ಗಣೇಶ್ 'ಪಟಾಕಿ' ಬಿಡುಗಡೆಗೆ ರೆಡಿ: ತೆರೆಮೇಲೆ ಯಾವಾಗ?
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರನ್ಯ ರಾವ್ ಅಭಿನಯದ 'ಪಟಾಕಿ' ಚಿತ್ರದ ಟ್ರೈಲರ್ ಇತ್ತೀಚೆಗಷ್ಟೆ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೇ ಮೊದಲ ಬಾರಿಗೆ ಗಣೇಶ್ ಖಾಕಿ ಖದರ್ ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವೀಗ ಬಿಡುಗಡೆ ಸಜ್ಜಾಗಿದೆ.[ಟ್ರೈಲರ್: ಖಾಕಿ ಖದರ್ ನಲ್ಲಿ ಗಣೇಶ್ ಹೊಡೆದ 'ಪಟಾಕಿ']
'ಶ್ರಾವಣಿ ಸುಬ್ರಮಣ್ಯ' ಅಂತಹ ಸೂಪರ್ ಹಿಟ್ ಸಿನಿಮಾವನ್ನು ಸಿನಿ ಪ್ರಿಯರಿಗೆ ನೀಡಿದ ಮಂಜು ಸ್ವರಾಜ್ ನಿರ್ದೇಶನದ 'ಪಟಾಕಿ' ಮೇ 26 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಅಂದಹಾಗೆ ನಟ ಗಣೇಶ್ 'ಪಟಾಕಿ' ಚಿತ್ರದಲ್ಲಿ ಖಾಕಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರೂ, ಮಾಸ್ ಪ್ರೇಕ್ಷಕರನ್ನು ರಂಜಿಸುವ ಸೂಪರ್ ಡೈಲಾಗ್ ಗಳನ್ನು ಹೇಳಿ ಟ್ರೈಲರ್ ಮೂಲಕ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಸಹ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟರಾದ ಕುರಿ ಪ್ರತಾಪ್, ರಾಕ್ ಲೈನ್ ಸುಧಾಕರ್ ಮತ್ತು ಇತರರು ಅಭಿನಯಿಸಿದ್ದಾರೆ.['ಪಟಾಕಿ' ಹಚ್ಚಲಿದ್ದಾರೆ ಗಣೇಶ್ ಮತ್ತು ರನ್ಯ]

ತೆಲುಗು ಹಿಟ್ ಸಿನಿಮಾ ನಂದಮುರಿ ಕಲ್ಯಾಣ್ ರಾಮ್ ಅಭಿನಯದ 'ಪಟಾಸ್' ರಿಮೇಕ್ ಚಿತ್ರ 'ಪಟಾಕಿ' ಆಗಿದ್ದು, ಎಸ್.ಬಿ.ಬಾಬು ರವರು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











