'ಗೀತಾ' ಜೊತೆಗೆ ಗಣೇಶ್ ಹುಟ್ಟುಹಬ್ಬ ಆಚರಣೆ
ಜುಲೈ ತಿಂಗಳ ಎರಡನೇ ದಿನ ಅಂದರೆ, ಜುಲೈ 2 ನಟ ಗಣೇಶ್ ಅವರ ಹುಟ್ಟುಹಬ್ಬ. ಈ ವರ್ಷ ಗಣೇಶ್ ಹುಟ್ಟುಹಬ್ಬಕ್ಕೆ 'ಗೀತಾ' ಜೊತೆಯಾಗುತ್ತಿದ್ದಾರೆ.
ಗಣೇಶ್ ನಟನೆಯ 'ಗೀತಾ' ಚಿತ್ರತಂಡ ಗಣೇಶ್ ಗೆ ವಿಶೇಷ ಉಡುಗೊರೆ ನೀಡುತ್ತಿದೆ. ಆ ದಿನ 'ಗೀತಾ' ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ. ಇಷ್ಟ ದಿನ ಚೆಂದದ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿದ್ದ ಈ ಸಿನಿಮಾದ ಟೀಸರ್ ಹೊರ ಬರುತ್ತಿದೆ. ಟೀಸರ್ ಜುಲೈ 1 ರಂದು ಸಂಜೆ 6ಕ್ಕೆ ರಿಲೀಸ್ ಆಗಲಿದೆ.
'ಗೀತಾ' ಸಿನಿಮಾವನ್ನು ವಿಜಯ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ರಾಜಕುಮಾರ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದರು. ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಚಿತ್ರದ ನಾಯಕಿಯರು.

ಉಳಿದಂತೆ, ಸುಧಾರಾಣಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಣೇಶ್ ಪುತ್ರ ವಿಹಾನ್ ಈ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಚಿತ್ರದ ನಿರ್ಮಾಣ ಮಾಡಿದ್ದಾರೆ.
ಇನ್ನು, ಗಣೇಶ್ ಈ ವರ್ಷ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿಲ್ಲ. ಕೆಲವು ತಿಂಗಳಗಳ ಹಿಂದೆ ಗಣೇಶ್ ತಂದೆ ನಿಧನರಾಗಿದ್ದು, ಈ ಕಾರಣ ಗಣೇಶ್ ಹುಟ್ಟುಹಬ್ಬ ಆಚರಣೆ ನಿರಾಕರಿಸಿದ್ದಾರೆ.


Click it and Unblock the Notifications











