twitter
    For Quick Alerts
    ALLOW NOTIFICATIONS  
    For Daily Alerts

    ಮುಂಬೈನಲ್ಲೊಬ್ಬ ರಿಯಲ್ 'ಜಂಟಲ್ ಮ್ಯಾನ್': ದಿನಕ್ಕೆ 20 ಗಂಟೆ ನಿದ್ದೆ!

    |

    Recommended Video

    The Real Hero of 'Gentleman' : THE SLEEPING DISORDER | GENTLEMAN | PRAJWAL DEVRAJ | GURUDESHPANDE

    ಸಾಮಾನ್ಯ ವ್ಯಕ್ತಿಯೊಬ್ಬ ದಿನಕ್ಕೆ ಸುಮಾರು 8 ಗಂಟೆ ನಿದ್ದೆ ಮಾಡ್ತಾರೆ. ಈಗಿನ ಕೆಲಸ, ತಂತ್ರಜ್ಞಾನದ ಒತ್ತಡದಲ್ಲಿ ಅದು ಹೆಚ್ಚಾಗಿರಬಹುದು ಅಥವಾ ಕಡಿಮೆ ಆಗಿರಬಹುದು. ಆದರೆ, ದೊಡ್ಡ ವ್ಯತ್ಯಾಸವೇನು ಆಗಿರಲ್ಲ. ಸ್ಯಾಂಡಲ್ ವುಡ್ನಲ್ಲಿ 'ಜಂಟಲ್ ಮ್ಯಾನ್' ಎಂಬ ಸಿನಿಮಾ ಬರ್ತಿದೆ. ಈ ಚಿತ್ರದ ಕಥೆ ಏನಪ್ಪಾ ಅಂದ್ರೆ ನಾಯಕ ನಟ ದಿನಕ್ಕೆ 18 ಗಂಟೆ ನಿದ್ದೆ ಮಾಡ್ತಾನೆ.

    ದಿನಕ್ಕೆ 18 ಗಂಟೆ ನಿದ್ದೆ ಮಾಡಲು ಸಾಧ್ಯನಾ...ಬಹುಶಃ ಕುಂಭಕರ್ಣ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಾಗಲ್ಲ ಬಿಡಿ ಎಂದು ಅಂದುಕೊಳ್ಳಬಹುದು. ಆದರೆ ಇದು ನಿಜಾ. ದಿನಕ್ಕೆ 18 ಗಂಟೆ ನಿದ್ದೆ ಮಾಡುವ ವ್ಯಕ್ತಿಗಳಿದ್ದಾರೆ. ಇದೊಂದು ಕಾಯಿಲೆ ಅಂತೆ. ಇದೇ ಕಥೆಯನ್ನಿಟ್ಟು ಪ್ರಜ್ವಲ್ ದೇವರಾಜ್ ಸಿನಿಮಾ ಮಾಡಿದ್ದಾರೆ. ಇದೀಗ, ನಿಜ ಜೀವನದಲ್ಲಿ 20 ಗಂಟೆ ನಿದ್ದೆ ಮಾಡುವ ವ್ಯಕ್ತಿಯೊಬ್ಬ ಸಿಕ್ಕಿದ್ದಾನೆ.

    'ರಾಜಾಹುಲಿ' ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ‌ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ನಿಶ್ವಿಕಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೇ ಫೆಬ್ರವರಿ 7ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಅಷ್ಟಕ್ಕೂ, 20 ಗಂಟೆ ನಿದ್ದೆ ಮಾಡುವ ಆ ವ್ಯಕ್ತಿ ಯಾರು? ಮುಂದೆ ಓದಿ...

    20 ಗಂಟೆ ನಿದ್ರಿಸುತ್ತಿದ್ದ ರಾಜೀವ್ ಭಾಸಿನ್

    20 ಗಂಟೆ ನಿದ್ರಿಸುತ್ತಿದ್ದ ರಾಜೀವ್ ಭಾಸಿನ್

    'ಜಂಟಲ್ ಮ್ಯಾನ್‌' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ 18 ಗಂಟೆಗಳ ಕಾಲ ನಿದ್ರಿಸಿದರೆ, ಮುಂಬೈ ಮೂಲದ ರಾಜೀವ್ ಭಾಸಿನ್ ಎಂಬ ವ್ಯಕ್ತಿ ದಿನಕ್ಕೆ 20 ಗಂಟೆ ನಿದ್ದೆ ಮಾಡುತ್ತಿದ್ದರಂತೆ. 43 ವರ್ಷದ ರಾಜೀವ್ ಭಾಸಿನ್ ಅವರು 10 ವರ್ಷಗಳಿಂದ "ಹೈಪರ್ಸೋಮ್ನಿಯಾ" ಖಾಯಿಲೆಯಿಂದ ಬಳಲುತ್ತಿದ್ದಾರೆ. ಮೊದಲ ಬಾರಿ 16ನೇ ವಯಸ್ಸಿನಲ್ಲಿ ಆ ಸಮಸ್ಯೆ ಅವರಿಗೆ ಕಾಡಿತ್ತು.‌ ನಂತರ ಅವರ 33 ನೇ ವಯಸ್ಸಿಗೆ ಮತ್ತೆ ಕಾಡತೊಡಗಿತು.

    ಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆ

    'ಜಂಟಲ್ ಮ್ಯಾನ್' ಸಿನಿಮಾ ಕುರಿತು ತಿಳಿದುಕೊಂಡೆ

    'ಜಂಟಲ್ ಮ್ಯಾನ್' ಸಿನಿಮಾ ಕುರಿತು ತಿಳಿದುಕೊಂಡೆ

    "ಕನ್ನಡ ಚಲನಚಿತ್ರ 'ಜಂಟಲ್ ಮ್ಯಾನ್' ಬಗ್ಗೆ ನಾನು ಸೋಶಿಯಲ್ ಮೀಡಿಯಾದ ಮೂಲಕ ತಿಳಿದುಕೊಂಡೆ. ಸ್ಲೀಪಿಂಗ್ ಡಿಸಾರ್ಡರ್ (ನಿದ್ದೆ ಖಾಯಿಲೆ) ಸುತ್ತಲೂ ಚಲನಚಿತ್ರವೊಂದನ್ನು ನಿರ್ಮಿಸಲಾಗಿರುರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಂತಹ ಕಾಯಿಲೆಗಳಿಂದ ಬಳಲುತ್ತಿರುವ ಬಹಳಷ್ಟು ಜನರಿದ್ದಾರೆ. ಅವರ ದುಃಖಕರ ಸಂಗತಿ ಎಂದರೆ ಇಂತಹ ಕಾಯಿಲೆ ಹೊಂದಿರುವವರಲ್ಲಿ ಹೆಚ್ಚಿನವರಿಗೆ ಆ ಕಾಯಿಲೆ ಬಗ್ಗೆಯೇ ಸರಿಯಾದ ತಿಳುವಳಿಕೆ ಇಲ್ಲ. ಹೀಗಾಗಿ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುವುದಿಲ್ಲ. ಜಂಟಲ್ ಮ್ಯಾನ್ ಚಿತ್ರ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರಿ ಆಗುತ್ತೆಂದು ನನ್ನ ನಂಬಿಕೆ," ಎಂದು ರಾಜೀವ್ ಭಾಸಿನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಬಿಡುಗಡೆಗೂ ಮುಂಚೆ ಪರಭಾಷೆಯಲ್ಲಿ 'ಜಂಟಲ್ ಮ್ಯಾನ್'ಗೆ ಭಾರಿ ಬೇಡಿಕೆಬಿಡುಗಡೆಗೂ ಮುಂಚೆ ಪರಭಾಷೆಯಲ್ಲಿ 'ಜಂಟಲ್ ಮ್ಯಾನ್'ಗೆ ಭಾರಿ ಬೇಡಿಕೆ

    ಕಾಯಿಲೆ ಕುರಿತು ರಾಜೀವ್ ಹೇಳಿದ್ದೇನು?

    ಕಾಯಿಲೆ ಕುರಿತು ರಾಜೀವ್ ಹೇಳಿದ್ದೇನು?

    "ಪ್ರತಿಬಾರಿಯೂ ಕಾಯಿಲೆ ಮರುಕಳಿಸಿದಾಗ 4 to 10 ವಾರಗಳವರೆಗೆ ಇರುತ್ತದೆ. ಸದ್ಯಕ್ಕೆ 16 ವಾರಗಳವರೆಗೆ ನನ್ನನು ಕಾಡುತ್ತಿದೆ. ಒಮ್ಮೊಮ್ಮೆ ಸುಮಾರು 15-16 ಗಂಟೆ ಮಲಗುತ್ತೇನೆ. ಹಿಂದೆ ಸುಮಾರು 20 ಗಂಟೆಗಳ ಕಾಲ ಮಲಗಿದ್ದೆ "ಎಂದು ರಾಜೀವ್ ಹಂಚಿಕೊಂಡಿದ್ದಾರೆ.

    ನಿಶ್ವಿಕಾ ನಾಯ್ಡು ಪ್ರಕಾರ 'ಜಂಟಲ್ ಮ್ಯಾನ್' ಅಂದ್ರೆ ಇವರಂತೆ!ನಿಶ್ವಿಕಾ ನಾಯ್ಡು ಪ್ರಕಾರ 'ಜಂಟಲ್ ಮ್ಯಾನ್' ಅಂದ್ರೆ ಇವರಂತೆ!

    ನಿರ್ದೇಶಕರಿಗೆ ಫೋನ್ ಮಾಡಿದ ರಾಜೀವ್

    ನಿರ್ದೇಶಕರಿಗೆ ಫೋನ್ ಮಾಡಿದ ರಾಜೀವ್

    ರಾಜೀವ್ ಭಾಸಿನ್ ಅವರು ಮುಂಬೈನಿಂದ ದೂರವಾಣಿ ಮೂಲಕ ಗುರುದೇಶಪಾಂಡೆ ಅವರನ್ನು ಸಂಪರ್ಕಿಸಿದ್ದಾರೆ. ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ತಮ್ಮ ಅನುಭವಗಳನ್ನು ಸಹ ಹಂಚಿಕೊಂಡರು. ರಾಜೀವ್ ಅವರು ಜಂಟಲ್ ಮ್ಯಾನ್ ಅನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ ಎಂದು ಗುರು ದೇಶಪಾಂಡೆ ತಿಳಿಸಿದ್ದಾರೆ.

    English summary
    Prajwal Devaraj and nishvika naidu starrer Gentleman movie set to release on february 7th.
    Friday, January 31, 2020, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X