶ್ ಈಗ 'ಗಿಮಿಕ್' ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಾಭಿಮಾನಿಗಳಿಗೆ ಈ ಹಿಂದೆ 'ಚಮಕ್' ಕೊಟ್ಟು ಮಜಾ ಮಾಡಿದ್ದ ಗಣಿ ಈಗ 'ಗಿಮಿಕ್' ಮಾಡ್ತಿದ್ದಾರಾ ಅಂತ ಅಚ್ಚರಿ ಪಡಬೇಡಿ ಗಣೇಶ್ 'ಗಿಮಿಕ್' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ.
ಈಗ ಚಿತ್ರದ ಟ್ರೈಲರ್ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಗಣಿ ಸಿನಿಮಾ ಅಂದಾಕ್ಷಣ ರೋಮ್ಯಾಂಟಿಕ್, ಕಾಮಿಡಿ ಸಿನಿಮಾಗಳೇ ಹೆಚ್ಚಾಗಿ ಕಣ್ಣಮುಂದೆ ಬರುತ್ತೆ. ಆದ್ರೆ ಈ ಬಾರಿ ಗಣೇಶ್ ಹಾರರ್ ಸಿನಿಮಾದಲ್ಲಿ ಮಿಂಚಿದ್ದಾರೆ. ಮೊದಲ ಬಾರಿಗೆ ಚಿತ್ರಾಭಿಮಾನಿಗಳನ್ನು ಭಯಬೀಳಿಸಲು ಹೊರಟಿದ್ದಾರೆ.

ಗಣೇಶ್ ಹಾರರ್ ಅವತಾರಕ್ಕೆ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಅಂದ್ರೆ 'ಗಿಮಿಕ್' ಚಿತ್ರದ ಟ್ರೈಲರ್ ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಟ್ರೈಲರ್ ರಿಲೀಸ್ ಆಗುತ್ತಿದಂತೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಇಡೀ ಚಿತ್ರತಂಡ ಸಂತಸದಲ್ಲಿದೆ.
ಈ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಸಹ ಸಂತಸ ವ್ಯಕ್ತಪಡಿಸಿದ್ದು ಸಾಮಾಜಿಕಾ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ಅಂದ್ಹಾಗೆ 'ಗಿಮಿಕ್' ಕಾಲಿವುಡ್ ಹಾಸ್ಯ ನಟ ಸಂತಾನಮ್ ಅಭಿನಯದ 'ದಿಲ್ಲುಕು ದುಡ್ಡು' ಚಿತ್ರದ ರಿಮೇಕ್. ಕಾಲಿವುಡ್ ನಲ್ಲೂ ಉತ್ತಮ ಪ್ರದರ್ಶನ ಕಂಡ ಸಿನಿಮಾ ಇದಾಗಿತ್ತು.
'ಗಿಮಿಕ್' ಚಿತ್ರದಲ್ಲಿ ಗಣೇಶ್ ಗೆ ಜೋಡಿಯಾಗಿ ರೋನಿಕಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿ ಗುರುದತ್, ರವಿಶಂಕರ್ ಗೌಡ, ಸಾಧುಕೋಕಿಲಾ, ಶೋಭರಾಜ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ಗಿಮಿಕ್' ಸಧ್ಯದಲ್ಲೇ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.


Click it and Unblock the Notifications











