'ಪೈಲ್ವಾನ್' ಪೈರಸಿಯಿಂದ ಎಚ್ಚೆತ್ತುಕೊಂಡ ಗೀತಾ ಚಿತ್ರತಂಡ
Recommended Video
ಈ ಹಿಂದೆ ಅನೇಕ ಚಿತ್ರಗಳ ಪೈರಸಿ ಆಗಿದ್ದರೂ, 'ಪೈಲ್ವಾನ್' ಸಿನಿಮಾದ ಪೈರಸಿ ವಿಷಯ ಇಡೀ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದೆ. ಪೈರಸಿಯಿಂದ ಚಿತ್ರತಂಡ ಸಿನಿಮಾಗೆ ಆದ ನಷ್ಟ ಹಾಗೂ ತೊಂದರೆಗಳನ್ನು ಹೇಳಿಕೊಂಡಿದೆ.
ಪೈರಸಿ 'ಪೈಲ್ವಾನ್' ಚಿತ್ರ ಮಾತ್ರವಲ್ಲದೆ, ಮುಂದಿನ ಸಿನಿಮಾಗಳಿಗೂ ಇದೇ ರೀತಿದ ಸಮಸ್ಯೆ ನೀಡಬಹುದು. ಹೀಗಾಗಿ 'ಗೀತಾ' ಚಿತ್ರತಂಡ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದೆ. 'ಪೈಲ್ವಾನ್' ಸಿನಿಮಾದಿಂದ 'ಗೀತಾ' ತಂಡ ಪಾಠ ಕಲಿತಿದೆ.
ಇದೇ ಶುಕ್ರವಾರ ಗಣೇಶ್ ನಟನೆಯ 'ಗೀತಾ' ಸಿನಿಮಾ ಬಿಡುಗಡೆ ಆಗುತ್ತದೆ. ಈ ಸಿನಿಮಾದ ನಿರ್ಮಾಪಕರಾದ ಸೈಯದ್ ಸಲಾಂ ಪೈರಸಿ ಬಗ್ಗೆ ಗಮನ ಹರಿಸಿದ್ದಾರೆ. ಪೈರಸಿಯನ್ನು ತಡೆಯಲು ಒಂದು ಖಾಸಗಿ ಕಂಪನಿ ಜೊತೆಗೆ ಕೈ ಜೋಡಿಸಿದ್ದಾರೆ.

ಸಿನಿಮಾದ ವಿಡಿಯೋ ತುಣುಕುಗಳನ್ನು, ಇಡೀ ಸಿನಿಮಾವನ್ನು ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದರೆ, ಈ ಖಾಸಗಿ ಕಂಪನಿಯ ತಂಡ ಪತ್ತೆ ಹಚ್ಚುತ್ತದೆ. ಜೊತೆಗೆ ಕೂಡಲೇ ಆ ವಿಡಿಯೋ ಡಿಲೀಟ್ ಆಗುವಂತೆ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲದೆ ಸೈಬರ್ ಕ್ರೈಮ್ ಗೆ ದೂರು ನೀಡುತ್ತದೆ.
ಈ ರೀತಿ ಪೈರಸಿಯಿಂದ ಸಿನಿಮಾವನ್ನು ಕಾಪಾಡಿಕೊಳ್ಳಲು ಚಿತ್ರತಂಡ ಪ್ಲಾನ್ ಮಾಡಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸಾಧ್ಯ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
'ಗೀತಾ' ಗಣೇಶ್ ನಟನೆಯ ಹೊಸ ಸಿನಿಮಾ. ವಿಜಯ್ ನಾಗೇಂದ್ರ ಸಿನಿಮಾದ ನಿರ್ದೇಶಕರು.


Click it and Unblock the Notifications











