Just In
Don't Miss!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- News
ಶಿಲ್ಪಾ ಶೆಟ್ಟಿಗೆ ಬಹಳ ಖುಷಿ ನೀಡಿದ ಹೊಸ ಸಂಗತಿ ಯಾವುದು?
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Lifestyle
ನಾಭಿಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಅಚ್ಚರಿಯ ಸಂಗತಿಗಳು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
'ಸೈರಾ' ಬಿಡುಗಡೆಯಿಂದ ಕನ್ನಡದ ಮೂರು ಚಿತ್ರಗಳಿಗೆ ಎದುರಾದ ಸಂಕಷ್ಟ
ಪರಭಾಷೆಯ ಸಿನಿಮಾಗಳಿಂದ ಕನ್ನಡ ಸಿನಿಮಾಗಳಿಗೆ ಆಗಾಗ ತೊಂದರೆ ಆಗುತ್ತದೆ. ಈಗಲೂ ಅದು ಮುಂದುವರೆದಿದ್ದು, ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಚಿತ್ರದಿಂದ ಕನ್ನಡದ ಮೂರು ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ.
ಸೈರಾ ಕನ್ನಡ ಟ್ರೈಲರ್: ಮೆಗಾಸ್ಟಾರ್ ಜೊತೆ ಕಿಚ್ಚನ ದರ್ಬಾರ್
ಗಣೇಶ್ ನಟನೆಯ 'ಗೀತಾ', ಎ ಪಿ ಅರ್ಜುನ್ ನಿರ್ದೇಶನದ 'ಕಿಸ್' ಹಾಗೂ ಶ್ರೀ ಮುರಳಿ ನಟನೆಯ 'ಭರಾಟೆ' ಸಿನಿಮಾಗಳಿಗೆ ಚಿತ್ರಮಂದಿರದ ಸಮಸ್ಯೆ ಆಗಿದೆ. ಕರ್ನಾಟಕದ 234 ಚಿತ್ರಮಂದಿರಗಳಲ್ಲಿ 'ಸೈರಾ' ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. ಹೀಗಾಗಿ ಕನ್ನಡ ಸಿನಿಮಾಗಳ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುತ್ತಿದೆ.
ಅಕ್ಟೋಬರ್ 2 ರಂದು 'ಸೈರಾ ನರಸಿಂಹ ರೆಡ್ಡಿ' ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಸುದೀಪ್ ಕೂಡ ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿಯೂ ಕ್ರೇಜ್ ಜೋರಾಗಿದೆ. ಕರ್ನಾಟಕದ 350 ಚಿತ್ರಮಂದಿರಗಳಲ್ಲಿ 234 ಥಿಯೇಟರ್ ನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.
ದಾಖಲೆ ಬೆಲೆಗೆ 'ಸೈರಾ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಮಾರಾಟ
ಜೊತೆಗೆ ಕನ್ನಡದ ಡಬ್ಬಿಂಗ್ ಸೈರಾ ಚಿತ್ರಕ್ಕೆ 40 ರಿಂದ 45 ಚಿತ್ರಮಂದಿರಗಳು ಸಿಕ್ಕಿವೆ. 'ಕಿಸ್' ಮತ್ತು 'ಗೀತಾ' ಚಿತ್ರಗಳು ಸಪ್ಟೆಂಬರ್ 27ಕ್ಕೆ ಬಿಡುಗಡೆ ಆಗುತ್ತಿವೆ. ಆದರೆ, ಒಂದು ವಾರ ನಂತರ ಅಂದರೆ, ಅಕ್ಟೋಬರ್ 2 ಬರುವ 'ಸೈರಾ' ಚಿತ್ರಮಂದಿರಗಳನ್ನು ಕಿತ್ತುಕೊಳ್ಳುತ್ತಿದೆ. ಈ ಕಾರಣದಿಂದಲೇ 'ಭರಾಟೆ' ಚಿತ್ರದ ಬಿಡುಗಡೆ ಸಪ್ಟೆಂಬರ್ ಗೆ ಬದಲು ಅಕ್ಟೋಬರ್ 18ಕ್ಕೆ ಆಗುತ್ತಿದೆ.