ನಿಖಿಲ್ ಕುಮಾರ್ ಮತ್ತು ಸುಲಮತಾ ಅಂಬರೀಶ್ ಮನೆಯಲ್ಲಿ ಗಣೇಶ ಆಚರಣೆ ಹೇಗಿದೆ ನೋಡಿ
ಸಿನಿಮಾ ಸೆಲೆಬ್ರಿಟಿಗಳ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಬಾಲಿವುಡ್ ಮಂದಿಯ ಹಾಗೆ ಸ್ಯಾಂಡಲ್‌ವುಡ್ ನಲ್ಲೂ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಹುತೇಕ ಸ್ಟಾರ್‌ಗಳ ಮನೆಯಲ್ಲಿ ಗಣೇಶನ್ನು ಕೂರಿಸಿ, ವಿಶೇಷವಾಗಿ ಪೂಜೆ ಮಾಡುವ ಮೂಲಕ ಗಣಪನ ಆರಾಧನೆ ಮಾಡಿದ್ದಾರೆ.
ಪ್ರತಿಯೊಬ್ಬ ಸ್ಟಾರ್‌ಗಳ ಮನೆಯಲ್ಲೂ ತರಹೇವಾರಿ ಗಣಪತಿಗಳು ಕಂಗೊಳಿಸುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಕಲಾವಿದರ ಮನೆಯಲ್ಲಿ ಕುಳಿತ ಗಣಪನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳು ಸಹ ತಮ್ಮ ಮನೆಯಲ್ಲಿನ ಗಣೇಶ ಹಬ್ಬದ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ, ಜಗ್ಗೇಶ್, ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಸ್ವಾಮಿ ಸೇರಿದಂತೆ ಅನೇಕರು ತಮ್ಮ ಮನೆಯ ಗಣೇಶ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ, ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅದ್ದೂರಿಯಾಗಿ ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ. ಕುಟುಂಬದ ಜೊತೆ ಹಬ್ಬ ಆಚರಣೆ ಮಾಡಿರುವ ನಿಖಿಲ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಪತ್ನಿ ರೇವತಿ ಜೊತೆ ಹಬ್ಬ ಆಚರಣೆ ಮಾಡಿದ ಫೋಟೋವನ್ನು ನಿಖಿಲ್ ಶೇರ್ ಮಾಡಿದ್ದಾರೆ. ನಿಖಿಲ್ ಪತ್ನಿ ರೇವತಿ ಜೆರೆ ಸೀರಿಯಲ್ಲಿ ಕಂಗೊಳಿಸುತ್ತಿದ್ದಾರೆ. ಗರ್ಭಿಣಿ ನಿಖಿಲ್ ಕೈ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ.

ನಿಖಿಲ್ ಸದ್ಯ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಈ ಸಂತಸದ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇಂದು ಗಣೇಶ ಹಬ್ಬದ ಪ್ರಯುಕ್ತ ನಿಖಿಲ್ ನಟನೆಯ ರೈಡರ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರೈಡರ್ ನಲ್ಲಿ ನಿಖಿಲ್ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಪೋಸ್ಟರ್‌ಗಳು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿವೆ.
ಇನ್ನು ಹಿರಿಯ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿತ್ತು. ಪುತ್ರ ಅಭಿಷೇಕ್ ಜೊತೆ ಹಬ್ಬ ಆಚರಣೆ ಮಾಡಿರುವ ಸುಮಲತಾ ಅಂಬರೀಶ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಸುಮಲತಾ ಅವರ ದೇವರಮನೆಯಲ್ಲಿ ತರವೇವಾರಿ ಗಣೇಶ ಮೂರ್ತಿಗಳಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಗಣೇಶನ ವಿಗ್ರಹಗಳ ಫೋಟೋವನ್ನು ನಟಿ ಸುಮಲತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಗೋಲ್ಡ್ ಮತ್ತು ಪಿಂಕ್ ಬಣ್ಣದ ಜೆರೆ ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ಸುಮಲತಾ ಅವರಿಗೆ ಪುತ್ರ ಅಭಿಷೇಕ್ ಅಂಬರೀಶ್ ಪೂಜೆಗೆ ಸಾಥ್ ಕೊಟ್ಟಿದ್ದಾರೆ. "ಮಂಗಳಮೂರ್ತಿ, ವಿಘ್ನವಿನಾಶಕನಾದ ಗಣೇಶನು ನಿಮ್ಮೆಲ್ಲರಿಗೂ ಆರೋಗ್ಯ, ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಲಿ" ಎಂದು ಸುಮಲತಾ ಹೇಳಿದ್ದಾರೆ.
ಇತ್ತೀಚಿಗಷ್ಟೆ ಸುಮಲತಾ ಅಂಬರೀಶ್ ಅದ್ದೂರಿಯಾಗಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸುಮಲತಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ದಂಪತಿ, ದರ್ಶನ್, ವಿಜಯ್ ಪ್ರಕಾಶ್ ದಂಪತಿ ಸೇರಿದಂತೆ ಅನೇಕ ಮಂದಿ ಭಾಗಿಯಾಗಿದ್ದರು.

ಇನ್ನು ನಟಿ ಪ್ರಿಯಾಂಕಾ ಉಪೇಂದ್ರ ಮನೆಯಲ್ಲು ಅದ್ದೂರಿಯಾಗಿ ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ. ಪ್ರಿಯಾಂಕಾ ಪತಿ ಉಪೇಂದ್ರ ಸೇರಿದಂತೆ ಇಡೀ ಕುಟುಂಬ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಹಬ್ಬದ ಸಂಭ್ರಮದ ಫೋಟೋ, ವಿಡಿಯೋಗಳನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.


Click it and Unblock the Notifications











