'ಖುಷಿ ಖುಷಿಯಾಗಿ' ಐಸುಗೆ ಶುಭಕೋರಿದ ಮಾದೇಸ
ಇಂದು (ಸಪ್ಟೆಂಬರ್ 14) ನಟಿ ಅಮೂಲ್ಯ ತಮ್ಮ ಹುಟ್ಟುಹಬ್ಬ ಸಂಭ್ರಮದಲ್ಲಿ ಇದ್ದಾರೆ. ಅಮೂಲ್ಯಗೆ ಅಭಿಮಾನಿಗಳ ಪ್ರೀತಿಯ ವಿಶ್ ತಲುಪಿದೆ. ನಟ ಗಣೇಶ್ ಕೂಡ ಅಮೂಲ್ಯಗೆ ಶುಭ ಹಾರೈಸಿದ್ದಾರೆ.
ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ಹುಟ್ಟುಹಬ್ಬದ ಶುಭಾಶಯಗಳು ಐಸು....'' ಎಂದು ಬರೆದಿದ್ದಾರೆ. ಅಮೂಲ್ಯ ಜೊತೆಗೆ ಕ್ಲಿಕ್ಕಿಸಿದ ಸುಂದರ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಗಣೇಶ್ ಪತ್ನಿ ಶಿಲ್ಪಾ ಕೂಡ ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.
ಗಣೇಶ್ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಅಮೂಲ್ಯಗೆ ವಿಶ್ ಹೇಳಿದ್ದಾರೆ. ಜೊತೆಗೆ ಮಾದೇಸ ಮತ್ತು ಐಸು ಜೋಡಿಯನ್ನು ತೆರೆ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಗಣೇಶ್ ಮತ್ತು ಅಮೂಲ್ಯ 'ಗೋಲ್ಡನ್ ಜೋಡಿ' ಎಂದು ಹೆಸರು ಪಡೆದಿದ್ದರು. 'ಚೆಲುವಿನ ಚಿತ್ತಾರ', 'ಶ್ರಾವಣಿ ಸುಬ್ರಮಣ್ಯ', 'ಖುಷಿ ಖುಷಿಯಾಗಿ' ಹಾಗೂ 'ಮುಗುಳು ನಗೆ' ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಅಭಿಮಾನಿಗಳಿಗೆ ಅಮೂಲ್ಯ ಮನವಿ
''ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ, ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ, ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ, ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು.'' ಎಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಅಮೂಲ್ಯ ಬರೆದುಕೊಂಡಿದ್ದಾರೆ.


Click it and Unblock the Notifications











