'ತ್ರಿಬಲ್ ರೈಡಿಂಗ್' ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್
ಕೊರೊನಾ ಲಾಕ್‌ಡೌನ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರೀಕರಣಕ್ಕೆ ಮರುಳುತ್ತಿದ್ದಾರೆ. ಐದಾರು ತಿಂಗಳಿನಿಂದ ಶೂಟಿಂಗ್ ಇಲ್ಲದೇ ಸುಮ್ಮನಿದ್ದ ಗಣೇಶ್ ಈಗ 'ತ್ರಿಬಲ್ ರೈಡಿಂಗ್' ಆರಂಭಿಸಿದ್ದಾರೆ.
ಹೌದು, ತ್ರಿಬಲ್ ರೈಡಿಂಗ್ ಚಿತ್ರೀಕರಣಕ್ಕೆ ಗಣೇಶ್ ಸಜ್ಜಾಗಿದ್ದು, ಅಕ್ಟೋಬರ್ ತಿಂಗಳಿನಿಂದ ಅಖಾಡಕ್ಕೆ ಇಳಿಯಲಿದ್ದಾರೆ. ಸದ್ಯಕ್ಕೆ, ಹೈದರಾಬಾದ್‌ನಲ್ಲಿ ಹಾಡುಗಳ ಮುದ್ರಿಕೆ ಕೆಲಸ ಆರಂಭವಾಗಿದೆ.
ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಲವ್, ಕಾಮಿಡಿ, ಆಕ್ಷನ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿದೆ. ಈ ಹಿಂದೆ ವಿನೋದ್ ಪ್ರಭಾಕರ್ ನಟನೆಯ ರಗಡ್ ಚಿತ್ರ ನಿರ್ದೇಶನ ಮಾಡಿದ್ದ ಮಹೇಶ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಾಮ್ ಗೋಪಾಲ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಸಾಯಿ ಕಾರ್ತಿಕ್ ಸಂಗೀತ ಇರಲಿದೆ. ಸಾಧುಕೋಕಿಲಾ, ರವಿಶಂಕರ್, ಕುರಿ ಪ್ರತಾಪ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.
ಇನ್ನುಳಿದಂತೆ ನಟ ಗಣೇಶ್ ಅವರು ಯೋಗರಾಜ್ ಭಟ್ ಅವರ ಜೊತೆ 'ಗಾಳಿಪಟ-2', ಸಿಂಪಲ್ ಸುನಿ ಜೊತೆ 'ಸಖತ್', ಪ್ರಶಾಂತ್ ರಾಜು ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











