ನಿಮಗೆ ಗೊತ್ತೇ: ಗಣೇಶ್-ನಾಗಣ್ಣ ಸೇರಿಕೊಂಡು 'ಗಿಮಿಕ್' ಮಾಡ್ತಿದ್ದಾರೆ.!
Recommended Video

'ಗಿಮಿಕ್' ಅನ್ನೋ ಪದ ಇದ್ಯಲ್ಲಾ... ಅದು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸಿಕ್ಕಾಪಟ್ಟೆ ಫೇಮಸ್. ಸಿನಿಮಾಗಳಿಗೆ ಚೆನ್ನಾಗಿ ಪ್ರಚಾರ ಸಿಗಬೇಕು ಎನ್ನುವ ಕಾರಣಕ್ಕೆ ಕೆಲವರು ಪಬ್ಲಿಸಿಟಿ 'ಗಿಮಿಕ್' ಮಾಡ್ತಾರೆ.!
ಒಳ್ಳೆಯದ್ದೋ, ಕೆಟ್ಟದ್ದೋ... ಒಟ್ನಲ್ಲಿ, ಸಿನಿಮಾ ಹೆಸರು ಪ್ರೇಕ್ಷಕರ ತಲೆಯಲ್ಲಿರಬೇಕು, ಎಲ್ಲರ ನಾಲಿಗೆ ಮೇಲೆ ನುಲಿದಾಡುತ್ತಿರಬೇಕು ಅಂತ 'ಗಿಮಿಕ್' ಮೊರೆ ಹೋಗುತ್ತಾರೆ. ಅಂದ್ಹಾಗೆ, ಈ ಗಿಮಿಕ್ ಅಂದ್ರೆ ಅಚ್ಚಕನ್ನಡದಲ್ಲಿ 'ತಂತ್ರ' ಅಂತರ್ಥ.
ಅಷ್ಟಕ್ಕೂ, ಈ 'ಗಿಮಿಕ್' ಬಗ್ಗೆ ನಾವೀಗ ಇಷ್ಟೆಲ್ಲಾ ಮಾತನಾಡಲು ಕಾರಣ ಗೋಲ್ಡನ್ ಸ್ಟಾರ್ ಗಣೇಶ್. ನಿರ್ದೇಶಕ ನಾಗಣ್ಣ ಜೊತೆಗೆ ಸೇರಿಕೊಂಡು ಗಣೇಶ್ ಗಿಮಿಕ್ ಮಾಡ್ತಿದ್ದಾರೆ. ಏನಿದು ಅಂತ ತಲೆಗೆ ಹುಳ ಬಿಟ್ಟುಕೊಂಡಿದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....

ಏನೇನೋ ಅಂದುಕೊಳ್ಳಬೇಡಿ.!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಾಗಣ್ಣ 'ಗಿಮಿಕ್' ಮಾಡ್ತಿದ್ದಾರೆ ಎಂದಕೂಡಲೆ ಏನೇನೋ ಅಂದುಕೊಳ್ಳಬೇಡಿ. ಚಿನ್ನದ ಹುಡುಗ ಗಣೇಶ್ ಗೆ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿ ನಿಮಗೆಲ್ಲಾ ಗೊತ್ತಿದೆ ತಾನೇ.? ಅದೇ ಚಿತ್ರಕ್ಕೆ ಇದೀಗ 'ಗಿಮಿಕ್' ಅಂತ ಶೀರ್ಷಿಕೆ ಫಿಕ್ಸ್ ಆಗಿದೆ.

ಹಾರರ್-ಕಾಮಿಡಿ ಸಿನಿಮಾ
'ಗಿಮಿಕ್' ಸಿನಿಮಾದಲ್ಲಿ ಹಾರರ್ ಹಾಗೂ ಕಾಮಿಡಿ ಅಂಶಗಳಿವೆ. ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಮಳೆ ಹುಡುಗ ಗಣೇಶ್ ನಟಿಸುತ್ತಿದ್ದಾರೆ. ಇದಕ್ಕೆ 'ಗಿಮಿಕ್' ಅಂತ ಹೆಸರಿಟ್ಟಿರುವುದರಿಂದ ಹಲವರು ಕಣ್ಣರಳಿಸಿದ್ದಾರೆ. ಚಿತ್ರಕಥೆಗೆ 'ಗಿಮಿಕ್' ಶೀರ್ಷಿಕೆಗೆ ಪರ್ಫೆಕ್ಟ್ ಆಗಿ ಸೂಟ್ ಆಗುವ ಕಾರಣ, ಅದನ್ನೇ ಇಡಲಾಗಿದೆ.

ಶ್ರೀಲಂಕಾದಲ್ಲಿ ಚಿತ್ರೀಕರಣ.?
'ಗಿಮಿಕ್' ಮೂಲಕ ಇದೇ ಮೊದಲ ಬಾರಿಗೆ ನಾಗಣ್ಣ ಹಾಗೂ ಗಣೇಶ್ ಒಂದಾಗಿದ್ದಾರೆ. ಯಾರೂ ಚಿತ್ರೀಕರಣ ಮಾಡದ ಲೊಕೇಶನ್ ಗಳಲ್ಲಿ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಶ್ರೀಲಂಕಾದಲ್ಲಿ ಲೊಕೇಶನ್ ಹುಡುಕುತ್ತಿದ್ದಾರೆ ನಿರ್ದೇಶಕ ನಾಗಣ್ಣ.

ನಾಯಕಿ ಆಗಿ ಪಂಜಾಬಿ ಹುಡುಗಿ
ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿರುವ ಪಂಜಾಬಿ ಹುಡುಗಿ ರೋನಿಕಾ ಸಿಂಗ್ 'ಗಿಮಿಕ್' ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇವರೊಂದಿಗೆ ಶೋಭರಾಜ್, ಸುಂದರ್ ರಾಜ್, ಸಾಧು ಕೋಕಿಲ ಕೂಡ ಇರಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇರಲಿದೆ.


Click it and Unblock the Notifications











