ನ್ಯೂಯಾರ್ಕ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಗಂಟುಮೂಟೆ'

ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ಗಂಟುಮೂಟೆ ಸಿನಿಮಾ ನ್ಯೂಯಾರ್ಕ್ ಚಲನಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಇದುವರೆಗೂ ಎರಡು ಕನ್ನಡ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು. ಇದೀಗ, ಗಂಟುಮೂಟೆ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಲೆಯ ವಿದ್ಯಾರ್ಥಿನಿಯರ ಬದುಕನ್ನು ಹೇಳುವ ಈ ಸಿನಿಮಾ ಬಹಳ ವಿಶೇಷವಾಗಿ ಮೂಡಿಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿರುವ ರೂಪಾ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

2016ರಲ್ಲಿ ನಡೆದ ನ್ಯೂಯಾರ್ಕ್ ವೆಬ್ ಫೆಸ್ಟ್ ನಲ್ಲಿ 'ದಿ ಅದರ್ ಲವ್ ಸ್ಟೋರಿ' ಎಂಬ ವೆಬ್ ಸೀರಿಸ್ ಚಿತ್ರಕ್ಕಾಗಿ ರೂಪಾ ರಾವ್ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದುಕೊಂಡಿದ್ದರು. ಐಟಿ ಉದ್ಯಮದಲ್ಲಿದ್ದ ರೂಪಾ ಆ ಕೆಲವನ್ನ ಬಿಟ್ಟು ಸಿನಿಮಾರಂಗದಲ್ಲಿ ತೊಡಗಿಕೊಂಡರು. ಅನೇಕ ಕಿರುಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ನಿರ್ದೇಶಕಿ ಹಾಗೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

Gantumoote selected to be premiered at New York Film Festival 2019

ರೂಪಾ ರಾವ್ ಮತ್ತು ಸಹದೇವ್ ಕೆಲವಾಡಿ ಸೇರಿ ಅಮೆಯುಕ್ತಿ ಎಂಬ ನಿರ್ಮಾಣ ಸಂಸ್ಥೆಯನ್ನ ಹುಟ್ಟುಹಾಕಿರು ಅನೇಕ ಯುವ ಪ್ರತಿಭೆಗಳಿಗೆ ಒಂದು ವೇದಿಕೆಯನ್ನ ಕಲ್ಪಿಸಿದ್ದಾರೆ. ಸಹದೇವ್ ಕೂಡ ಬರಹಗಾರ, ಸಿನಿಮಾಟೋಗ್ರಫಿ, ನಿರ್ದೇಶಕರು ಹೌದು.

ಅಂದ್ಹಾಗೆ, ರೂಪಾ ರಾವ್ ಅವರು ಈ ಹಿಂದೆ ಕನ್ನಡದ 'ಒನ್ಲಿ ವಿಷ್ಣುವರ್ಧನ' ಸಿನಿಮಾದಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 'ಕುರೈ ಒಂದ್ರುಂ ಇಲ್ಲೈ' ತಮಿಳು ಚಿತ್ರದಲ್ಲಿಯೂ ಸಹ ನಿರ್ದೇಶಕಿಯಾಗಿದ್ದರು. ಹಾಟ್ ಸೀಟ್ ಎಂಬ ಕನ್ನಡ ಕಿರುಚಿತ್ರವನ್ನ ನಿರ್ದೇಶನ ಮಾಡಿದ್ದರು. ಲೆಟ್ ಲೈವ ಸಾಕ್ಷ್ಯಚಿತ್ರವನ್ನ ಕೂಡ ನಿರ್ದೇಶನ ಮಾಡಿದ್ದರು.

Gantumoote selected to be premiered at New York Film Festival 2019

ಇದೀಗ, ತಮ್ಮ ಚೊಚ್ಚಲ ಕನ್ನಡ ಸಿನಿಮಾ ಗಂಟುಮೂಟೆ ಚಿತ್ರವನ್ನ ಬಿಡುಗಡೆ ಮಾಡುವ ಸನಿಹದಲ್ಲಿದ್ದಾರೆ. ಈ ಮಧ್ಯೆ ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನವಾಗುತ್ತಿರುವುದು ಖುಷಿ ನೀಡಿದೆಯಂತೆ.

ಇನ್ನುಳಿದಂತೆ ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು ಬೆಳವಾಡಿ ಗಂಟುಮೂಟೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಪ್ರವೇಶ ಮಾಡುತ್ತಿದ್ದಾರೆ. ನಿಶ್ಚಿತಾ ಕರೋಡಿ, ಮೈನ್ಲಿ, ಭಾರ್ಗವ್ ರಾಜು, ಸೂರ್ಯ ವಸಿಷ್ಠ, ಶರತ್ ಗೌಡ, ಶ್ರೀರಂಗ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

More from Filmibeat

English summary
Kannada movie Gantumoote selected to be premiered at the New York Film Festival 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X