ಕೊರೊನಾ ಮುಗಿದ ಮೇಲೆ ಮತ್ತೆ ಬರಲಿದ್ದಾನೆ 'ಜಂಟಲ್‌ಮನ್'

ಪ್ರಜ್ವಲ್ ದೇವರಾಜ್ ಅಭಿನಯಿಸಿರುವ ಜಂಟಲ್‌ಮನ್ ಸಿನಿಮಾ ಕೊರೊನಾ ಲಾಕ್‌ಡೌನ್‌ಗೆ ಮುನ್ನಾ ಬಿಡುಗಡೆ ಆಗಿತ್ತು. ಲಾಕ್‌ಡೌನ್ ಮುಗಿದ ನಂತರ ಈ ಸಿನಿಮಾ ಮತ್ತೆ ಬಿಡುಗಡೆ ಆಗಲಿದೆ.

Recommended Video

ಸೋಶಿಯಲ್ ಮೀಡಿಯಾಗೆ ಮತ್ತೆ ಮರಳಿದ ಸ್ಯಾಂಡಲ್ ವುಡ್ ಪದ್ಮಾವತಿ | Ramya Back in Social Media

ಫೆಬ್ರವರಿ 7 ರಂದು ಜಂಟಲ್‌ಮನ್ ಸಿನಿಮಾ ಬಿಡುಗಡೆ ಆಗಿತ್ತು. ಸಾಧಾರಣ ಯಶಸ್ಸನ್ನೂ ಕಂಡಿತ್ತು. ಆ ನಂತರ ಬಿಡುಗಡೆ ಆದ ಪಾಪ್‌ಕಾರ್ನ್ ಮಂಕಿ ಟೈಗರ್, ಶಿವಾಜಿ ಸೂರತ್‌ಕಲ್ ಮುಂತಾದ ಸಿನಿಮಾಗಳಿಗೆ ದಾರಿ ಬಿಟ್ಟುಕೊಟ್ಟು ನೇಪತ್ಯಕ್ಕೆ ಸರಿದಿತ್ತು.

ಆದರೆ ನಂತರ ಕೊರೊನಾದಿಂದಾಗಿ ಎಲ್ಲಾ ಚಿತ್ರಮಂದಿರಗಳು ಬಂದ್ ಆದವು. ಜಂಟಲ್‌ಮನ್ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಚಿತ್ರಮಂದಿರಗಳೂ ಬಂದ್ ಆದವು. ಆದರೆ ಈಗ ಕೊರೊನಾ ಲಾಕ್‌ಡೌನ್ ಮುಗಿದ ನಂತರ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.

Gentelman Movie Re-Releasing After Locdown Ends

ಕೊರೊನಾ ಕಾರಣಕ್ಕೆ ಜಂಟಲ್‌ಮನ್ ಸಿನಿಮಾ ಹೆಚ್ಚಿನ ಜನಕ್ಕೆ ತಲುಪಲಿಲ್ಲ. ಆದರೆ ಜಂಟಲ್‌ಮನ್ ಸಿನಿಮಾದ ಹಾಡುಗಳು ಯೂಟ್ಯೂಬ್‌ನಲ್ಲಿ ಹಾಗೂ ಟಿಕ್‌ಟಾಕ್‌ ನಲ್ಲಿ ಸೂಪರ್ ಹಿಟ್ ಆಗಿದೆ. ಹಾಗಾಗಿ ಕೊರೊನಾ ಮುಗಿದು ಚಿತ್ರಮಂದಿರಗಳು ಪುನರ್‌ ಪ್ರಾರಂಭ ಆದಾಗ ಸಿನಿಮಾ ವನ್ನು ಮರುಬಿಡುಗಡೆ ಮಾಡುತ್ತೇವೆ ಎಂದಿದೆ ಚಿತ್ರತಂಡ.

ಚಿತ್ರಮಂದಿರಗಳು ಪುನರ್ ಆರಂಭವಾದಾಗ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ ಆ ಸಮಯದಲ್ಲಿ ನಾವು ಜಂಟಲ್‌ಮನ್ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

More from Filmibeat

English summary
Gentelman Kannada movie will re-release after the lockdown ends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X