twitter
    For Quick Alerts
    ALLOW NOTIFICATIONS  
    For Daily Alerts

    CCSS Awards 2022: 'ಕ್ರಿಟಿಕ್ಸ್ ಚಾಯ್ಸ್ ಶಾರ್ಟ್ಸ್ & ಸಿರೀಸ್' ಅವಾರ್ಡ್‌ಗೆ 'ಗರುಡ ಗಮನ ವೃಷಭ ವಾಹನ': ಇಲ್ಲಿದೆ ಡಿಟೈಲ್ಸ್?

    |

    'ಗರುಡ ಗಮನ ವೃಷಭ ವಾಹನ' ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟ ಸಿನಿಮಾ. ಈ ಸಿನಿಮಾ ನೋಡಿದ ನಿರ್ದೇಶಕರು, ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರಾವಳಿ ಭೂಗತ ಲೋಕವನ್ನು ತೆರೆಮೇಲೆ ತಂದಿದ್ದ ರಾಜ್ ಬಿ ಶೆಟ್ಟಿ ನಿರ್ದೇಶನವನ್ನು ಹೊಗಳಿಕೊಂಡಾಡಿದ್ದರು. ಸ್ನೇಹಿತರಿಬ್ಬರು ಸೃಷ್ಟಿಸಿದ ರಕ್ತಸಿಕ್ತ ಚರಿತ್ರೆಗೆ ಪೌರಾಣಿಕ ಕಥೆ ಟಚ್ ನೀಡಲಾಗಿತ್ತು. ಪ್ರೇಕ್ಷಕರ ಮನಗೆದ್ದ ಮೇಲೆ 'ಗರುಡ ಗಮನ ವೃಷಭ ವಾಹನ' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲು ಮುಂದಾಗಿದೆ.

    Recommended Video

    ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಿಂದಿಕ್ಕಿ ನಂಬರ್ 1 ಪಟ್ಟಕ್ಕೇರಿದ ಜೋಡಿ ಶೆಟ್ರು

    ರಾಜ್‌ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ತೆರೆಮೇಲೆ ಮಾಡಿದ ಮೋಡಿ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಮಂಗಳೂರಿನ ಮಂಗಳಾ ದೇವಿಯ ಸಮ್ಮುಖದಲ್ಲಿ ನಡೆಯುವ ಕ್ರೈಂ ಸ್ಟೋರಿಯನ್ನು ಕೆಲವರಿಗೆ ಇಷ್ಟ ಆಗಿತ್ತು. ಹಾಗಂತ ಎಲ್ಲರಿಗೂ ಇಷ್ಟ ಆಗಿದೆ ಎಂತಲ್ಲ. ಕೆಲವರಿಗೆ ಈ ಗ್ಯಾಂಗ್‌ಸ್ಟರ್ ಸಿನಿಮಾ ಅಷ್ಟಾಗಿ ಹಿಡಿಸಿರಲಿಲ್ಲ. ರೌಡಿಸಂ ಸಿನಿಮಾದಲ್ಲಿ ಪೌರಾಣಿಕ ಎಳೆಯನ್ನು ತಂದಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಇವೆಲ್ಲಾ ಏನೇ ಇದ್ದರೂ, ಉತ್ತರದಿಂದ ದಕ್ಷಿಣದ ವರೆಗೂ ಈ ಸಿನಿಮಾಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು.

    OTTಯಲ್ಲಿ ಹೊಸ ದಾಖಲೆ ಬರೆದ ಭಜರಂಗಿ, ಗರುಡ ಗಮನ!OTTಯಲ್ಲಿ ಹೊಸ ದಾಖಲೆ ಬರೆದ ಭಜರಂಗಿ, ಗರುಡ ಗಮನ!

     'ಕ್ರಿಟಿಕ್ಸ್ ಚಾಯ್ಸ್' ಕ್ಯಾಟಗರಿಯಲ್ಲಿ ಗರುಡ ಗಮನ

    'ಕ್ರಿಟಿಕ್ಸ್ ಚಾಯ್ಸ್' ಕ್ಯಾಟಗರಿಯಲ್ಲಿ ಗರುಡ ಗಮನ

    ಕನ್ನಡ ಚಿತ್ರರಂಗದಲ್ಲಿ ಮಾಸ್ ಇಲ್ಲ ಕ್ಲಾಸ್ ಸಿನಿಮಾಗಳೇ ಹೆಚ್ಚು ನಿರ್ಮಾಣ ಆಗುತ್ತೆ. ಕನ್ನಡಿಗರಿಗೂ ಇಂತಹ ಸಿನಿಮಾಗಳೇ ಇಷ್ಟ. ಈ ಕಾರಣಕ್ಕೆ ನಿರ್ದೇಶಕರು ಲವ್ ಸ್ಟೋರಿ, ಆಕ್ಷನ್ ಬಿಟ್ಟು ಸಿನಿಮಾ ಮಾಡಲು ಮುಂದೆ ಬರುವುದಿಲ್ಲ. ಇಂತಹ ಸಂದರ್ಭದಲ್ಲೂ ಕೆಲವರು ಸಿನಿಮಾದಲ್ಲಿ ಪ್ರಯೋಗ ಮಾಡಲು ಮುಂದಾಗುತ್ತಾರೆ. ಇಂತಹ ಪ್ರಯತ್ನದಲ್ಲಿ ಹುಟ್ಟಿಕೊಂಡು, ಜನರ ಮನ ಗೆದ್ದಿದ್ದೇ 'ಗರುಡ ಗಮನ ವೃಷಭ ವಾಹನ'. ಬೇರೆ ಭಾಷೆಯ ಸಿನಿಮಾ ನಿರ್ದೇಶಕರ ಮನಗೆದ್ದ ಬಳಿಕ 'ಕ್ರಿಟಿಕ್ಸ್ ಚಾಯ್ಸ್ ಶಾರ್ಟ್ಸ್ & ಸಿರೀಸ್ 2022' ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸಜ್ಜು ಮಾಡಲು ಮುಂದಾಗಿದೆ.

