ಇದೇ ನೋಡಿ ಗೋಲ್ಡನ್ ಸ್ಟಾರ್ ಗಣೇಶ್ ಅವ್ರ 'ಆರೆಂಜ್' ಲುಕ್
ಗೋಲ್ಡನ್ ಸ್ಟಾರ್ ಗಣೇಶ್ ಸೂಪರ್ ಸ್ಟೈಲಿಶ್ ಅವತಾರ ತಾಳಿದ್ದಾರೆ. ಅದು 'ಆರೆಂಜ್' ಸಿನಿಮಾಗಾಗಿ.
ಹೌದು, ಗಣೇಶ್ ಗಾಗಿ ನಿರ್ದೇಶಕ ಪ್ರಶಾಂತ್ ರಾಜ್ 'ಆರೆಂಜ್' ಅಂತ ಸಿನಿಮಾ ಮಾಡ್ತಿರೋದು ನಿಮಗೆಲ್ಲ ಗೊತ್ತಿದೆ ತಾನೆ. ಮೊನ್ನೆಯಷ್ಟೇ, ಅಂದ್ರೆ ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವದ ಸುಸಂದರ್ಭದಂದು 'ಆರೆಂಜ್' ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಇನ್ನೇನು ಚಿತ್ರೀಕರಣ ಶುರು ಆಗಲಿರುವುದರಿಂದ, ಗಣೇಶ್ ಹೊಸ ಅವತಾರ ತಾಳಿದ್ದಾರೆ.
'ಆರೆಂಜ್' ಚಿತ್ರದಲ್ಲಿ ಗಣೇಶ್ ಹೇಗ್ ಕಾಣ್ಬಹುದು ಎಂಬ ಕುತೂಹಲ ನಿಮ್ಗೆ ಇದ್ದರೆ, ಈ ಫೋಟೋ ನೋಡಿ...

'ಆರೆಂಜ್' ಸಿನಿಮಾಗಾಗಿ ಗಣೇಶ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಜೊತೆಗೆ ಹೇರ್ ಕಲರಿಂಗ್ ಕೂಡ ಮಾಡಿಸಿಕೊಂಡಿದ್ದಾರೆ.
ಸೂಪರ್ ಸ್ಟೈಲಿಶ್ ಆಗಿ ಗಣೇಶ್ ಕಾಣಿಸ್ತಿರೋದ್ರಿಂದ, ಸಿನಿಮಾ ಕೂಡ ಸ್ಟೈಲಿಶ್ ಆಗಿ ಮೂಡಿಬರುವುದರಲ್ಲಿ ಡೌಟೇ ಬೇಡ. ಅಂದ್ಹಾಗೆ, 'ಆರೆಂಜ್' ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ತಿದ್ದಾರೆ.
ಈಗಾಗಲೇ 'ಝೂಮ್' ಚಿತ್ರದಲ್ಲಿ ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಶನ್ ಕ್ಲಿಕ್ ಆಗಿತ್ತು. ಈಗ ಅದೇ ಜೋಡಿ 'ಆರೆಂಜ್' ಮೂಲಕ ಒಂದಾಗಿದ್ದಾರೆ. 'ಆರೆಂಜ್' ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದುತ್ತಿರಿ..


Click it and Unblock the Notifications











