'ಗೀತಾ' ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಹೊಸ ಲುಕ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗೀತಾ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. 'ಗೀತಾ' ಅನ್ನುವ ಟೈಟಲ್ ಕೇಳಿದ ತಕ್ಷಣವೇ ಅಭಿಮಾನಿಗಳು ಶಂಕರ್ ನಾಗ್ ಅವರನ್ನ ನೆನಪಿಸುವಂತ ಸಿನಿಮಾ ಮಾಡ್ತಾರೆ ಎನ್ನುವ ಖುಷಿಯಲ್ಲಿದ್ದರು. ಸದ್ಯ ಬಿಡುಗಡೆ ಆಗಿರುವ ಚಿತ್ರದ ಫಸ್ಟ್ ಲುಕ್ ಅಭಿಮಾನಿಗಳ ಖುಷಿ ದುಪ್ಪಟ್ಟು ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಫೋಟೋ ಶೂಟ್ ಮುಗಿಸಿದ್ದು ಗಣಿ ಹೊಸ ರೀತಿಯ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಇತ್ತ ಕಂಪ್ಲೀಟ್ ರೆಟ್ರೋ ಲುಕ್ ಅಲ್ಲ..ಅತ್ತ ಕಂಪ್ಲೀಟ್ ಮಾಡ್ರನ್ ಲುಕ್ ಕೂಡ ಅಲ್ಲ. ಆದರೆ ರೊಮ್ಯಾಂಟಿಕ್ ಫೀಲ್ ನೀಡುವಂತಿದೆ 'ಗೀತಾ' ಸಿನಿಮಾ ಪೋಸ್ಟರ್. ಸಂತೋಷ್ ಆನಂದ್ ರಾಮ್ ಅವರ ಜೊತೆಯಲ್ಲಿ ಕೆಲಸ ಮಾಡಿದ್ದ ವಿಜಯ ನಾಗೇಂದ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು 'ಮುಗುಳುನಗೆ' ನಿರ್ಮಾಪಕರಾದ ಸೈಯ್ಯದ್ ಸಲಾಂ ಹಾಗೂ ಗೋಲ್ಡನ್ ಐ ಮೂವೀಸ್ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
ಸದ್ಯ ಪ್ರೀ ಪ್ರೊಡಕ್ಷನ್ಸ್ ಕೆಲಸ ಶುರು ಮಾಡಿರುವ ನಿರ್ದೇಶಕ ವಿಜಯ ನಾಗೇಂದ್ರ ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಶುರು ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಮೈಸೂರು, ಬೆಂಗಳೂರು, ಕಲ್ಕತ್ತಾದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆ ಸಿನಿಮಾತಂಡ. ಹರಿಕೃಷ್ಣ ಮ್ಯೂಸಿಕ್, ಶ್ರೀಶಾ ಕ್ಯಾಮೆರಾ ವರ್ಕ್ ಗೀತಾ ಚಿತ್ರಕ್ಕಿರಲಿದೆ.

ಸದ್ಯ ಬಿಡುಗಡೆ ಆಗಿರುವ ಫಸ್ಟ್ ಲುಕ್ ಪೊಸ್ಟರ್ ನಲ್ಲಿ ಗಣೇಶ್ ಮೈಸೂರು ಹುಡ್ಗ ಅನ್ನೋದು ಪಕ್ಕಾ ಆಗಿದೆ. ಅಷ್ಟೇ ಅಲ್ಲದೆ ಕನ್ನಡ ಹಾಗೂ ಕರ್ನಾಟಕದ ಪ್ರೇಮಿ ಎನ್ನುವುದು ತಿಳಿಯುತ್ತಿದೆ. ಹೊಸ ಲುಕ್ಕು, ಹಳೆ ಟೈಟಲ್ ಎಲ್ಲವೂ ಅಭಿಮಾನಿಗಳ ಕುತೂಹಲ ದುಪ್ಪಟ್ಟು ಮಾಡುತ್ತಿರುವುದಂತು ನಿಜ.


Click it and Unblock the Notifications











