Just In
Don't Miss!
- News
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಸಭೆ ನಿರ್ಣಯಗಳು
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಪಿಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 'ಬ್ರಹ್ಮಗಂಟು' ಖ್ಯಾತಿಯ ನಟಿ ಗೀತಾ ಭಾರತಿ
ಕನ್ನಡ ಕಿರುತೆರೆಯ ಖ್ಯಾತ ನಟಿ ಗೀತಾ ಭಾರತಿ ಸದ್ಯ ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಜೊತೆಗೆ ಗೀತಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸುದೀಪ್ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ ಮತ್ತು ಲವ್ ಮಾಕ್ ಟೇಲ್ ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಪರದೆ ಮೇಲು ಮಿಂಚಿದ್ದಾರೆ.
ಇತ್ತೀಚಿಗೆ ಲವ್ ಮಾಕ್ ಟೇಲ್ ಸಿನಿಮಾ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮನಗೆದಿದ್ದ ಗೀತಾ ಇದೀಗ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಗೀತಾ ಚೊಚ್ಚಲ ತೆಲುಗು ಸಿನಿಮಾದಲ್ಲಿ ಸ್ಟಾರ್ ನಟಿ ಜೊತೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಗೀತಾ ನಟಿಸಿದ್ದು ಲವ್ ಮಾಕ್ ಟೇಲ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ. ಕನ್ನಡದ ಲವ್ ಮಾಕ್ ಟೇಲ್ ನಲ್ಲಿ ಕಾಣಿಸಿಕೊಂಡಿದ್ದ ಪಾತ್ರದಲ್ಲೇ ಗೀತಾ ತೆಲುಗಿನಲ್ಲೂ ಮಿಂಚಿದ್ದಾರೆ.
ತಮನ್ನಾ ಜೊತೆ 'ಲವ್ ಮಾಕ್ ಟೇಲ್' ಚಿತ್ರೀಕರಣ ಆರಂಭಿಸಿದ ನಿರ್ದೇಶಕ ನಾಗಶೇಖರ್

ತೆಲುಗಿನಲ್ಲಿ ಲವ್ ಮಾಕ್ ಟೇಲ್
ಈಗಾಗಲೇ ಲವ್ ಮಾಕ್ ಟೇಲ್ ತೆಲುಗು ರಿಮೇಕ್ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಖ್ಯಾತ ನಟಿ ತಮನ್ನಾ ನಿಧಿಮಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಸತ್ಯದೇವ್ ಬಣ್ಣಹಚ್ಚುತ್ತಿದ್ದಾರೆ. ಕನ್ನಡದ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚೊಚ್ಚಲ ತೆಲುಗು ಸಿನಿಮಾದ ಬಗ್ಗೆ ಸಂತಸ ಹಂಚಿಕೊಂಡ ಗೀತಾ
ಕನ್ನಡದ ನಟಿ ಗೀತಾ ಲವ್ ಮಾಕ್ ಟೇಲ್ ತೆಲುಗು ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲ ಪಾತ್ರಕ್ಕೆ ತೆಲುಗಿನಲ್ಲೂ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಮೊದಲ ಬಾರಿಗೆ ತೆಲುಗು ಸಿನಿಮಾರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರೀಕರಣದ ಅನುಭವವನ್ನು ಗೀತಾ ಫಿಲ್ಮಿ ಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

ನಟಿ ತಮನ್ನಾ ಬಗ್ಗೆ ಗೀತಾ ಮಾತು
'ಖ್ಯಾತ ನಟಿ ತಮನ್ನಾ ಜೊತೆ ತೆರೆಹಂಚಿಕೊಂಡಿರುವುದು ತುಂಬಾ ಖುಷಿ ಇದೆ. ದೊಡ್ಡ ಸ್ಟಾರ್ ಎಂದು ತೋರಿಸಿಕೊಂಡಿಲ್ಲ. ತುಂಬಾ ಸ್ವೀಟ್ ತಮನ್ನಾ. ನನಗೆ ತೆಲುಗು ಮಾತನಾಡಲು ಬರಲ್ಲ. ನಟನೆ ಮಾಡುವಾಗ ತುಂಬಾ ಟಿಪ್ಸ್ ಕೊಟ್ಟರು. ಇಡೀ ಟೀಂ ತುಂಬಾ ಸಪೋರ್ಟ್ ಮಾಡಿದೆ. ನಾಗಶೇಖರ್ ಜೊತೆ ಕೆಲಸ ಮಾಡಿದ್ದು ಖುಷಿ ಇದೆ. ಉತ್ತಮ ಅನುಭವವಾಗಿದೆ. ಈಗಾಗಲೇ ನನ್ನ ಭಾಗದ ಚಿತ್ರೀಕರಣ ಮುಗಿದಿದೆ' ಎಂದು ಹೇಳಿದ್ದಾರೆ.
ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಇರ್ತಾರಾ 'ಬ್ರಹ್ಮಗಂಟು' ನಟಿ? ಈ ಬಗ್ಗೆ ಗೀತಾ ಹೇಳಿದ್ದೇನು?

ಈ ಬಾರಿಯ ಬಿಗ್ ಬಾಸ್ ನಲ್ಲಿ ಇರ್ತಾರಾ ಗೀತಾ?
ಅಂದಹಾಗೆ ಗೀತಾ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆನೀಡಿರುವ ಗೀತಾ, 'ಸುದ್ದಿ ಬರ್ತಾ ಇರುತೆ, ಆದರೆ ನನಗೆ ಈ ಬಗ್ಗೆ ಗೊತ್ತಿರಲ್ಲ, ನನಗೆ ಗೊತ್ತಿರದ ವಿಚಾರಗಳು ಹೇಗೆ ಹೊರಗೆ ಹೊಗುತ್ತಿರುತ್ತೆ, ಹರಿದಾಡುತ್ತಿರುತ್ತೆ ಎನ್ನುವುದೇ ನನಗೆ ಗೊತ್ತಿಲ್ಲ' ಎಂದಿದ್ದಾರೆ.

ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ಗೀತಾ
ಗೀತಾ ಸದ್ಯ ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಒಂದು ಆಲ್ಬಂ ಸಾಂಗ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಇದೇ ತಿಂಗಳು ಆಲ್ಬಂ ಸಾಂಗ್ ರಿಲೀಸ್ ಆಗುತ್ತಿದೆ. ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಗೀತಾ ಬಿಗ್ ಬಾಸ್ ಗೆ ಹೋಗ್ತಾರಾ? ಇಲ್ವಾ ಎನ್ನುವ ಬಗ್ಗೆ ಸದ್ಯದಲ್ಲೇ ಬಹಿರಂಗವಾಗಲಿದೆ.