    11 ರಲ್ಲಿ 9 ಕ್ಯಾಟಗರಿಗೆ ಸಿನಿಮಾ ಆಯ್ಕೆ

    ಫಿಲ್ಮ್ ಕ್ರಿಟಿಕ್ಸ್ ಗಳೇ ಸೇರಿಕೊಂಡು 'ದಿ ಫಿಲ್ಮ್ ಕ್ರಿಟಿಕ್ಸ್ ಗಿಲ್ಡ್' ಅನ್ನು ಹುಟ್ಟಾಕಿದ್ದಾರೆ. ಉತ್ತರದಿಂದ ದಕ್ಷಿಣದವರೆಗೂ ಪ್ರತಿಷ್ಟಿತ ಕ್ರಿಟಿಕ್ಸ್ ಸೇರಿಕೊಂಡು ಹುಟ್ಟಾಕಿದ ಸಂಸ್ಥೆ. ಇವರೆಲ್ಲಾ ರೇಡಿಯೋ, ಟಿವಿ, ನ್ಯೂಸ್ ಪೋರ್ಟಲ್‌ಗಳಲ್ಲಿ ತಮ್ಮದೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರೆಲ್ಲಾ ಸೇರಿಕೊಂಡು ಪ್ರತಿ ವರ್ಷ ಎಲ್ಲಾ ಭಾಷೆಯಲ್ಲೂ ಬಂದ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡುತ್ತಾರೆ. ಅದುವೇ 'ಕ್ರಿಟಿಕ್ಸ್ ಚಾಯ್ಸ್ ಶಾರ್ಟ್ಸ್ & ಸಿರೀಸ್' ಅವಾರ್ಡ್. 2022ನೇ ಸಾಲಿನ ಪ್ರಶಸ್ತಿಗೆ ಗರುಡ ಗಮನ ವೃಷಭ ವಾಹನ 11 ರಲ್ಲಿ 9 ಕ್ಯಾಟಗರಿಗೆ ನಾಮಾಂಕಿತಗೊಂಡಿದೆ.

     ಗರುಡ ಗಮನ ಅನುರಾಗ್ ಕಶ್ಯಪ್‌ಗೆ ಇಷ್ಟ

    ಗರುಡ ಗಮನ ಅನುರಾಗ್ ಕಶ್ಯಪ್‌ಗೆ ಇಷ್ಟ

    'ಗರುಡ ಗಮನ ವೃಷಭ ವಾಹನ' ಬಿಡುಗಡೆಯಾದ ದಿನವೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಸಿನಿಮಾವನ್ನು ಇಷ್ಟ ಪಟ್ಟಿದ್ದರು. ಚಿತ್ರದ ಬಗ್ಗೆ ಪಾಸಿಟಿವ್ ರಿವ್ಯೂ ಕೊಟ್ಟಿದ್ದರು. 'ಗರುಡ ಗಮಗ ವೃಷಭ ವಾಹನ' ಸಿನಿಮಾದ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಫ್ಯಾನ್ ಆಗಿದ್ದೇನೆ ಎಂದು ಹೇಳಿದ್ದರು. ನಿರ್ದೇಶಕನಾಗಿ, ನಾಯಕನೂ ಆಗಿ ಎರಡೆರಡು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಗ್ಯಾಂಗ್‌ಸ್ಟರ್ ಕಥೆಯನ್ನು ವಿಭಿನ್ನವಾಗಿ ಬಿಂಬಿಸಿದ ನಿರ್ದೇಶಕ ರಾಜ್‌ ಬಿ ಶೆಟ್ಟಿಗೆ ಅನುರಾಗ್ ಕಶ್ಯಪ್ ಮೆಚ್ಚುಗೆ ಸೂಚಿಸಿದ್ದರು.

     ಒಟಿಟಿಯಲ್ಲೂ ಗರುಡ ಗಮನ ಕ್ಲಿಕ್

    ಒಟಿಟಿಯಲ್ಲೂ ಗರುಡ ಗಮನ ಕ್ಲಿಕ್

    ಥಿಯೇಟರ್‌ನಿಂದ ನೇರವಾಗಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ 5 ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಇಲ್ಲೂ ಕೂಡ ಸಿನಿಮಾಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಜೀ 5ನಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ನಟಿಸಿದ 'ಅಂತಿಮ್' ಸಿನಿಮಾವನ್ನೇ ಬೀಟ್ ಮಾಡಿತ್ತು. ದೇಶದ ಉದ್ದಗಲಕ್ಕೂ ಜನಪ್ರಿಯತೆಯನ್ನು ಗಳಿಸಿದ ಈ ಸಿನಿಮಾ ಈಗ ಪ್ರಶಸ್ತಿಯನ್ನು ಗೆಲ್ಲುವತ್ತ ಗಮನ ಹರಿಸಿದೆ. 9 ಕ್ಯಾಟಗರಿಯಲ್ಲಿ ಎಷ್ಟ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತದೆ ಅನ್ನುವ ಕುತೂಹಲದಲ್ಲಿ ಕನ್ನಡ ಚಿತ್ರರಂಗ.

    English summary
    Garuda Gamana Vrishabha Vahana got nominated in 9 of 11 categories in CCSS Awards 2022.
    Tuesday, February 22, 2022, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X