»   » ವಾದ-ವಿವಾದಕ್ಕೆ ಫುಲ್ ಸ್ಟಾಪ್! 'ಸ್ಟೈಲ್ ಕಿಂಗ್' ಗೆ ಸಿಕ್ತು ಬಿಡುಗಡೆ ಭಾಗ್ಯ!

ವಾದ-ವಿವಾದಕ್ಕೆ ಫುಲ್ ಸ್ಟಾಪ್! 'ಸ್ಟೈಲ್ ಕಿಂಗ್' ಗೆ ಸಿಕ್ತು ಬಿಡುಗಡೆ ಭಾಗ್ಯ!

Posted By:
Subscribe to Filmibeat Kannada

ನಿಜ ಹೇಳ್ಬೇಕಂದ್ರೆ, ಇಷ್ಟೊತ್ತಿಗಾಗಲೇ 'ಸ್ಟೈಲ್ ಕಿಂಗ್' ಸಿನಿಮಾ ಬಿಡುಗಡೆ ಆಗಿರ್ಬೇಕಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಹಾಕಿಕೊಂಡಿದ್ದ ಪ್ಲಾನ್ ಪ್ರಕಾರ ನಡೆದಿದ್ದರೆ, ಕಳೆದ ವರ್ಷದ ಡಿಸೆಂಬರ್ ನಲ್ಲೇ 'ಸ್ಟೈಲ್ ಕಿಂಗ್' ರಿಲೀಸ್ ಆಗ್ಬೇಕಿತ್ತು. ಆದ್ರೆ, ಆಗ್ಲಿಲ್ಲ.

ಇದೇ ಕಾರಣಕ್ಕೆ, ನಿರ್ದೇಶಕ ಪಿ.ಸಿ.ಶೇಖರ್ ಬಗ್ಗೆ ಕೊಂಚ ಅಸಮಾಧಾನಗೊಂಡು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ನಲ್ಲಿ ಗಣೇಶ್ ಕ್ಷಮೆ ಕೇಳಿದ್ದರು. [ಅಭಿಮಾನಿಗಳಲ್ಲಿ ಗಣೇಶ್ ಕ್ಷಮೆ ಯಾಚಿಸಿದ್ದು ಯಾಕೆ?]

ಸಿನಿಮಾ ಬಿಡುಗಡೆ ವಿಚಾರವಾಗಿ ಇದ್ದ ಎಲ್ಲಾ ವಿವಾದಗಳು ಈಗ ಬಗೆಹರಿದಿದೆ. ಸೆನ್ಸಾರ್ ಅಂಗಳದಿಂದ 'ಸ್ಟೈಲ್ ಕಿಂಗ್' ಸಿನಿಮಾ U/A ಸರ್ಟಿಫಿಕೇಟ್ ಪಡೆದಿದೆ. ಯಾವುದೇ ಅಡೆ-ತಡೆ ಇಲ್ಲದೆ, ಈ ತಿಂಗಳ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ 'ಸ್ಟೈಲ್ ಕಿಂಗ್' ಬಿಡುಗಡೆ ಆಗಲಿದೆ.

ಗಣೇಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ 'ಸ್ಟೈಲ್ ಕಿಂಗ್' ಚಿತ್ರದಲ್ಲಿ ರಮ್ಯಾ ನಂಬೀಸನ್ ನಾಯಕಿ. ರಂಗಾಯಣ ರಘು, ಸಾಧು ಕೋಕಿಲ, ಮಿತ್ರ ಮುಂತಾದವರು 'ಸ್ಟೈಲ್ ಕಿಂಗ್' ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಬಿಡುಗಡೆಗೆ ಸಿದ್ಧವಾಗಿರುವ 'ಸ್ಟೈಲ್ ಕಿಂಗ್' ಚಿತ್ರದ ಚಿತ್ರಪುಟ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

-
-
-
-
-
-
-
-
-
-
English summary
Kannada Actor Ganesh starrer 'Style King' movie has received U/A certificate from the Censor Board. The movie is all set to release by the end of this month.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada