ಟ್ರೇಲರ್ : ಟೆರರಿಸಂ ನಡುವೆ ಪ್ರೀತಿ ಕಥೆ ಹೇಳುತ್ತಿದೆ 'ಗರುಡ'
ಟೆರರಿಸಂ ಮೂಲಕ ಶುರು ಆಗುವ ಟ್ರೇಲರ್ ನಲ್ಲಿ ಬಳಿಕ ಲವ್ ಸ್ಟೋರಿ ಓಪನ್ ಆಗುತ್ತದೆ. ಆಕ್ಷನ್, ರೋಮ್ಯಾನ್ಸ್, ವಿಲನ್ ಗಳ ಅಬ್ಬರ, ನಾಯಕರ ಆರ್ಭಟ 'ಗರುಡ' ಟ್ರೇಲರ್ ಹೈಲೈಟ್ ಆಗಿದೆ.
'ಗರುಡ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಟ್ರೇಲರ್ ಸೂಪರ್ ಆಗಿದೆ ಎಂದು ನೋಡುಗರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಟ್ರೇಲರ್ ನಲ್ಲಿ ಆಕ್ಷನ್ ಜೋರಾಗಿದೆ.

ಟೆರರಿಸಂ ಹಿನ್ನಲೆಯ ಕಥೆ ಚಿತ್ರದಲ್ಲಿದೆ ಎನ್ನುವ ಸುಳಿವನ್ನು ಟ್ರೇಲರ್ ನೀಡಲಾಗಿದೆ. ನಾಯಕ ಸಿದ್ದಾರ್ಥ ಮಹೇಶ್ ಆಕ್ಷನ್ ಹೀರೋ ಆಗಿ ಮಿಂಚಿದ್ದಾರೆ. ಆಶಿಕಾ ರಂಗನಾಥ್ ಹಾಗೂ ಐಂದ್ರಿತಾ ರೇ ನಾಯಕಿಯರಾಗಿದ್ದಾರೆ.
ಭರತ್ ಭಾರ್ಗವ್ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಆದಿ ಲೋಕೇಶ್, ರಂಗಾಯಣ ರಘು, ಲೋಕೇಶ್, ಗಾಯಕ ರಘು ದೀಕ್ಷಿತ್ ರಘು, ರಾಜೇಶ್ ನಟರಂಗ, ರವಿಶಂಕರ್ ಗೌಡ ಸಿನಿಮಾದಲ್ಲಿ ನಟಿಸಿದ್ದಾರೆ.
ಧನ ಕುಮಾರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಎಸ್ ಪ್ರಸಾದ್ ರೆಡ್ಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ರಘು ದೀಕ್ಷಿತ್ ಸಂಗೀತ ಚಿತ್ರದಲ್ಲಿ ಇದೆ. ಅಂದಹಾಗೆ, ಟ್ರೇಲರ್ ಮೂಲಕ 'ಗರುಡ'ದ ಹಾರಾಟ ಜೋರಾಗಿದ್ದು, ಸದ್ಯದಲ್ಲಿಯೇ ಸಿನಿಮಾದ ಬಿಡುಗಡೆಯ ದಿನಾಂಕ ಬಹಿರಂಗ ಆಗಲಿದೆ.


Click it and Unblock the Notifications











