»   » ಗಣೇಶ್ ಅಭಿಮಾನಿಗಳಿಗೆ 'ಮೇ' ತಿಂಗಳು ಹಬ್ಬವೋ ಹಬ್ಬ.!

ಗಣೇಶ್ ಅಭಿಮಾನಿಗಳಿಗೆ 'ಮೇ' ತಿಂಗಳು ಹಬ್ಬವೋ ಹಬ್ಬ.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಭಿನ್ನ-ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ 'ಸ್ಟೈಲ್ ಕಿಂಗ್' ಚಿತ್ರ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದಿದ್ರೂ, ಚಿತ್ರದ ಬಿಡುಗಡೆ ದಿನಾಂಕ ಮಾತ್ರ ಅನೌನ್ಸ್ ಆಗಿರ್ಲಿಲ್ಲ.

ಅಷ್ಟರಲ್ಲೇ, ಗಣೇಶ್ ಅಭಿನಯದ 'ZOOಮ್' ಚಿತ್ರದ ಬಿಡುಗಡೆ ದಿನಾಂಕ ಮೇ 20 ರಂದು ಅಂತ ನಿರ್ದೇಶಕ ಪ್ರಶಾಂತ್ ರಾಜ್ ಹೇಳಿಬಿಟ್ರು.[ಗಣೇಶ್ 'ಸ್ಟೈಲ್ ಕಿಂಗ್' ಚಿತ್ರದ ಸ್ಟೈಲಿಶ್ ಟ್ರೇಲರ್ ನೋಡಿದ್ರಾ?]


Ganesh starrer 'Style King' to release on May 6th

ತಮ್ಮ ಚಿತ್ರ ಮೊದಲು ಸೆನ್ಸಾರ್ ಆಗಿರುವ ಕಾರಣ ನಿರ್ದೇಶಕ ಪಿ.ಸಿ.ಶೇಖರ್ ಇದೀಗ 'ಸ್ಟೈಲ್ ಕಿಂಗ್' ಚಿತ್ರದ ಬಿಡುಗಡೆ ದಿನಾಂಕವನ್ನ ಜಗಜ್ಜಾಹೀರು ಮಾಡಿದ್ದಾರೆ.


ಹಲವಾರು ಕಾರಣಗಳಿಂದ ತಡವಾಗಿದ್ದ 'ಸ್ಟೈಲ್ ಕಿಂಗ್' ಚಿತ್ರ ಮೇ 6ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅಲ್ಲಿಗೆ, ಮೇ ತಿಂಗಳಲ್ಲಿ ಹದಿನೈದು ದಿನಗಳ ಅಂತರದಲ್ಲಿ ಗಣೇಶ್ ಅಭಿನಯದ ಎರಡು ಚಿತ್ರಗಳು ನಿಮ್ಮ ಮುಂದೆ ಬರಲಿದೆ.['ಸ್ಟೈಲ್ ಕಿಂಗ್' ಬರುವ ಮುನ್ನ 'Zooಮ್' ಮಾಡಿ ನೋಡಿ..!]


'ಮಳೆ ಹುಡುಗ'ನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮೇ ತಿಂಗಳಿನಲ್ಲಿ ಡಬ್ಕಿ ಡಬ್ಬಲ್ ಆಫರ್ ಸಿಕ್ಕ ಹಾಗಾಗಿದೆ.


ಅಂದ್ಹಾಗೆ, 'ಸ್ಟೈಲ್ ಕಿಂಗ್' ಚಿತ್ರದಲ್ಲಿ ಗಣೇಶ್ ಗೆ ರಮ್ಯಾ ನಂಬೀಸನ್ ಜೋಡಿ. ಅರ್ಜುನ್ ಜನ್ಯ ಸಂಗೀತ ಹಾಗೂ 'ರೋಮಿಯೋ' ಖ್ಯಾತಿಯ ಪಿ.ಸಿ.ಶೇಖರ್ ನಿರ್ದೇಶನ ಚಿತ್ರಕ್ಕಿದೆ.[ವಾದ-ವಿವಾದಕ್ಕೆ ಫುಲ್ ಸ್ಟಾಪ್! 'ಸ್ಟೈಲ್ ಕಿಂಗ್' ಗೆ ಸಿಕ್ತು ಬಿಡುಗಡೆ ಭಾಗ್ಯ!]


ಇನ್ನೂ 'ZOOಮ್' ಚಿತ್ರದಲ್ಲಿ ಗಣೇಶ್ ಜೊತೆ 'ಲಕ್ಕಿ ಸ್ಟಾರ್' ರಾಧಿಕಾ ಪಂಡಿತ್ ಇದ್ದಾರೆ. ಎಸ್.ಎಸ್.ಥಮನ್ ಸಂಗೀತ ನೀಡಿದ್ರೆ, ಪ್ರಶಾಂತ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ.


ಗಣೇಶ್ ಅಭಿಮಾನಿಗಳಿಗೆ 'ಮೇ' ತಿಂಗಳು ಹಬ್ಬವೋ ಹಬ್ಬ.!

ಗಣೇಶ್ ಅಭಿಮಾನಿಗಳಿಗೆ 'ಮೇ' ತಿಂಗಳು ಹಬ್ಬವೋ ಹಬ್ಬ.!

-
-
-
-
-
-
-
-
-
-
-
-
-
-
-
-
-
-
English summary
Golden Star Ganesh starrer Kannada Movie 'Style King' is all set to release on May 6th. The movie is directed by P.C.Shekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada