ಮದ್ದೂರು ಘಟನೆ; ಕರ್ನಾಟಕವನ್ನು ಪಾ*ಸ್ತಾನ ಮಾಡೋಕೆ ಹೊರಟಿದ್ದೀರಾ? ನಾಚಿಕೆಯಾಗ್ಬೇಕು ಸ್ವಾಮಿ"- ಕಾವ್ಯಾ ಶಾಸ್ತ್ರೀ

ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಕೆಲವರಿಗೆ ಪೆಟ್ಟಾಗಿದ್ದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಇನ್ನು ಘಟನೆ ರಾಜಕೀಯ ಸ್ವರೂಪ ಪಡೆದು ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ಇದೀಗ ಈ ಬಗ್ಗೆ ನಟಿ ಕಾವ್ಯಾ ಶಾಸ್ತ್ರಿ ಪೋಸ್ಟ್ ಮಾಡಿದ್ದಾರೆ.

ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಮದ್ದೂರಿನ ಬೀದಿಗಳಲ್ಲಿ ಗಣಪತಿ ಮೆರವಣಿ ನಡೆಸುತ್ತಿದ್ದರು. ಈ ವೇಳೆ ಮಸೀದಿ ಬಳಿಗೆ ಮೆರವಣಿಗೆ ಬಂದಿದ್ದು ಈ ವೇಳೆ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಿದ್ದಾರೆ. ಈ ವೇಳೆ ಕಲ್ಲು ತೂರಿದವರ ಮೇಲೆ ಪ್ರತಿಯಾಗಿ ಕಲ್ಲು ತೂರಿದ್ದಾರೆ. ಈ ವೇಳೆ ನಾಲ್ವರು ಹೋಮ್‌ ಗಾರ್ಡ್‌ ಸೇರಿದಂತೆ ಎಂಟು ಮಂದಿಗೆ ಗಾಯವಾಗಿದೆ.

Ganesh Visarjan Clash in Maddur Actress Kavya Shastri Slams Karnataka Home Minister s Remarks

ನಿನ್ನೆ(ಸೆಪ್ಟೆಂಬರ್ 7) ರಾತ್ರಿ 7.30ರ ವೇಳೆ ಮದ್ದೂರಿನ ಚನ್ನೇಗೌಡ ಬಡಾವಣೆ ಬಳಿ ಗಲಾಟೆ ನಡೆದಿದೆ. ಅಲ್ಲಿನ ನಿವಾಸಿಗಳು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ ಮೆರವಣೆಗೆ ಮೂಲಕ ಮೂರ್ತಿ ವಿಸರ್ಜನೆಗೆ ಹೊರಟ್ಟಿದ್ದರು. ಮಸೀದಿ ಬಳಿ ಮೆರವಣಿಗೆ ಬಂದಾಗ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು 21 ಮುಸ್ಲಿಮರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ BNS ಕಾಯ್ದೆ 189(2), 189(4), 121(2), 132ರ ಹಾಗೂ 190ರ ಅಡಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧ ತುಮಕೂರಿನಲ್ಲಿ ಗೃಹ ಸಚಿವ ಜಿ. ಆರ್ ಪರಮೇಶ್ವರ್ ಮಾತನಾಡಿದ್ದಾರೆ. "ಘಟನೆ ಸಂಬಂಧ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ. ಯಾರೆಲ್ಲಾ ಸೇರಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವುದು ಗೊತ್ತಿಲ್ಲ. ಹಿಂದೂ ಪರವಾದ ಸಂಘಟನೆಯವರು ಸೇರಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ" ಎಂದಿದ್ದಾರೆ.

