ಗೀತಾ ಶಿವರಾಜ್ ಕುಮಾರ್ ಬರ್ತಡೇಗೆ ಶಿವಣ್ಣನ ಹೊಸ ಸಿನಿಮಾ

By Pavithra

Recommended Video

ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಶಿವಣ್ಣನಿಗೆ ಸಿಕ್ತು ಗಿಫ್ಟ್..!!! | FIlmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗೀತಾ ಶಿವರಾಜ್ ಕುಮಾರ್ ಅವರ ಬರ್ತಡೇ ದಿನ ಶಿವಣ್ಣ ಅಭಿನಯ ಮಾಡುತ್ತಿರುವ ಹೊಸ ಚಿತ್ರ ಅನೌನ್ಸ್ ಆಗಿದೆ.

'ರಥಾವರ' ಸಿನಿಮಾ ಮಾಡಿ ಚಿತ್ರರಂಗದಲ್ಲಿ ಹೆಸರು ಗಳಿಸಿದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್ ಕಟ್ ನಲ್ಲಿ ಶಿವಣ್ಣ ಆಕ್ಟಿಂಗ್ ಮಾಡಲಿದ್ದು, ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ ಎನ್ನುವುದರ ಮುನ್ಸೂಚನೆ ಆಗಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು 'ಪ್ರೊಡಕ್ಷನ್ ನಂ 2' ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಆಗಿದೆ.

Geeta Shivaraj Kumars birthday specially Shivanna new film announced

'ಬೆತ್ತನಗೆರೆ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಬಿ ಎನ್ ಸ್ವಾಮಿ ಅವರೇ ಶಿವಣ್ಣ ಅಭಿನಯದ ಹೊಸ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಸದ್ಯ 'ಕವಚ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಶಿವರಾಜ್ ಕುಮಾರ್ ನಂತರ 'ರುಸ್ತಂ', 'ದ್ರೋಣ', 'ಎಸ್ ಆರ್ ಕೆ' ಚಿತ್ರಗಳಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ.

Geeta Shivaraj Kumars birthday specially Shivanna new film announced

ಶಿವರಾಜ್ ಕುಮಾರ್ ಗಾಗಿ ವಿಭಿನ್ನ ಕಥೆಯನ್ನು ಮಾಡಿಕೊಂಡಿರುವ ಚಂದ್ರಶೇಖರ್ ಬಂಡಿಯಪ್ಪ ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ ಸಿನಿಮಾ ಟೈಟಲ್ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮತ್ತೊಂದು ವಿಭಿನ್ನ ಚಿತ್ರದ ಮೂಲಕ ಕರುನಾಡ ಚಕ್ರವರ್ತಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

More from Filmibeat

English summary
Kannada actor Shivaraj Kumar's wife Geeta Shivaraj Kumar's birthday specially Shivanna new film announced. Chandrashekhar Bandiappa is directing the Shivaraj Kumar new film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X