»   » ಸಿದ್ಧ ಸೂತ್ರಗಳನ್ನು ಹೊರತುಪಡಿಸಿದ ಹೊಸ ಪ್ರಯೋಗ

ಸಿದ್ಧ ಸೂತ್ರಗಳನ್ನು ಹೊರತುಪಡಿಸಿದ ಹೊಸ ಪ್ರಯೋಗ

Posted By: Staff
Subscribe to Filmibeat Kannada

ಗರ್ವ ಗೆದ್ದಿದೆ!
ಧಾರಾವಾಹಿಗಳ ಬಗ್ಗೆ ಕಾದು ಕೂರುವಷ್ಟು ಹುಚ್ಚೇನಿಲ್ಲ ನನಗೆ; ಅದರಲ್ಲೂ ಕನ್ನಡ ಧಾರಾವಾಹಿಗಳೆಂದರೆ ಅಷ್ಟಕ್ಕಷ್ಟೇ. ಆದರೆ, ಗರ್ವ ನನ್ನ ಅಭಿಪ್ರಾಯ ಬದಲಿಸಿದೆ, ಥ್ಯಾಂಕ್ಸ್‌.

ಪ್ರತಿದಿನ ರಾತ್ರಿ 9.30 ಕ್ಕೆ ಟೀವಿಯ ಮುಂದೆ ಕೂರುತ್ತೇನೆ. ನಾನಷ್ಟೇ ಅಲ್ಲ , ಅಪ್ಪ ಸೇರಿದಂತೆ ಇಡೀ ಕುಟುಂಬ ಟೀವಿಯ ಮುಂದೆ ಕೂರುತ್ತದೆ. ಈ ಟೀವಿಯ ಗರ್ವ ನಮ್ಮೆಲ್ಲರನ್ನೂ ಸೆಳೆದು ಕೂರಿಸುತ್ತದೆ. ನಾವೆಲ್ಲ ಗರ್ವದ ಅಭಿಮಾನಿಗಳು. ಗರ್ವ ಎಷ್ಟು ಚೆನ್ನಾಗಿದೆ ಎಂದರೆ- ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ 'ದುರ್ಗಾ" ಜೊತೆ ಗರ್ವವನ್ನು ಹೋಲಿಸಬಹುದು. ಗರ್ವ ಶ್ರೇಷ್ಠತೆಗೆ ಉದಾಹರಣೆಯಾದರೆ, ದುರ್ಗಾ ಅಧ್ವಾನಕ್ಕೆ ಉದಾಹರಣೆ.

ಗರ್ವದ ಎಲ್ಲ ನಟರ ಅಭಿನಯವೂ ಚೆನ್ನಾಗಿದೆ. ಅದರಲ್ಲೂ ಅನಂತನಾಗ್‌, ಸಿಹಿಕಹಿ ಚಂದ್ರು, ನಾಗೇಂದ್ರ ಷಾ, ಪೂರ್ಣಿಮ ವ್ಯಾಸುಲು (ಗೀತಾ ಪಾತ್ರಧಾರಿ, ಈಕೆ ವಿಷ್ಣುವರ್ಧನ್‌ ಅಕ್ಕ) ಅವರ ಅಭಿನಯವಂತೂ ಗರ್ವ ಪಡುವಂಥದ್ದು. ಧಾರಾವಾಹಿಯಲ್ಲಿ ಬರುವ ಕೆಲವು ಸನ್ನಿವೇಶಗಳಂತೂ ಜೀವನದ ನೈಜ ಬಿಂಬಗಳೇ. ಧಾರಾವಾಹಿಯ ಐಡಿಯಾಗಳು ಕೂಡ ವಾಸ್ತವಕ್ಕೆ ಹತ್ತಿರ.

ಧಾರಾವಾಹಿಯಲ್ಲಿ ಬೋರು ಹೊಡೆಸುವ ಸನ್ನಿವೇಶ ತೀರಾ ಕಡಿಮೆ. ಆದರೆ ಕೆಲವು ವ್ಯಾಪಾರದ ಮಾತುಕತೆಯ ಸನ್ನಿವೇಶಗಳು ಎಳೆದಂತೆ ತೋರುತ್ತದೆ. ಮತ್ತೆ ರಶ್ಮಿ (ಸುಧಾ ಬೆಳವಾಡಿ) ತನ್ನ ಗಂಡ ವಿಶ್ವ(ನಂದಕುಮಾರ್‌)ನನ್ನು ಕೆಲವು ಸಾರಿ ನೀವು ಎಂದು ಕೆಲವು ಸಾರಿ ನೀನು ಎಂದು ಕರೆಯುವುದು ಕೂಡ ಅಭಾಸವೇ. ಆದರೆ, ಇಂಥ ಅಭಾಸಗಳನ್ನು ಮೀರಿ- ಮರೆಯುವಷ್ಟು ಗರ್ವ ಪ್ರಬುದ್ಧವಾಗಿದೆ.

ಅನಂತನಾಗ್‌ ಅವರ ಅಭಿನಯವಂತೂ ವಾಹ್‌ ಅನ್ನುವಷ್ಟು ಚೆನ್ನ , ಶ್ರೇಷ್ಠತೆಗೆ ಹತ್ತಿರ. ನಾನು ಕಂಡ ನಟರ ಪೈಕಿ ಅನಂತನಾಗ್‌ ಅತ್ಯುತ್ತಮ. 'ಬ್ರೇವ್‌ಹಾರ್ಟ್‌"ನ ಮೆಲ್‌ಗಿಬ್ಸನ್‌ಗಿಂಥ ಅನಂತ್‌ನಾಗ್‌ಗೇ ಹೆಚ್ಚು ಮಾರ್ಕ್ಸ್‌. ಮತದಾನದಲ್ಲೂ ಅನಂತ್‌ ನಟನೆ ತುಂಬಾ ಚೆನ್ನಾಗಿದೆ. ಅನಂತ್‌ಗೆ ಅವರೇ ಸಾಟಿ.

ಗರ್ವ ತಂಡದ ಗೆಳೆಯರೇ, ನಿಮ್ಮ ಸಾಧನೆ ಅದ್ಭುತ. ಮುಂದುವರಿಸಿ.

English summary
Garva kannada serial in ETV is Super

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada