For Quick Alerts
  ALLOW NOTIFICATIONS  
  For Daily Alerts

  ಗಣೇಶ್-ಯೋಗರಾಜ್ ಭಟ್ ಹ್ಯಾಟ್ರಿಕ್ ಸಿನಿಮಾ: ನಾಯಕಿ ಯಾರು?

  By Harshitha
  |

  ಸ್ಯಾಂಡಲ್ ವುಡ್ ನಲ್ಲಿ 'ಮುಂಗಾರು ಮಳೆ' ಸುರಿಸಿ, 'ಗಾಳಿಪಟ' ಹಾರಿಸಿದ್ಮೇಲೆ ಹ್ಯಾಟ್ರಿಕ್ ಬಾರಿಸಲು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಇದೀಗ ಒಂದಾಗಿದ್ದಾರೆ.

  ಭಟ್ರು ಮತ್ತು ಗಣಿ ಕಾಂಬಿನೇಷನ್ ನಲ್ಲಿ ಮೂರನೇ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಈ ಚಿತ್ರದ ಕುರಿತು ಒಂದು ಹೊಸ ಸುದ್ದಿಯನ್ನ ಹೊತ್ತು ತಂದಿದ್ದೀವಿ, ಓದಿ....

  ನಾಲ್ವರು ನಾಯಕಿಯರು

  ನಾಲ್ವರು ನಾಯಕಿಯರು

  ಗಣಿ-ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ನ ಈ ಚಿತ್ರದಲ್ಲಿ ನಾಲ್ವರು ನಾಯಕಿಯರ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. [ಗಣೇಶ್ ಮತ್ತು ಯೋಗರಾಜ್ ಭಟ್ ಅಡ್ಡದಿಂದ ಇದೀಗ ಬಂದ ಸುದ್ದಿ]

  ನಾಲ್ಕು ನಾಯಕಿಯರು ಯಾರ್‌ ಯಾರು?

  ನಾಲ್ಕು ನಾಯಕಿಯರು ಯಾರ್‌ ಯಾರು?

  ನಾಲ್ವರು ಹೀರೋಯಿನ್ ಗಳ ಆಯ್ಕೆ ಪ್ರಕ್ರಿಯೆ ಈಗ ಶುರು ಆಗಿದೆ. ಇನ್ನೂ ಯಾರೂ ಫೈನಲ್ ಆಗಿಲ್ಲ. [ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

  ಹೊಸಬರಿಗೆ ಚಾನ್ಸ್?

  ಹೊಸಬರಿಗೆ ಚಾನ್ಸ್?

  ನಾಲ್ವರು ಹೀರೋಯಿನ್ ಗಳ ಪೈಕಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಲೀಡಿಂಗ್ ಇರುವ ನಟಿ ಜೊತೆ ಹೊಸಬರಿಗೂ ಚಾನ್ಸ್ ಸಿಗಲಿದೆ. [ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?]

  'ದನ ಕಾಯೋನು' ರಿಲೀಸ್ ಆಗ್ಬೇಕು.!

  'ದನ ಕಾಯೋನು' ರಿಲೀಸ್ ಆಗ್ಬೇಕು.!

  ದಸರಾ ಹಬ್ಬದ ಪ್ರಯುಕ್ತ ಭಟ್ರು ನಿರ್ದೇಶನದ 'ದನ ಕಾಯೋನು' ಬಿಡುಗಡೆ ಆಗಲಿದೆ. ಹೀಗಾಗಿ, 'ದನ ಕಾಯೋನು' ಚಿತ್ರದ ಪ್ರಮೋಷನ್ ನಲ್ಲಿ ಸದ್ಯ ಬಿಜಿಯಿದ್ದಾರೆ ಯೋಗರಾಜ್ ಭಟ್. ಅದು ಮುಗಿದ ಬಳಿಕ ಹೊಸ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಲಿದ್ದಾರೆ.

  ಭಟ್-ಗಣಿ ಜಂಟಿ ನಿರ್ಮಾಣ

  ಭಟ್-ಗಣಿ ಜಂಟಿ ನಿರ್ಮಾಣ

  ಯೋಗರಾಜ್ ಭಟ್ ಹಾಗೂ ಗಣೇಶ್ ರವರ ಜಂಟಿ ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗಲಿದೆ.

  ಮಳೆ ಬರುತ್ತಾ?

  ಮಳೆ ಬರುತ್ತಾ?

  ಮೂಲಗಳ ಪ್ರಕಾರ, ಈ ಚಿತ್ರ ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್. ಇದರಲ್ಲಿ ಮಳೆ ಬರುತ್ತೋ, ಇಲ್ವೋ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.

  English summary
  Director Yogaraj Bhat and Kannada Actor Ganesh have finally come together for their yet-to-be-titled Hattrick Movie. In this Film, Ganesh is all set romance 4 heroines, who are yet to be finalised.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X