For Quick Alerts
  ALLOW NOTIFICATIONS  
  For Daily Alerts

  ಗಣೇಶ್ 'ಸ್ಟೈಲ್ ಕಿಂಗ್' ಎರಡನೇ ಭಾಗ ಶುರು ಯಾವಾಗ?

  By Harshitha
  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಸಿನಿಮಾ ಇಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭರ್ಜರಿ ಓಪನ್ನಿಂಗ್ ಕೂಡ ಲಭಿಸಿದೆ.

  ಇಂದು 'ಸ್ಟೈಲ್ ಕಿಂಗ್' ಸಿನಿಮಾ ನೋಡಿದ ಎಲ್ಲಾ ಪ್ರೇಕ್ಷಕರಿಗೆ ಸದ್ಯ ಕಾಡುತ್ತಿರುವ ಏಕೈಕ ಪ್ರಶ್ನೆ 'ಸ್ಟೈಲ್ ಕಿಂಗ್ - 2' ಬರುತ್ತಾ? ಅಂತ.! ಯಾಕಂದ್ರೆ, 'ಸ್ಟೈಲ್ ಕಿಂಗ್' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕ ಪಿ.ಸಿ.ಶೇಖರ್ ನೀಡಿರುವ ಟ್ವಿಸ್ಟ್ ಅಂಥದ್ದು.! [ಚಿತ್ರ ವಿಮರ್ಶೆ; ಹೊಸ 'ಸ್ಟೈಲ್'ನಲ್ಲಿ 'ಕಿಂಗ್' ಆದ ಗಣೇಶ್.!]

  ಕಳ್ಳ ಕಾಶಿ (ಗಣೇಶ್) ಮಟ್ಟ ಹಾಕುವ ಕಾರ್ತಿಕ್ (ಗಣೇಶ್), ತನ್ನೆಲ್ಲಾ ಸಮಸ್ಯೆಗಳನ್ನ ಬಗೆಹರಿಸಿಕೊಂಡು ಚಿತ್ರಕ್ಕೆ ಶುಭ ಹಾಡುತ್ತಾನೆ ಅಂತ ಪ್ರೇಕ್ಷಕರು ಭಾವಿಸುವ ಹೊತ್ತಿಗೆ, ಕಾಶಿ ಬದುಕಿದ್ದಾನೆ ಅಂತ ಕಾರ್ತಿಕ್ ಗೆ ಗೊತ್ತಾಗುತ್ತೆ.

  ಇಬ್ಬರು ಮತ್ತೆ ಸವಾಲು-ಪ್ರತಿ ಸವಾಲು ಹಾಕುತ್ತಾರೆ. ಅಲ್ಲಿಗೆ, ಇಬ್ಬರ ಜುಗಲ್ಬಂದಿ 'ಸ್ಟೈಲ್ ಕಿಂಗ್ - 2' ಚಿತ್ರವಾಗಬಹುದು ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

  'ಸ್ಟೈಲ್ ಕಿಂಗ್-2' ಬರುವ ಬಗ್ಗೆ ಚಿತ್ರತಂಡದ ಬಳಿ ಸದ್ಯ ಉತ್ತರ ಇಲ್ಲ. ಅಂದ್ಹಾಗೆ, 'ಸ್ಟೈಲ್ ಕಿಂಗ್' ಚಿತ್ರದಲ್ಲಿ ಗಣೇಶ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಗಣೇಶ್ ಜೊತೆ ರಮ್ಯಾ ನಂಬೀಸನ್ ಡ್ಯುಯೆಟ್ ಹಾಡಿದ್ದಾರೆ. ನಿಮ್ಮನ್ನೆಲ್ಲಾ ನಕ್ಕು-ನಲಿಸಲು ಸಾಧು ಕೋಕಿಲ, ರಂಗಾಯಣ ರಘು ಇದ್ದಾರೆ. ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದಾರೆ.

  English summary
  Kannada Actor Ganesh starrer P.C.Shekar directorial 'Style King' movie has hit the screens today (May 13th). The movie ends with a twist. Does this indicate that the makers are planning for 'Style King-2'?
  Friday, May 13, 2016, 16:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X