ಸ್ಟೈಲಿಶ್ ಡಾನ್ ಆಗಿ ಯಶ್, ಲಂಡನ್‌ನಲ್ಲಿ 150 ದಿನ 'ಟಾಕ್ಸಿಕ್' ಶೂಟಿಂಗ್ ಪ್ಲ್ಯಾನ್
ರಾಕಿಂಗ್ ಸ್ಟಾರ್ ಯಶ್ ನಟನೆಯಟಾ'ಟಾಕ್ಸಿಕ್' ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ತಿಲ್ಲ. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕುತ್ತಿದ್ದಾರೆ ಎನ್ನಲಾಗಿತ್ತು. ಬಳಿಕ ಯಾವುದೇ ಮಾಹಿತಿ ಸಿಗಲಿಲ್ಲ. ಈಗಾಗಲೇ ಚಿತ್ರೀಕರಣ ಶುರುವಾಗಿದೆ, ಶುರುವಾಗಿಲ್ಲ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಇನ್ನು 'ಟಾಕ್ಸಿಕ್' ಸಿನಿಮಾ ಸ್ಟಾರ್‌ಕಾಸ್ಟ್ ಬಗ್ಗೆ ಕೂಡ ಸಾಕಷ್ಟು ಅಂತೆಕಂತೆ ಸುದ್ದಿ ಹರಿದಾಡಿತ್ತು. ಮೊದಲಿಗೆ ಯಶ್ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನಲಾಗಿತ್ತು. ಬಳಿಕ ಡೇಟ್ಸ್ ಸಮಸ್ಯೆಯಿಂದ ಆಕೆ ಹೊರ ಬಂದಿದ್ದಾರೆ. ನಯನತಾರಾ ಪಾತ್ರ ಮಾಡ್ತಾರೆ ಎನ್ನಲಾಯಿತು. ನಂತರ ಹುಮಾ ಖುರೇಷಿ ಹೆಸರು ಕೇಳಿಬಂದಿತ್ತು.

'ಟಾಕ್ಸಿಕ್' ಚಿತ್ರದಲ್ಲಿ ಕೈರಾ ಅದ್ವಾನಿ ನಾಯಕಿಯಾಗಿ ನಟಿಸಲಿದ್ದರು ನಯನತಾರಾ ಯಶ್ ಸಹೋದರಿ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಗುಸುಗುಸು ಕೇಳಿಬಂತು. ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಮಾತನಾಡುವ ಗೋಜಿಗೆ ಹೋಗಲಿಲ್ಲ. ಟೈಟಲ್ ಟೀಸರ್ ಅನೌನ್ಸ್ ಬಳಿಕ ಅಧಿಕೃತವಾಗಿ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ಅಭಿಮಾನಿಗಳು 'ಟಾಕ್ಸಿಕ್' ಅಪ್‌ಡೇಟ್ ಕೇಳಿಕೇಳಿ ಸುಸ್ತಾಗಿದ್ದಾರೆ.
ಈಗಾಗಲೇ ಸದ್ದಿಲ್ಲದೇ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಶುರುವಾಗಿದೆ. ಯಶ್, ನಯನತಾರಾ ಕ್ಯಾಮರಾ ಮುಂದೆ ನಿಂತಿದ್ದಾರೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ಭಾರತದಲ್ಲಿ ಒಂದಷ್ಟು ಚಿತ್ರೀಕರಣ ಮುಗಿದ ಬಳಿಕ ಲಂಡನ್‌ನಲ್ಲಿ 150 ದಿನಗಳ ದೊಡ್ಡ ಶೆಡ್ಯೂಲ್ ಪ್ಲ್ಯಾನ್ ಮಾಡುತ್ತಿದ್ದಾರೆ. ಯುಕೆಯಲ್ಲಿ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿಯುತ್ತಾರೆ ಎಂದು ವರದಿ ಮಾಡಿದೆ.
ಅಂದಹಾಗೆ ಚಿತ್ರದಲ್ಲಿ ನಟ ಯಶ್ ಸ್ಟೈಲಿಶ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಪೀಕಿ ಬ್ಲೈಂಡರ್ ಸೀರಿಸ್ ಸ್ಟೈಲ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ನಟ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ. ಶ್ರೀಲಂಕಾದಲ್ಲಿ ಕೂಡ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯುವ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆ.

ಗೀತು ಮೋಹನ್ ದಾಸ್ 'ಟಾಕ್ಸಿಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕೆಜಿಎಫ್-2' ಬಳಿಕ ಯಶ್ ಕೈಗೆತ್ತಿಕೊಂಡಿರುವ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇದು ತಂಡದ ಮೇಲೆ ಒತ್ತಡ ತಂದಿರುವುದು ಸುಳ್ಳಲ್ಲ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಚಿತ್ರತಂಡ ಎಚ್ಚರ ವಹಿಸಿದೆ. ಖುದ್ದು ಯಶ್ ಸಿನಿಮಾ ಕಥೆ, ಚಿತ್ರೀಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಶ್ರುತಿ ಹಾಸನ್ ಕೂಡ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಛಾಯಾಗ್ರಹಣ, ಜೆರೆಮಿ ಸ್ಟಾಕ್ ಸಂಗೀತ 'ಟಾಕ್ಸಿಕ್' ಚಿತ್ರಕ್ಕೆ ಇರಲಿದೆ ಎಂದು ಹೇಳಲಾಗ್ತಿದೆ.
ಹಾಲಿವುಡ್ ತಂತ್ರಜ್ಞರು 'ಟಾಕ್ಸಿಕ್' ಚಿತ್ರದಲ್ಲಿ ಕೆಲಸ ಮಾಡಲಿದ್ದು ಗ್ರಾಫಿಕ್ಸ್ ಕೆಲಸಗಳು ಹೆಚ್ಚು ಇರಲಿದೆ. 60, 70ರ ದಶಕದ ಗೋವಾದ ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಕಥೆ ಸುತ್ತುತ್ತದೆ ಎನ್ನುವ ಲೆಕ್ಕಾಚಾರ ಕೆಲವರದ್ದು. ಆದರೆ ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











