For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆ

  |

  ಡೈನಾಮಿಕ್ ಪ್ರಿನ್ಸ್ ಅಭಿನಯದ 'ಜಂಟಲ್ ಮ್ಯಾನ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಟ್ರೈಲರ್ ಮತ್ತು ಹಾಡುಗಳಿಂದ ಸದ್ದು ಮಾಡ್ತಿರುವ ಜಂಟಲ್ ಮ್ಯಾನ್ ಫೆಬ್ರವರಿ 7 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

  ಪ್ರಜ್ವಲ್ ವೃತ್ತ ಜೀವನದಲ್ಲಿ ಈ ಸಿನಿಮಾ ಬಹಳ ವಿಶೇಷವಾಗಿರಲಿದೆ ಎಂದು ಹೇಳಲಾಗುತ್ತಿದೆ. ಥ್ರಿಲ್ಲಿಂಗ್ ಕಥಾಹಂದರವನ್ನು ಜಂಟಲ್ ಮ್ಯಾನ್ ದೇವರಾಜ್ ಪುತ್ರನಿಗೆ ಹೊಸ ಇಮೇಜ್ ನೀಡಬಹುದು. 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ ಬಳಿಕ ಪ್ರಜ್ವಲ್ ಅಭಿನಯದ ಸಿನಿಮಾ ಬರ್ತಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

  ಅಂದ್ಹಾಗೆ, ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‌ (ನಿದ್ರೆ ಮಾಡುವ ಕಾಯಿಲೆ) ಎಂಬ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಸುತ್ತ ಈ ಕಥೆ ನಡೆಯಲಿದೆ. 18 ಗಂಟೆ ನಿದ್ದೆ ಮಾಡುವುದು ಹಾಗೂ 6 ಗಂಟೆ ಮಾತ್ರ ಎಚ್ಚರ ಆಗಿರುವ ನಾಯಕನ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂಬುದು ರೋಚಕತೆ ಹುಟ್ಟುಹಾಕಿದೆ.

  'ಹ್ಯಾಂಡ್ಸಪ್' ಬಳಿಕ ಮತ್ತೊಂದು ಹಾಡಿನ ಮೂಲಕ ಬಂದ್ರು ವಿಜಯ್ ಪ್ರಕಾಶ್-ಅಜನೀಶ್'ಹ್ಯಾಂಡ್ಸಪ್' ಬಳಿಕ ಮತ್ತೊಂದು ಹಾಡಿನ ಮೂಲಕ ಬಂದ್ರು ವಿಜಯ್ ಪ್ರಕಾಶ್-ಅಜನೀಶ್

  ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಬಿಡುಗಡೆಗೂ ಮುಂಚೆ ಪರಭಾಷೆಯಲ್ಲಿ 'ಜಂಟಲ್ ಮ್ಯಾನ್'ಗೆ ಭಾರಿ ಬೇಡಿಕೆಬಿಡುಗಡೆಗೂ ಮುಂಚೆ ಪರಭಾಷೆಯಲ್ಲಿ 'ಜಂಟಲ್ ಮ್ಯಾನ್'ಗೆ ಭಾರಿ ಬೇಡಿಕೆ

  ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದ್ದು, ಮುರಳಿ ಮಾಸ್ಟರ್ ಮತ್ತು ಗುಂಗುಮ್ ರಾಜು ಅವರ ನೃತ್ಯ ಸಂಯೋಜನೆ ಒಳಗೊಂಡಿದೆ.

  ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಧನಂಜಯ್, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ. ಪ್ರಜ್ವಲ್ ನಟನೆಯ ನಿರೀಕ್ಷೆಯ ಚಿತ್ರಗಳಲ್ಲಿ ಜಂಟಲ್ ಮ್ಯಾನ್ ಪ್ರಮುಖವಾಗಿದ್ದು, ಈ ವರ್ಷದಲ್ಲಿ ತೆರೆಗೆ ಬರಲಿದೆ.

  English summary
  Prajwal Devaraj and nishvika naidu starrer Gentleman movie set to release on february 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X