Just In
Don't Miss!
- News
ಅಮೆರಿಕಕ್ಕೆ ಪ್ರಯಾಣಿಸಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯ
- Sports
ಚೇತೇಶ್ವರ ಪೂಜಾರಗೆ ಮರ್ಯಾದೆ ಪ್ರಶ್ನೆ, ಭಾರೀ ಸವಾಲೆಸೆದ ಆರ್ ಅಶ್ವಿನ್!
- Finance
ವಾಟ್ಸಾಪ್ ವೆಬ್ನಿಂದಲೂ ಆಡಿಯೋ ಮತ್ತು ವೀಡಿಯೋ ಕರೆಗಳನ್ನು ಮಾಡಬಹುದು!
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಗೀತಾ' ಜೊತೆ ಗಣೇಶ್ ಬ್ಯುಸಿ : ಗೋಲ್ಡನ್ ಸ್ಟಾರ್ ಕನ್ನಡಕ ಹುಡುಕಾಟ ಇನ್ನು ತಡವಾಗಲಿದೆ
ಗೋಲ್ಡನ್ ಸ್ಟಾರ್ ಸ್ಟಾರ್ ಗಣೇಶ್ ಬಗ್ಗೆ ಏನಿದು ಸುದ್ದಿ ಅಂತ ಅಂದ್ಕೋತಿದ್ದೀರಾ. ಗಣೇಶ್ ಸದ್ಯ ಬಹು ನಿರೀಕ್ಷೆಯ 'ಗೀತಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ 'ಗೀತಾ' ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ ಚಿತ್ರತಂಡ.
'ಗೀತಾ' ಚಿತ್ರ ಗಣೇಶ್ ಪಾಲಿಗೆ ವಿಶೇಷವಾದ ಚಿತ್ರವಾಗಿದೆ. ಯಾಕಂದ್ರೆ ಗೋಲ್ಡನ್ ಸ್ಟಾರ್ ಹೋಮ್ ಬ್ಯಾನರ್ ಗೋಲ್ಡನ್ ಮೂವೀಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾವಾಗಿದೆ. ಅಭಿನಯದ ಜೊತೆಗೆ ಚಿತ್ರದ ಸಂಪೂರ್ಣ ಜವಾಬ್ದಾರಿ ಗಣೇಶ್ ಮೇಲಿದೆ. ಹಾಗಾಗಿ ಗಣೇಶ್ ಸದ್ಯ 'ಗೀತಾ' ಒತ್ತಡಲ್ಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ
ಇದರೆ ನಡುವೆ ಗಣೇಶ್ ಕನ್ನಡಕದ ವಿಚಾರ ಯಾಕೆ ಅಂತ ಅಚ್ಚರಿ ಆಗುತ್ತಿದೆಯಾ. ಗಣೇಶ್ ಅಭಿನಯದ ಮುಂದಿನ ಸಿನಿಮಾದ ಹೆಸರು 'ವೇರ್ ಈಸ್ ಮೈ ಕನ್ನಡಕ'. ಈಗಾಗಲೆ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದ್ರೀಗ ಕೊಂಚ ತಡವಾಗುವ ಸಾಧ್ಯತೆ ಇದೆಯಂತೆ.

'ವೇರ್ ಈಸ್ ಮೈ ಕನ್ನಡಕ'
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ಈಗಾಗಲೆ ಚಿತ್ರದ ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಸಿದ್ಧವಾಗಿದ್ದ ಚಿತ್ರತಂಡ ಈಗ ದಿಢೀರನೆ ಸೈಲೆಂಟ್ ಆಗಿದೆ. ಕಾರಣ ಗಣೇಶ್ ಗೀತಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಗಣೇಶ್ ಅಭಿನಯದ ಜೊತೆಗೆ ನಿರ್ಮಾಣ ಕೂಡ ಅವರ ಹೆಗಲಮೇಲಿರುವುದರಿಂದ ವೇಸ್ ಈಸ್ ಮೈ ಕನ್ನಡ ಚಿತ್ರದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ತಾತ್ಕಾಲಿಕವಾಗಿ ಚಿತ್ರವನ್ನು ಮುಂದೂಡಲಾಗಿದೆಯಂತೆ.

