ಪ್ರೀತಿ, ಪ್ರೋತ್ಸಾಹದಿಂದ 'ಗಂಟುಮೂಟೆ' ತುಂಬಿಸಿದ ಕನ್ನಡ ಜನ

ಒಂದು ಸಿನಿಮಾ ಸೈಲೆಂಟ್ ಆಗಿ ಬಿಡುಗಡೆಯಾಯ್ತು. ರಿಲೀಸ್ ಆದ ಮೇಲೆ ದಿನದಿಂದ ದಿನಕ್ಕೆ ಅವರ ಬಗ್ಗೆ ಜನ ಮಾತನಾಡಲು ಶುರು ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ನೋಡಿದ ಜನರು ಬರೆಯಲು ಪ್ರಾರಂಭ ಮಾಡಿದರು. ಆ ಸಿನಿಮಾ ಇದೀಗ ಜನರ ಪ್ರೀತಿ, ಪ್ರೋತ್ಸಾಹ ಪಡೆದು ಮುನ್ನುಗುತ್ತಿದೆ. ಅದೇ 'ಗಂಟುಮೂಟೆ'.

'ಗಂಟುಮೂಟೆ' ತುಂಬ ಪ್ರೀತಿ ಸಿಕ್ಕಿದೆ. ಸಿನಿಮಾ ನೋಡಿದ ಜನರು, ವಿಮರ್ಶಕರು, ಸ್ಯಾಂಡಲ್ ವುಡ್ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಮಂದಿರದಿಂದ ಸಿನಿಮಾ ನೋಡಿ ಖುಷಿಯಿಂದ ಆಚೆ ಬರುತ್ತಿದ್ದಾರೆ. ಇದನೆಲ್ಲ ನೋಡಿದ ಚಿತ್ರತಂಡಕ್ಕೆ, ತಾವು ಮಾಡಿದ ಕೆಲಸಕ್ಕೆ ತೃಪ್ತಿ ಸಿಕ್ಕ ಭಾವನೆ ಬಂದಿದೆ.

ಶಾಲಾ ದಿನಗಳನ್ನು ಸಿನಿಮಾ ನೆನಪು ಮಾಡುತ್ತದೆ. ಹದಿಹರೆಯ ಪ್ರೀತಿ, ತರ್ಲೆ, ತಮಾಷೆಯ ಜೊತೆಗೆ ಗಂಭೀರ ವಿಷಯ ಹೀಗೆ ಎಲ್ಲ ಅಂಶಗಳು ಸಿನಿಮಾದಲ್ಲಿವೆ. ಪ್ರಮುಖವಾಗಿ ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ನಟನೆಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಇಡೀ ಸಿನಿಮಾ ನೋಡುಗರಿಗೆ ತುಂಬ ಹತ್ತಿರ ಆಗುತ್ತಿವೆ. ಅನೇಕ ಭಾವನಾತ್ಮಕ ದೃಶ್ಯಗಳು ಸಿನಿಮಾದಲ್ಲಿವೆ.

Ganthumoothe Kannada Movie Running Successfully

ಯಾವುದೇ ಸ್ಟಾರ್ ಇಲ್ಲದೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಿ ನಿರ್ದೇಶಕಿ ರೂಪ ರಾವ್ ಗೆದ್ದಿದ್ದಾರೆ. ಮತ್ತೊಮ್ಮೆ ಹೊಸಬರ ಸಿನಿಮಾವನ್ನು ಕನ್ನಡಿಗರು ಸ್ವಾಗತ ಮಾಡಿದ್ದಾರೆ. ಚಿತ್ರರಂಗದ ಅನೇಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

More from Filmibeat

English summary
'Ganthumoothe' kannada movie running successfully.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X