ಗಣೇಶ್ ಗೆ ಈ ವ್ಯಕ್ತಿ ಬಗ್ಗೆ ಐತಿಹಾಸಿಕ ಸಿನಿಮಾ ಮಾಡಲು ಇಷ್ಟವಂತೆ.!

By Bharath Kumar

ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್ ವುಡ್ ರೊಮ್ಯಾಂಟಿಕ್ ಹೀರೋ. ಹಾಗಂತ ಬರಿ ಕ್ಲಾಸ್ ಸಿನಿಮಾಗಳು ಮಾತ್ರವಲ್ಲ, ಮಾಸ್ ಸಿನಿಮಾಗಳಿಗೆ ಸೈ ಅಂತಾರೆ. ಆದ್ರೆ, ಹೆಚ್ಚು ಜನಪ್ರಿಯತೆ ಹೊಂದಿರುವುದು ಮಾತ್ರ ಲವರ್ ಬಾಯ್ ಇಮೇಜ್ ನಲ್ಲಿ.

ಸದ್ಯ, ಗಣೇಶ್ ಅಭಿನಯದ 'ಮುಗುಳುನಗೆ' ಸಿನಿಮಾ ಬಿಡುಗಡೆಯಾಗಿದೆ. ಇದಾದ ನಂತರ ಸಿಂಪಲ್ ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಮತ್ತಷ್ಟು ಹೊಸ ಹೊಸ ಚಿತ್ರಗಳನ್ನ ಕೈಗೆತ್ತಿಕೊಂಡಿದ್ದಾರೆ. ಹೀಗಿರುವಾಗ, ನಟ ಗಣೇಶ್ ಗೆ ಒಂದು ಆಸೆ ಇದೆಯಂತೆ. ಈ ಪಾತ್ರ ಮಾಡಬೇಕು ಎಂಬ ಗುರಿ ಇದೆಯಂತೆ.

Ganesh would like to do a historic film on HM Nayak

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಐತಿಹಾಸಿಕ ಸಿನಿಮಾ ಮಾಡುವ ಬಯಕೆ ಇದೆ. ಹಾಗಿದ್ರೆ, ಯಾವ ಹೋರಾಟಗಾರ, ಯಾವ ರಾಜನ ಬಗ್ಗೆ ಎಂಬ ಕುತೂಹಲ ಕಾಡುವುದು ಸಹಜ. ಅಷ್ಟಕ್ಕೂ, ಗಣೇಶ್ ಮಾಡಬೇಕೆಂದಿರುವ ಆ ಐತಿಹಾಸಿಕ ಸಿನಿಮಾ 'ಎಚ್ಚಮನಾಯಕ'.

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ವೃತ್ತಿ ಜೀವನದಲ್ಲಿ ಮಾಡುಬೇಕೆಂದಿರುವ ಸಿನಿಮಾ ಎಚ್ಚಮನಾಯಕ. ಅಂದ್ಹಾಗೆ, ಎಚ್ಚಮನಾಯಕ...ವಿಜಯನಗರ ಸಾಮ್ರಾಜ್ಯದ ಅನಂತರ ಚಂದ್ರಗಿರಿಯಲ್ಲಿ ಆಳುತ್ತಿದ್ದ ಅರವೀಡು ವಂಶದ ಅರಸರಲೊಬ್ಬನಾದ ವೆಂಕಟರಾಯನ ಪ್ರೀತಿಯ ಸರದಾರ, ಸ್ವಾಮಿನಿಷ್ಠೆ, ದೇಶಾಭಿಮಾನಿ. ಕನ್ನಡನಾಡಿನ ಇತಿಹಾಸದಲ್ಲಿ ಎಚ್ಚಮನಾಯಕನೊಬ್ಬ ಆದರ್ಶ ಪುರುಷ.

ಇತ್ತೀಚೆಗೆ ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಹೆಚ್ಚು ಹೆಚ್ಚು ಬರುತ್ತಿವೆ. ಈಗ ಗಣೇಶ್ ಅವರು ಕೂಡ ಇಂತಹ ಬಯಕೆ ಹೊಂದಿರುವುದು ನೋಡಿದರೇ, ಮುಂದಿನ ದಿನದಲ್ಲಿ ಇದು ಸಾಧ್ಯವಾದರೂ ಅಚ್ಚರಿಯಿಲ್ಲ.

More from Filmibeat

English summary
Kannada Actor, Golden Star Ganesh would love to do a historic film on the life of HM Nayak’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X