»   » ಪುನೀತ್ 'ರಾಜ್ ಕುಮಾರ್' ಸ್ಟೈಲ್ ನಲ್ಲಿ ಗಣೇಶ ಬಂದಿದೆ

ಪುನೀತ್ 'ರಾಜ್ ಕುಮಾರ್' ಸ್ಟೈಲ್ ನಲ್ಲಿ ಗಣೇಶ ಬಂದಿದೆ

Posted By:
Subscribe to Filmibeat Kannada

ದೇಶದಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಜೋರಾಗಿದ್ದು, ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಈ ಬಾರಿಯ ಗಣೇಶ ಹಬ್ಬ ಮತ್ತಷ್ಟು ಸಂಭ್ರಮವನ್ನ ಹೆಚ್ಚಿಸಿದೆ. ಅದಕ್ಕೆ ಕಾರಣ 'ರಾಜಕುಮಾರ' ಸಿನಿಮಾ.

ಹೌದು, ಮಾರುಕಟ್ಟೆಯಲ್ಲಿ 'ರಾಜಕುಮಾರ' ಚಿತ್ರದ ಸ್ಟೈಲ್ ನಲ್ಲಿ ಗಣೇಶ ಬಂದಿದೆ. ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ರಾಜಕುಮಾರ' ಚಿತ್ರದ ಪೋಸ್ಟರ್ ನಂತೆ ಗಣೇಶ ಸಿದ್ದವಾಗಿದ್ದು, ಮಾರಟಕ್ಕೆ ಇಡಲಾಗಿದೆ. ಈ ರೀತಿಯ ಗಣೇಶ ಬೆಳಗಾವಿಯಲ್ಲಿ ಗಮನ ಸೆಳೆದಿದೆ.

Ganesha idols inspired by the film raajakumara

ಗಣೇಶನ ಪೂರ್ತಿಯ ಜೊತೆ ಇಬ್ಬರು ರಾಜಕುಮಾರರನ್ನ ನಿಲ್ಲಿಸಿದ್ದು, ಒಂದು ಕಡೆ 'ಕಸ್ತೂರಿ ನಿವಾಸ'ದ ಡಾ.ರಾಜ್ ಕುಮಾರ್, ಮತ್ತೊಂದೆಡೆ 'ರಾಜಕುಮಾರ' ಚಿತ್ರದ ಪುನೀತ್ ರಾಜ್ ಕುಮಾರ್ ಗಮನ ಸೆಳೆಯುತ್ತಿದ್ದಾರೆ.

ಈ ರೀತಿಯ ಸಿನಿಮಾ ಸ್ಟಾರ್ ಗಳು ರೂಪದಲ್ಲಿ ಗಣೇಶ ತಯಾರಾಗಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆ ಹಲವು ರಜನಿಕಾಂತ್, ಬಾಹುಬಲಿ ಸ್ಟೈಲ್ ನಲ್ಲಿ ಗಣೇಶ ತಯಾರಿಸಿದ್ದರು.

English summary
Ganesha idols inspired by the film raajakumara. the Movie starrer Power star puneeth rajkumar in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada