»   » ಗಣೇಶ್ 'ಸ್ಟೈಲ್ ಕಿಂಗ್' ಬಿಡುಗಡೆ ಮತ್ತೆ ಮುಂದಕ್ಕೆ.!

ಗಣೇಶ್ 'ಸ್ಟೈಲ್ ಕಿಂಗ್' ಬಿಡುಗಡೆ ಮತ್ತೆ ಮುಂದಕ್ಕೆ.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಚಿತ್ರದ ಬಿಡುಗಡೆ ದಿನಾಂಕ ವಾರಕ್ಕೊಮ್ಮೆ ಬದಲಾಗುತ್ತಲೇ ಇದೆ. ಈಗ ಬಂದಿರುವ ಮಾಹಿತಿ ಪ್ರಕಾರ, 'ಸ್ಟೈಲ್ ಕಿಂಗ್' ಸಿನಿಮಾ ಮೇ 13 ರಂದು ನಿಮ್ಮ ಮುಂದೆ ಬರಲಿದೆ.

ಹಾಗ್ನೋಡಿದ್ರೆ, 'ಸ್ಟೈಲ್ ಕಿಂಗ್' ಚಿತ್ರ ಮೇ 6 ರಂದು ರಿಲೀಸ್ ಆಗ್ಬೇಕಿತ್ತು. ಆದ್ರೀಗ, ಅನಿವಾರ್ಯ ಕಾರಣಗಳಿಂದ ಒಂದು ವಾರ ಮುಂದಕ್ಕೆ ಹೋಗಿದೆ.[ಗಣೇಶ್ ಅಭಿಮಾನಿಗಳಿಗೆ 'ಮೇ' ತಿಂಗಳು ಹಬ್ಬವೋ ಹಬ್ಬ.!]


Ganesh starrer 'Style King' to release on May 13th

ವಿಭಿನ್ನ ಲುಕ್ ನಲ್ಲಿ ಡಬಲ್ ರೋಲ್ ನಲ್ಲಿ ಗಣೇಶ್ ಕಾಣಿಸಿಕೊಂಡಿರುವ ಸಿನಿಮಾ 'ಸ್ಟೈಲ್ ಕಿಂಗ್'. ಈ ಚಿತ್ರದಲ್ಲಿ ಗಣೇಶ್ ಗೆ ರಮ್ಯಾ ನಂಬೀಸನ್ ನಾಯಕಿ.['ಸ್ಟೈಲ್ ಕಿಂಗ್' ಬರುವ ಮುನ್ನ 'Zooಮ್' ಮಾಡಿ ನೋಡಿ..!]


ಗಣೇಶ್ ಗಾಗಿ 'ರೋಮಿಯೋ' ಚಿತ್ರ ನಿರ್ದೇಶಿಸಿದ್ದ ಪಿ.ಸಿ.ಶೇಖರ್ 'ಸ್ಟೈಲ್ ಕಿಂಗ್' ಚಿತ್ರದ ನಿರ್ದೇಶಕ. ಹಲವಾರು ಕಾರಣಗಳಿಂದ ತಡವಾಗಿರುವ 'ಸ್ಟೈಲ್ ಕಿಂಗ್' ಮುಂದಿನ ತಿಂಗಳು ತೆರೆಗೆ ಬರುವುದು ಪಕ್ಕಾ. ನೋಡಲು ನೀವೀಗ ರೆಡಿಯಾಗಿ....

English summary
Kannada Actor Ganesh starrer 'Style King' movie is all set to release on May 13th. P.C.Shekar has directed this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada