'ಪ್ರೇಮಿಗಳ ದಿನಕ್ಕೆ' ಸ್ಪೆಷಲ್ ಗಿಫ್ಟ್ ಕೊಟ್ಟ 'ಮುಗುಳುನಗೆ' ಚಿತ್ರತಂಡ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಮುಗುಳುನಗೆ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಪ್ರೇಮಿಗಳ ದಿನದ ವಿಶೇಷವಾಗಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದೆ.
'ಗಾಳಿಪಟ' ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ ಗಣೇಶ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದಲ್ಲಿ ಗಣೇಶ್ ಅವರ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ.[ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ']

'ಮುಗುಳುನಗೆ' ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಅಮೂಲ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಅಮೂಲ್ಯ ಜೊತೆಯಲ್ಲಿ 'ಕ್ರೇಜಿಬಾಯ್' ಚಿತ್ರದ ನಾಯಕಿ ಆಶಿಕಾ, ಮತ್ತು ನಿಖಿತಾ ನಾರಾಯಣ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.[ಗಣೇಶ್ 'ಮುಗುಳುನಗೆ'ಗೆ ಟಿಕೆಟ್ ಪಡೆದ 4 ನಟಿಯರು ಇವರೆ!]
ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಯೋಗರಾಜ್ ಮೂವೀಸ್ ಮತ್ತು ಗೋಲ್ಡನ್ ಮೂವೀಸ್ ಬ್ಯಾನರ್‌ನಡಿ, ಯೋಗರಾಜ್ ಭಟ್ ಹಾಗೂ ಗಣೇಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆಯಲಿದ್ದಾರೆ. ಸದ್ಯ, ಪಾಂಡಿಚೇರಿಯಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ಚಿತ್ರತಂಡ ಮತ್ತೆ ಶೂಟಿಂಗ್ ಶುರು ಮಾಡಲಿದೆ.['ಮುಗುಳುನಗೆ' ಚಿತ್ರಕ್ಕಾಗಿ ಭಟ್ಟರು ಬರೆದರು 'ಮುಗುಳುಗೀತೆ'.! ]


Click it and Unblock the Notifications











