'ಗರುಡ ಗಮನ ವೃಷಭ ವಾಹನ' ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

ಪ್ರತಿಭಾವಂತ ನಿರ್ದೇಶಕ ರಾಜ್ ಬಿ ಶೆಟ್ಟಿಯ ಎರಡನೇ ಪ್ರಯತ್ನ 'ಗರುಡ ಗಮನ ವೃಷಭ ವಾಹನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ನಟಿಸಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾವು ಜೂನ್ 4 ರಂದು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ದೇಶಕ ರಾಜ್ ಬಿ ಶೆಟ್ಟಿ, ನಟ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

'ಜೂನ್ 4 2021 ರಂದು ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ ಮಂಗಳಾದೇವಿಗೆ ಸ್ವಾಗತ' ಎಂದು ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 Garuda Gamana Vrishabha Vahana Movie Releasing On June 04

ಬಹು ಭಿನ್ನ ಪೋಸ್ಟರ್‌ನಿಂದ ಈ ಸಿನಿಮಾ ಈಗಾಗಲೇ ಗಮನ ಸೆಳೆದಿದೆ. ಭೂಗತಲೋಕ ಹಾಗೂ ಕರಾವಳಿ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಶಿವ ಮತ್ತು ಹರಿ ಎಂಬಿಬ್ಬರು ರೌಡಿಗಳ ನಡುವಿನ ಕಾಳಗದ ಕತೆಯನ್ನೇ ಸಿನಿಮಾ ಆಗಿ ತೆರೆಯ ಮೇಲೆ ತರಲಾಗಿದೆ ಎಂಬ ಊಹೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Recommended Video

ದಾಖಲೆ ಮೊತ್ತಕ್ಕೆ ಸೇಲ್ ಆಯ್ತು ರಾಬರ್ಟ್ ತೆಲುಗು ಸಿನಿಮಾ | Filmibeat Kannada

'ಒಂದು ಮೊಟ್ಟೆಯ ಕತೆ' ಅಂಥಹಾ ಸೃಜನಶೀಲ ಹಾಸ್ಯಸಿನಿಮಾ ಮಾಡಿ ಗೆದ್ದಿದ್ದ ರಾಜ್ ಬಿ ಶೆಟ್ಟಿ ತಮ್ಮ ಎರಡನೇ ಸಿನಿಮಾದಲ್ಲಿಯೇ ಭಿನ್ನ ಹಾದಿ ಹಿಡಿದಿದ್ದಾರೆ. ಸಿನಿಮಾದ ಟ್ರೇಲರ್ ಇನ್ನೂ ಬಿಡುಗಡೆ ಆಗಿಲ್ಲ. ಸಿನಿಮಾ ಬಿಡುಗಡೆಗೆ ಮುನ್ನಾ ಟ್ರೇಲರ್‌ ಬಿಡುಗಡೆ ಆಗುವ ನಿರೀಕ್ಷೆ ಇದೆ.

More from Filmibeat

English summary
Raj B Shetty's Directorial Movie Garuda Gamana Vrishabha Vahana Releasing On June 04 on theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X