ಚಿತ್ರದ ಸ್ಕ್ರಿಪ್ಟ್ ಬದಲಾವಣೆ
ವೇರ್ ಈಸ್ ಮೈ ಕನ್ನಡಕ ಚಿತ್ರದ ಕತೆಯನ್ನು ಪುನಃ ಬರೆಯಲಾಗುತ್ತಿದೆಯಂತೆ. ಹಾಗಾಗಿ ಚಿತ್ರ ಕೊಂಚ ತಡವಾಗುತ್ತಿದೆಯಂತೆ. ಅಂದ್ಹಾಗೆ ಚಿತ್ರಕ್ಕೆ ರಾಜ್ ಮತ್ತು ದಾಮಿಸಿ ಇಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿರುವುದರಿಂದ ಚಿತ್ರದ ಬಗ್ಗೆ ತುಂಬಾ ಕಾಳಜಿ ವಹಿಸಿ ಮಾಡುತ್ತಿದ್ದಾರೆ. ಇದರ ಜೊತೆಗೆ ಲೊಕೇಶನ್ ಸಹ ಸಮಸ್ಯೆಯಾಗಿದೆಯಂತೆ. ಚಿತ್ರತಂಡ ಲಂಡನ್ ನಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದರು. ಆದ್ರೀಗ ವಿಶ್ವಕಪ್ ನಡೆಯುತ್ತಿರುವುದರಿಂದ ಸಾಧ್ಯವಾಗುತ್ತಿಲ್ಲ.
ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಗಣೇಶ್ 'ಗಿಮಿಕ್'

ಗಣೇಶ್ ಹುಟ್ಟುಹಬ್ಬಕ್ಕೆ ಗೀತಾ ಟೀಸರ್
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಮುಂದಿನ ತಿಂಗಳು ಜುಲೈ 2ಕ್ಕೆ ಗಣೇಶ್ ಹುಟ್ಟುಹಬ್ಬ. ಆದ್ರೆ ಈ ಬಾರಿ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಆದ್ರೆ ಅಭಿಮಾನಿಗಳಿಗೆ ಮಾತ್ರ ಗಣೇಶ್ ಕಡೆಯಿಂದ ಗಿಫ್ಟ್ ಸಿದ್ಧವಾಗಿದೆ. ಗೀತಾ ಚಿತ್ರದ ಟೀಸರ್ ಅನ್ನು ರಿಲೀಸ್ ಮಾಡಲಾಗುತ್ತಿದೆ. ಆಗಸ್ಟ್ ನಲ್ಲಿ ಚಿತ್ರದ ಆಡಿಯೋ ತೆರೆಗೆ ಬರಲಿದೆ.

ರಿಲೀಸ್ ಗೆ ಆಗಿದೆ 'ಗಿಮಿಕ್'
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಿಮಿಕ್' ಚಿತ್ರಕೂಡ ರಿಲೀಸ್ ಗೆ ರೆಡಿಯಾಗಿದೆ. ಚಿತ್ರಕ್ಕೆ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳಿದ್ದಾರೆ. 'ಗಿಮಿಕ್' ಚಿತ್ರ ಕೂಡ ಸಧ್ಯದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು ಗಣೇಶ್ ಕೈಯಲ್ಲಿ ಹೆಸರಿಡದ ಮಹೇಶ್ ಗೌಡ ನಿರ್ದೇಶನದ ಚಿತ್ರ ಕೂಡ ಇದೆ. ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರುವ ಗಣೇಶ್ ಸಧ್ಯದಲ್ಲೆ 'ಗೀತಾ' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.