Ganesh Visarjan Clash in Maddur Actress Kavya Shastri Slams Karnataka Home Minister s Remarks

ಸದ್ಯ ಗೃಹ ಸಚಿವರ ಹೇಳಿಕೆ ಬಗ್ಗೆ ನಟಿ ಕಾವ್ಯಾ ಶಾಸ್ತ್ರೀ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಮದ್ದೂರಿನ ಗಣೇಶ ವಿಸರ್ಜನೆ ವೇಳೆಯ ದಾಂಧಲೆಗೆ ಹಿಂದೂ ಸಂಘಟನೆಗಳು ಕಾರಣ ಎನ್ನುವ ಶಂಕೆ ಅಂದಿರೋ ಗೃಹ ಮಂತ್ರಿಗಳು. ನಾಚಿಕೆ ಆಗಬೇಕು ಸ್ವಾಮಿ, ಆ ಸ್ಥಾನದಲ್ಲಿದ್ದು ಇಂತಹ ಮಾಡುಗಳನ್ನು ಆಡುವುದಕ್ಕೆ. ಕರ್ನಾಟಕವನ್ನು ಪಾ*ಸ್ತಾನ ಮಾಡೋಕೆ ಹೊರಟಿದ್ದೀರಾ ಹೇಗೆ?" ಎಂದು ಪ್ರಶ್ನಿಸಿದ್ದಾರೆ.

ಕಾವ್ಯಾ ಈ ಪೋಸ್ಟ್ ಮಾಡುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವರು ಅನ್‌ಫಾಲೋ ಮಾಡೋಕೆ ಆರಂಭಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾ ಸ್ಟೋರಿ ಹಾಕಿ ಪ್ರತಿಕ್ರಿಯಿಸಿದ್ದಾರೆ. "ಹಿಂದೂ ಪರ ಪೋಸ್ಟ್ ಹಾಕಿದ್ರೆ, ಅನ್‌ಫಾಲೋ ಮಾಡೋದು ಮತ್ತೆ ಶುರು ಆಗಿದೆ. ನನಗೆ ಒಬ್ಬನೇ ಒನ್ನ ಫಾಲೋವರ್ ಇದ್ರೂ, ಯಾರೂ ಫಾಲೋ ಮಾಡೋದೆ ಇಲ್ಲ ಅಂದ್ರೂ, ನಾನು ನನ್ನ ಧರ್ಮದ ಪರ ಮಾತನಾಡ್ತೀನಿ" ಎಂದು ಬರೆದುಕೊಂಡಿದ್ದಾರೆ.

"ನಾನು ನನ್ನ ಧರ್ಮಕ್ಕಾಗಿ ನಿಲ್ಲುತ್ತೇನೆ ಎಂಬ ಕಾರಣಕ್ಕಾಗಿ ನನ್ನನ್ನು ಅನ್‌ಫಾಲೋ ಮಾಡುವ ಜನರ ಬಗ್ಗೆ ನನಗೆ ತುಂಬಾ ಕಾಳಜಿ ಇದೆ" ಎಂದು ತಿಳಿಸಿದ್ದಾರೆ. ವಿಶೇಷ ಸೂಚನೆ ಎಂದು ಬರೆದು "ಜಾತ್ಯತೀತತೆ ಎಂದರೆ ಎಲ್ಲಾ ಧರ್ಮಗಳನ್ನು ಗೌರವಿಸುವುದು. ಅದರರ್ಥ ನೀವು ಇತರರನ್ನು ಬೆಂಬಲಿಸಲು ನಿಮ್ಮ ಸ್ವಂತ ಧರ್ಮವನ್ನು ತ್ಯಜಿಸಬೇಕು ಅಂತ ಅಲ್ಲ" ಎಂದು ತಿಳಿಸಿದ್ದಾರೆ.

ಕಾವ್ಯ ಪೋಸ್ಟ್ ಬಗ್ಗೆ ಸಾಕಷ್ಟು ಜನ ಬೆಂಬಲ ಸೂಚಿಸಿದ್ದಾರೆ. ನಿಮ್ಮ ಧೈರ್ಯಕ್ಕೆ ಸಲಾಂ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ. ಕಿರುತೆರೆ ನಿರೂಪಕಿಯಾಗಿ ಪರಿಚಿತರಾಗಿದ್ದ ಕಾವ್ಯ ಬಳಿಕ ಕೆಲ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ಸಾಕಷ್ಟು ಉಪಯುಕ್ತ ವಿಷಯಗಳ ಬಗ್ಗೆ ವೀಡಿಯೋ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Ganesh Idol Immersion Turns Tense in Maddur; Kavya Shastri Questions Minister’s Stand
Read more about: actress sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X