twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಮುಗಿದ ಮೇಲೆ ಮತ್ತೆ ಬರಲಿದ್ದಾನೆ 'ಜಂಟಲ್‌ಮನ್'

    |

    ಪ್ರಜ್ವಲ್ ದೇವರಾಜ್ ಅಭಿನಯಿಸಿರುವ ಜಂಟಲ್‌ಮನ್ ಸಿನಿಮಾ ಕೊರೊನಾ ಲಾಕ್‌ಡೌನ್‌ಗೆ ಮುನ್ನಾ ಬಿಡುಗಡೆ ಆಗಿತ್ತು. ಲಾಕ್‌ಡೌನ್ ಮುಗಿದ ನಂತರ ಈ ಸಿನಿಮಾ ಮತ್ತೆ ಬಿಡುಗಡೆ ಆಗಲಿದೆ.

    Recommended Video

    ಸೋಶಿಯಲ್ ಮೀಡಿಯಾಗೆ ಮತ್ತೆ ಮರಳಿದ ಸ್ಯಾಂಡಲ್ ವುಡ್ ಪದ್ಮಾವತಿ | Ramya Back in Social Media

    ಫೆಬ್ರವರಿ 7 ರಂದು ಜಂಟಲ್‌ಮನ್ ಸಿನಿಮಾ ಬಿಡುಗಡೆ ಆಗಿತ್ತು. ಸಾಧಾರಣ ಯಶಸ್ಸನ್ನೂ ಕಂಡಿತ್ತು. ಆ ನಂತರ ಬಿಡುಗಡೆ ಆದ ಪಾಪ್‌ಕಾರ್ನ್ ಮಂಕಿ ಟೈಗರ್, ಶಿವಾಜಿ ಸೂರತ್‌ಕಲ್ ಮುಂತಾದ ಸಿನಿಮಾಗಳಿಗೆ ದಾರಿ ಬಿಟ್ಟುಕೊಟ್ಟು ನೇಪತ್ಯಕ್ಕೆ ಸರಿದಿತ್ತು.

    ತನ್ನ ಕೊರೊನಾ ಪರೀಕ್ಷಾ ವರದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಟತನ್ನ ಕೊರೊನಾ ಪರೀಕ್ಷಾ ವರದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಟ

    ಆದರೆ ನಂತರ ಕೊರೊನಾದಿಂದಾಗಿ ಎಲ್ಲಾ ಚಿತ್ರಮಂದಿರಗಳು ಬಂದ್ ಆದವು. ಜಂಟಲ್‌ಮನ್ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಚಿತ್ರಮಂದಿರಗಳೂ ಬಂದ್ ಆದವು. ಆದರೆ ಈಗ ಕೊರೊನಾ ಲಾಕ್‌ಡೌನ್ ಮುಗಿದ ನಂತರ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.

    Gentelman Movie Re-Releasing After Locdown Ends

    ಕೊರೊನಾ ಕಾರಣಕ್ಕೆ ಜಂಟಲ್‌ಮನ್ ಸಿನಿಮಾ ಹೆಚ್ಚಿನ ಜನಕ್ಕೆ ತಲುಪಲಿಲ್ಲ. ಆದರೆ ಜಂಟಲ್‌ಮನ್ ಸಿನಿಮಾದ ಹಾಡುಗಳು ಯೂಟ್ಯೂಬ್‌ನಲ್ಲಿ ಹಾಗೂ ಟಿಕ್‌ಟಾಕ್‌ ನಲ್ಲಿ ಸೂಪರ್ ಹಿಟ್ ಆಗಿದೆ. ಹಾಗಾಗಿ ಕೊರೊನಾ ಮುಗಿದು ಚಿತ್ರಮಂದಿರಗಳು ಪುನರ್‌ ಪ್ರಾರಂಭ ಆದಾಗ ಸಿನಿಮಾ ವನ್ನು ಮರುಬಿಡುಗಡೆ ಮಾಡುತ್ತೇವೆ ಎಂದಿದೆ ಚಿತ್ರತಂಡ.

    ತಮಿಳು ಪತ್ರಿಕೆಗೆ ಫೋಸು ನೀಡಿರುವ ಕನ್ನಡದ ನಟಿಯನ್ನು ಗುರುತಿಸಬಲ್ಲಿರಾ?ತಮಿಳು ಪತ್ರಿಕೆಗೆ ಫೋಸು ನೀಡಿರುವ ಕನ್ನಡದ ನಟಿಯನ್ನು ಗುರುತಿಸಬಲ್ಲಿರಾ?

    ಚಿತ್ರಮಂದಿರಗಳು ಪುನರ್ ಆರಂಭವಾದಾಗ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ ಆ ಸಮಯದಲ್ಲಿ ನಾವು ಜಂಟಲ್‌ಮನ್ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

    English summary
    Gentelman Kannada movie will re-release after the lockdown ends.
    Thursday, June 4, 2020, 23:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X