ಶಿವಮೊಗ್ಗ ಅಖಾಡಕ್ಕೆ ಧುಮುಕಿದ ಶಿವರಾಜ್ ಕುಮಾರ್ ಪತ್ನಿ

Recommended Video

Lok Sabha Elections 2019 : ಮತ್ತೆ ರಾಜಕೀಯಕ್ಕೆ ಧುಮುಕಿದ ಶಿವಣ್ಣನ ಪತ್ನಿ | FILMIBEAT KANNADA

'ನನಗೆ ರಾಜಕೀಯ ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಯಾರ ಪರವೂ ಪ್ರಚಾರ ಮಾಡಲ್ಲ' ಎಂದು ನಟ ಶಿವರಾಜ್ ಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದ್ರೆ, ಶಿವಣ್ಣನ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದು, ಸಹೋದರನ ಪರವಾಗಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ಮಾಡಲಿದ್ದಾರೆ.

Geetha shivarajkumar starts campaign for her brother

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಗೀತಾ ''ನಾನು ನಟನ ಪತ್ನಿಯಾಗುವುದಕ್ಕೂ ಮೊದಲು ಬಂಗಾರಪ್ಪನವರ ಪುತ್ರಿ. ಅಂತಹ ದೊಡ್ಡ ರಾಜಕಾರಣಿಯ ಮಗಳಾದ ನನಗೆ ಇದೆಲ್ಲ ಹೊಸದಲ್ಲ. ನಾನು ರಾಜಕೀಯವನ್ನ ನೋಡಿ ಬೆಳೆದಿದ್ದೇನೆ. ಈ ಸಲ ನನ್ನ ತಮ್ಮ ಗೆಲ್ಲುವ ಭರವಸೆ ಇದೆ'' ಎಂದಿದ್ದಾರೆ.

2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್, ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಸೋರಿದ್ದರು. ಇದೀಗ, ಗೀತಾ ಅವರ ಸಹೋದರ ಮಧು ಬಂಗಾರಪ್ಪ ಲೋಕ ಅಖಾಡದಿಂದ ಕಣಕ್ಕೆ ಇಳಿದಿದ್ದು, ಈ ಸಲ ಹೇಗಾದರೂ ಮಾಡಿ ತಮ್ಮನನ್ನ ಗೆಲ್ಲಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಗೀತಾ.

More from Filmibeat

English summary
Kannada actor Shiva rajkumar's wife Geetha shivarajkumar starts campaign for her brother madhu bangarappa in shivamogga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X