For Quick Alerts
  ALLOW NOTIFICATIONS  
  For Daily Alerts

  ಡೈನಾಮಿಕ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಗಣೇಶ್

  By Suneel
  |

  ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಅವರು 30 ನೇ ವರ್ಷದ ಜನುಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

  2007 ರಲ್ಲಿ 'ಸಿಕ್ಸರ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು ಇದುವರೆಗೆ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿದ್ದ 'ಚೌಕ' ಚಿತ್ರವು ಸಹ ಭರ್ಜರಿ ಶತದಿನಗಳನ್ನು ಪೂರೈಸಿದೆ. ಇಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರತಂಡದ ಹಲವರು ಶುಭಕೋರಿದ್ದಾರೆ.

  ನೆಚ್ಚಿನ ಗೆಳೆಯ ಡೈನಾಮಿಕ್ಸ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರಿಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ರವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಅವರಿಬ್ಬರು ಜೊತೆಯಲ್ಲಿರುವ ಫೋಟೋ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ವಿಶೇಷ ಅಂದ್ರೆ ಪ್ರಜ್ವಲ್ ಜುಲೈ 2 ರಂದು ಗಣೇಶ್ ರವರ ಜನುಮದಿನಕ್ಕೆ ಶುಭಕೋರಲು ಫೇಸ್‌ಬುಕ್‌ ನಲ್ಲಿ ಯಾವ ಫೋಟೋ ಬಳಸಿದ್ದರೋ ಅದೇ ಫೋಟೋವನ್ನು ಶೇರ್ ಮಾಡಿ ಗಣೇಶ್ ರವರು ವಿಶ್ ಮಾಡಿದ್ದಾರೆ.

  ಪ್ರಜ್ವಲ್ ದೇವರಾಜ್ ರವರು 'ಚೌಕ' ಚಿತ್ರದ ನಂತರ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ಸುದ್ದಿ ನಿಜವಾದಲ್ಲಿ ಅವರು ಮೊದಲು ತಮಿಳಿನ 'ತಗರಾರು(ತಕರಾರು)' ಚಿತ್ರದ ಕನ್ನಡ ರಿಮೇಕ್ ನಲ್ಲಿ ಅಭಿನಯಿಸಲಿದ್ದಾರೆ. ನಂತರ ಸಂಭಾಷಣೆ ಬರಹಗಾರ ಮನು ಎಂಬುವವರು ಪ್ರಜ್ವಲ್ ಗೆ ಔಟ್-ಅಂಡ್-ಔಟ್ ಕಮರ್ಸಿಯಲ್ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಗುಲ್ಲು ಗಾಂಧಿನಗರದಲ್ಲಿ ಹಬ್ಬಿದೆ. ಅಂದಹಾಗೆ ಪ್ರಜ್ವಲ್ ದೇವರಾಜ್ ರವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

  ತಮಿಳಿನ 'ತಗರಾರು' ರಿಮೇಕ್ ನಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್

  English summary
  Golden Star Ganesh has taken his twitter account to wish Prajwal Devraj Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X